»   » 'ಕಾಮುಕ' ನಿರ್ದೇಶಕರ ಮುಖವಾಡ ಕಳಚಿದ ಟಿವಿ9

'ಕಾಮುಕ' ನಿರ್ದೇಶಕರ ಮುಖವಾಡ ಕಳಚಿದ ಟಿವಿ9

By: ಉದಯರವಿ
Subscribe to Filmibeat Kannada

ಬಣ್ಣದ ಜಗತ್ತಿನಲ್ಲಿ ಇದೆಲ್ಲಾ ಕಾಮನ್ ಅಂತೀರಾ? ನಿರ್ದೇಶಕರ 'ಬಯಕೆ' ತೀರಿಸಿದರೇನೇ ಇಲ್ಲಿ ಚಾನ್ಸ್ ಸಿಗತ್ತಾ? ಈ ರೀತಿಯ ಮಾತುಗಳು ಆಗಾಗ ಕಿವಿಗೆ ಬೀಳುತ್ತಲೇ ಇರುತ್ತವೆ. ಆದರೆ ಮಂಗಳವಾರ (ಆ.26) ಸಂಜೆ ಟಿವಿ9 ಕನ್ನಡ ಪ್ರಸಾರ ಮಾಡಿದ ಕಾರ್ಯಕ್ರಮ ಇಡೀ ಸ್ಯಾಂಡಲ್ ವುಡ್ ಬೆಚ್ಚಿ ಬೀಳುವಂತೆ ಮಾಡಿದೆ.

ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಸ್ಯಾಂಡಲ್ ವುಡ್ ನ ಕೆಲವು ನಿರ್ದೇಶಕರ ಬಣ್ಣ ಬಯಲಾಗಿದೆ. ಇವರು ನಟಿಯರ ಜೊತೆ ಹಾಸಿಗೆ ಹಂಚಿಕೊಳ್ಳುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ನಿರ್ದೇಶಕರು ಈ ರೀತಿ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

ಸಿನಿಮಾದಲ್ಲಿ ಚಾನ್ಸ್ ಬೇಕಾದರೆ ತಮಗೆ ಸಹಕರಿಸಬೇಕು. ತಮ್ಮ ಬಯಕೆ ತೀರಿಸಬೇಕು ಎಂದು ಇವರು ರಹಸ್ಯ ಕಾರ್ಯಾಚರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ನಿರ್ದೇಶಕರು ಬಹಳ ಹೆಸರು ಮಾಡಿರುವಂತಹರಾಗಿರುವುದು ತಲೆತಗ್ಗಿಸುವಂತಹ ಸಂಗತಿ.

ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿಬಿದ್ದ ನಿರ್ದೇಶಕರು

ಸ್ಯಾಂಡಲ್ ವುಡ್ ನಿರ್ದೇಶಕರಾದ ಓಂ ಪ್ರಕಾಶ್ ರಾವ್, ಗುರು ದೇಶಪಾಂಡೆ, ದಿವಾಕರ್ ಬಾಬು, ಗೋವಿಂದ ರಾಜು ಹಾಗೂ ಫ್ಯಾಷನ್ ಕೋ ಆರ್ಡಿನೇಟರ್ ರವಿ ಬೆಳ್ಳಿಚುಕ್ಕಿ, ಮಂಜ ಎಂಬುವವರು ಸಿಕ್ಕಿಬಿದ್ದಾರೆ.

ಹಲವು ತಾರೆಗಳೊಂದಿಗೆ ಮಲಗಿದ್ದೇನೆ ಎಂದ ಡೈರೆಕ್ಟರ್

ಕುಟುಕು ಕಾರ್ಯಾಚರಣೆ ವೇಳೆ ಓಂ ಪ್ರಕಾಶ್ ರಾವ್ ಅವರು ತಮಗೆ ಅವಕಾಶ ಕೊಡಿ ಎಂದುಕೊಂಡು ತಾರೆಯ ಸೋಗಿನಲ್ಲಿ ಹೋಗಿದ್ದ ಯುವತಿ ಜೊತೆ ಮಾತನಾಡುತ್ತಾ, ತಾನು ಇಂದಿನ ಬಹುತೇಕ ತಾರೆಗಳ ಜೊತೆ ಮಲಗಿರುವುದಾಗಿ ಹೇಳಿದ್ದಾರೆ.

ಸ್ಯಾಂಡಲ್ ವುಡ್ ಚಿತ್ರರಂಗ ತಲೆತಗ್ಗಿಸುವಂತಾಗಿದೆ

ಇನ್ನು 'ರಾಜಾಹುಲಿ' ಚಿತ್ರದ ನಿರ್ದೇಶಕ ಗುರುದೇಶಪಾಂಡೆ ಅವರಂತೂ ಕುಟುಕು ಕಾರ್ಯಾಚರಣೆಯಲ್ಲೇ ಯುವತಿಯನ್ನು ಚುಂಬಿಸಲು ಪ್ರಯತ್ನಿಸಿದರು. ಒಟ್ಟಾರೆಯಾಗಿ ನಿರ್ದೇಶಕರು ಈ ಮಟ್ಟಕ್ಕೆ ಇಳಿದಿರುವುದು ಸ್ಯಾಂಡಲ್ ವುಡ್ ಚಿತ್ರರಂಗ ತಲೆತಗ್ಗಿಸುವಂತಾಗಿದೆ.

ಮಂಚಕ್ಕೆ ಆಹ್ವಾನಿಸುವ ಪ್ರವೃತ್ತಿ ಜೋರಾಗಿ ನಡೆಯುತ್ತಿದೆ

ಈ ಹಿಂದೊಮ್ಮೆ ಉತ್ತರದ ಕಡೆಯ ನಟಿಯೊಬ್ಬರು ಮಾತನಾಡುತ್ತಾ, ದಕ್ಷಿಣದ (ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ) ಚಿತ್ರಗಳಲ್ಲಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಪ್ರವೃತ್ತಿ ಜೋರಾಗಿ ನಡೆಯುತ್ತಿದೆ. ಕಳೆದ ಮೂರು ತಿಂಗಳಲ್ಲಿ ತಮ್ಮನ್ನು ಏನಿಲ್ಲವೆಂದರೂ ಕನ್ನಡ, ತೆಲುಗು, ತಮಿಳಿನ 10 ಮಂದಿ ನಿರ್ಮಾಪಕರು ಮಂಚಕ್ಕೆ ಆಹ್ವಾನಿಸಿದ್ದಾರೆ ಎಂದಿದ್ದರು.

ನಿರ್ದೇಶಕರ ಕಾಮುಕ ಮುಖವಾಡ ಬಯಲು

ನಾಯಕಿ ಸ್ಥಾನ ಬೇಕು ಎಂದರೆ ನಿರ್ಮಾಪಕರ ಲೈಂಗಿಕ ತೃಷೆ ತಣಿಸಬೇಕು. ಇಲ್ಲದಿದ್ದರೆ ಅವಕಾಶ ಸಿಗುವುದಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಆಗ ಯಾರೂ ಅದನ್ನು ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ. ಈಗ ಅವರ ಮಾತು ಅಕ್ಷರಶಃ ನಿಜವಾಗಿದೆ.

English summary
A sting operation by TV9 Kannada news channel rocked Sandalwood. Some of the industry's most well-known names were part of a sleazy sex scandal sting operation that played out on television.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada