For Quick Alerts
  ALLOW NOTIFICATIONS  
  For Daily Alerts

  'ಸೂಜಿದಾರ' ಬಳಿಕ ನಟಿ ಹರಿಪ್ರಿಯಾ ಮತ್ತೊಂದು ಕಿರಿಕ್

  |
  ನಟಿ ಹರಿಪ್ರಿಯಾ ಮತ್ತೊಂದು ಕಿರಿಕ್ , ನಿರ್ದೇಶಕರು ಗರಂ

  ಸ್ಯಾಂಡಲ್ ವುಡ್ ನ ಖ್ಯಾತ ನಟಿ ಹರಿಪ್ರಿಯಾ ವಿರುದ್ಧ ಮತ್ತೊಂದು ದೂರು ಕೇಳಿ ಬರುತ್ತಿದೆ. ಇತ್ತೀಚಿಗಷ್ಟೆ ಸೂಜಿದಾರ ಚಿತ್ರದ ಮೂಲಕ ಕಿರಿಕ್ ಮಾಡಿಕೊಂಡಿದ್ದ ನಟಿ ಹರಿಪ್ರಿಯಾ ವಿರುದ್ಧ ಈಗ ಮತ್ತೊಂದು ವಿವಾದ ಕೇಳಿ ಬರುತ್ತಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಹರಿಪ್ರಿಯಾ ವಿರುದ್ಧ ಕನ್ನಡ್ ಗೊತ್ತಿಲ್ಲ ಚಿತ್ರದ ನಿರ್ದೇಶಕ ಮಯೂರ್ ರಾಘವೇಂದ್ರ ಅಸಮಾಧಾನ ಹೊರಹಾಕಿದ್ದಾರೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿರುವ ನಿರ್ದೇಶಕ ಮಯೂರ್, ಚಿತ್ರದ ನಾಯಕಿ ಸರಿಯಾಗಿ ಪ್ರಚಾರಕ್ಕೆ ಬಂದಿಲ್ಲ ಎಂದು ದೂರಿದ್ದಾರೆ. ಕನ್ನಡ್ ಗೊತ್ತಿಲ್ಲ ಸಿನಿಮಾ ನವೆಂಬರ್ 22ಕ್ಕೆ ರಿಲೀಸ್ ಆಗಿದೆ. 25 ದಿನಗಳ ಮೇಲಾಗಿದೆ. ಚಿತ್ರದ ಮುಖ್ಯ ಪಾತ್ರದಲ್ಲಿ ನಟಿ ಹರಿಪ್ರಿಯಾ ಮತ್ತು ಸುಧಾರಾಣಿ ಕಾಣಿಸಿಕೊಂಡಿದ್ದರು. ಮಯೂರ ರಾಘವೇಂದ್ರ ನಿರ್ದೇಶನದ ಮೊದಲ ಸಿನಿಮಾವಿದು. ನಾಯಕಿ ಬಗ್ಗೆ ಮಯೂರ್ ಹೇಳಿದ್ದೇನು?

  'ಬಿಗ್ ಬಾಸ್' ಸ್ಪರ್ಧಿ ಚೈತ್ರ ಕೋಟೂರು ಬಗ್ಗೆ ಹರಿಪ್ರಿಯಾ ಹೀಗ್ಯಾಕೆ ಹೇಳಿದ್ರು.?'ಬಿಗ್ ಬಾಸ್' ಸ್ಪರ್ಧಿ ಚೈತ್ರ ಕೋಟೂರು ಬಗ್ಗೆ ಹರಿಪ್ರಿಯಾ ಹೀಗ್ಯಾಕೆ ಹೇಳಿದ್ರು.?

  ನಿರ್ದೇಶಕರ ಬೇಸರ

  ನಿರ್ದೇಶಕರ ಬೇಸರ

  ಚಿತ್ರದಲ್ಲಿ ಸ್ಟಾರ್ ನಟಿಯರಾಗಿ ಕಾಣಿಸಿಕೊಂಡಿದ್ದು ಅಂದರೆ ಹರಿಪ್ರಿಯಾ ಮತ್ತು ಸುಧಾರಾಣಿ. ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ನಾಯಕಿ ಸರಿಯಾಗಿ ಸಿನಿಮಾದ ಪ್ರಚಾರಕ್ಕೆ ಬಂದಿಲ್ಲ ಎಂಬುದು ನಿರ್ದೇಶಕರ ಬೇಸರ. ದೊಡ್ಡ ಸಿನಿಮಾಗಳ ಪ್ರಚಾರಕ್ಕೆ ಹೋಗುವ ಹರಿಪ್ರಿಯಾ ಹೊಸಬರ ಸಿನಿಮಾಗಳ ಪ್ರಚಾರಕ್ಕೆ ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಅನೇಕರ ಪ್ರಶ್ನೆ. ಇದೆ ಸಮಯದಲ್ಲಿ ರಿಲೀಸ್ ಆದ ಕಥಾ ಸಂಗಮ ಚಿತ್ರದ ಪ್ರಮೋಷನ್ ನಲ್ಲಿ ಭಾಗಿಯಾಗುತ್ತಾರೆ. ಆದರೆ ಕನ್ನಡ್ ಗೊತ್ತಿಲ್ಲ ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ.

