twitter
    For Quick Alerts
    ALLOW NOTIFICATIONS  
    For Daily Alerts

    ದಾಖಲೆ ಬರೆದ 'ರಂಗಿತರಂಗ'ಕ್ಕೆ 7 ವರ್ಷ!

    By Bhagya.s
    |

    ಕನ್ನಡ ಸಿನಿಮಾರಂಗದಲ್ಲಿ ಒಂದು ರೀತಿಯ ಟ್ರೆಂಡ್ ಬ್ರೇಕ್ ಮಾಡಿದ ಸಿನಿಮಾಗಳು ಸೂಪರ್ ಹಿಟ್ ಲಿಸ್ಟ್ ಸೇರಿವೆ. ಈ ಸಿನಿಮಾಗಳಲ್ಲಿ ಕನ್ನಡದ ರಂಗಿತರಂಗ ಕೂಡ ಒಂದು. ರಂಗಿತರಂಗ ಸಿನಿಮಾ ಯಾರೂ ಊಹಿಸದಂತೆ ದಾಖಲೆ ಮಾಡಿತು. 'ಬಾಹುಬಲಿ' ಸಿನಿಮಾಗೆ ಸೆಡ್ಡು ಹೊಡೆದ ಈ ಚಿತ್ರ ಕನ್ನಡಿಗರ ಪಾಲಿಗೆ ಎಂದಿಗೂ ಹೆಮ್ಮೆ.

    'ರಂಗಿತರಂಗ' ಸಿನಿಮಾ ಮಿಸ್ಟ್ರಿ ಎಳೆಯನ್ನು ಇಟ್ಟುಕೊಂಡು ಬಂದು, ತೆರೆಯ ಮೇಲೆ ಜನಕ್ಕೆ ಸರ್ಪ್ರೈಸ್ ಕೊಟ್ಟ ಸಿನಿಮಾ. ಉತ್ತಮ ಸಿನಿಮಾ ಕೊಟ್ಟರೂ 'ರಂಗಿತರಂಗ' ಟೀಂ ಹೊಸದು. ಈ ಟೀಂ ಮೊದಲು ಮಾಡಿದ ಸಿನಿಮಾವೇ ಸಾಕಷ್ಟು ಸದ್ದು ಮಾಡಿತು. ದಾಖಲೆಯನ್ನು ಬರೆಯಿತು.

    ಸದ್ಯ ಈ ಸಿನಿಮಾ ರಿಲೀಸ್ ಆಗಿ 7 ವರ್ಷಗಳು ಕಳೆದಿವೆ. ಹಾಗಾಗಿ ಈ ಖುಷಿಯನ್ನು ಚಿತ್ರದ ನಿರ್ದೇಶಕ ಅನುಪ್ ಭಂಡಾರಿ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಮೂಲಕವೇ ನಿರ್ದೇಶ ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ಸಿನಿಮಾರಂಗದಲ್ಲಿ ತಮ್ಮ ಜರ್ನಿ ಶುರು ಮಾಡಿದರು.

    2015