  ನಿರ್ದೇಶಕರ ಪೋಸ್ಟ್ ನಲ್ಲಿ ಏನಿದೆ

  ನಿರ್ದೇಶಕರ ಪೋಸ್ಟ್ ನಲ್ಲಿ ಏನಿದೆ

  ಮಯೂರ್ ಹೇಳುವ ಪ್ರಕಾರ "ನನ್ನ ಚಿತ್ರದ ಲೀಡ್ ಕಲಾವಿದರು ಪ್ರಚಾರ ಮಾಡದಿದ್ದರು. ಉಳಿದ ನಟರು ನಿರ್ಮಾಪಕರು ಮತ್ತು ತಂತ್ರಜ್ಞರು ಮೊದಲ ದಿನದಿಂದ ನನ್ನ ಜೊತೆ ನಿಂತು ಸಹಾಯ ಮಾಡಿದ್ದಾರೆ. ನಮ್ಮ ಸಿನಿಮಾ 25ನೇ ದಿನದತ್ತ ಮುನ್ನುಗ್ಗುತ್ತಿದೆ. ನನ್ನ ಜೊತೆ ನಿಂತ ಎಲ್ಲರಿಗೂ ಧನ್ಯವಾದ ಹೇಳುತ್ತೀನಿ. ಜೊತೆಗೆ ಪ್ರೇಕ್ಷಕರಿಗು ಧನ್ಯವಾದ ತಿಳಿಸುತ್ತೀನಿ"ಎಂದು ಬರೆದುಕೊಂಡಿದ್ದಾರೆ.

  ಸೂಜಿದಾರ ವಿವಾದ

  ಸೂಜಿದಾರ ವಿವಾದ

  ಹರಿಪ್ರಿಯಾ ವಿರುದ್ಧ ಈ ರೀತಿಯ ದೂರು ಕೇಳಿ ಬರುತ್ತಿರುವುದು ಇದೆ ಮೊದಲೇನಲ್ಲ. ಈ ಮೊದಲು ಸೂಜಿದಾರ ಚಿತ್ರದ ರಿಲೀಸ್ ಸಮಯದಲ್ಲು ವಿವಾದ ಮಾಡಿಕೊಂಡಿದ್ದರು. ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಇನ್ನೊಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದ ಚೈತ್ರಾ ಕೋಟೂರ್ (ಈಗಿನ ಬಿಗ್ ಬಾಸ್ ಸ್ಪರ್ಧಿ) ವಿರುದ್ಧ ಗುದ್ದಾಟ ನಡೆದಿತ್ತು.

  ಚಿತ್ರದಲ್ಲಿ ಪಾತ್ರ ಕಮ್ಮಿ ಎಂದು ಹರಿಪ್ರಿಯಾ ಅಸಮಾಧಾನ

  ಚಿತ್ರದಲ್ಲಿ ಪಾತ್ರ ಕಮ್ಮಿ ಎಂದು ಹರಿಪ್ರಿಯಾ ಅಸಮಾಧಾನ

  ಈ ಚಿತ್ರದಲ್ಲಿ ಚೈತ್ರಾ ಪಾತ್ರವನ್ನು ಹೆಚ್ಚಿಸಿ, ನನ್ನ ಪಾತ್ರವನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಿದ್ದಾರೆ'' ಎಂದು ಹರಿಪ್ರಿಯಾ ನಿರ್ದೇಶಕರ ವಿರುದ್ಧ ಆರೋಪಿಸಿದರು. ಬಳಿಕ ಚೈತ್ರಾ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದ ಚೈತ್ರಾ ಪ್ರಚಾರಕ್ಕೆ ಬಂದರೆ ನಾನು ಪ್ರಚಾರಕ್ಕೆ ಬರುವುದಿಲ್ಲ ಎಂದು ಕಂಡೀಷನ್ ಹಾಕಿದ್ದರು ಎನ್ನುವ ಮಾತು ಹರಿಪ್ರಿಯಾ ವಿರುದ್ಧ ಕೇಳಿ ಬಂದಿತ್ತು.

  ಸೂಜಿದಾರ ಚಿತ್ರದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ನಟಿ ಹರಿಪ್ರಿಯಾಸೂಜಿದಾರ ಚಿತ್ರದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ನಟಿ ಹರಿಪ್ರಿಯಾ

  ಫಿಲ್ಮಿ ಬೀಟ್ ಕನ್ನಡಕ್ಕೆ ಮಯೂರ್ ಪ್ರತಿಕ್ರಿಯೆ

  ಫಿಲ್ಮಿ ಬೀಟ್ ಕನ್ನಡಕ್ಕೆ ಮಯೂರ್ ಪ್ರತಿಕ್ರಿಯೆ

  ಈ ಬಗ್ಗೆ ಫಿಲ್ಮಿ ಬೀಟ್ ಕನ್ನಡ ಟೀಂ ಜೊತೆ ಮಾತನಾಡಿದ ಮಯೂರ್ " ಸಿನಿಮಾ ರಿಲೀಸ್ ಆದಾಗಿನಿಂದನೂ ಪ್ರಚಾರಕ್ಕೆ ಬಂದಿಲ್ಲ. ಯಾಕೆ ಬರ್ತಿಲ್ಲ ಎನ್ನುವುದು ಗೊತ್ತಿಲ್ಲ. ಟ್ರೈಲರ್ ರಿಲೀಸ್ ಗೆ ಕೊನೆಯದಾಗಿ ಬಂದಿದ್ದರು. ನಾವು ಫೋನ್ ಮಾಡಿದ್ದರು ಕರೆ ಸ್ವೀಕರಿಸಿತ್ತಿಲ್ಲ. ಬೇರೆ ಸಿನಿಮಾಗಳ ಪ್ರಚಾರಕ್ಕೆ ಹೊಗುತ್ತಾರೆ. ಆದರೆ ನಮ್ಮ ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ" ಎಂದು ಬೇಸರ ವ್ಯಕ್ತ ಪಡಿಸಿದರು.

  English summary
  Kannada Gottilla fame director Mayura Raghavendra upset but actress Haripriya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X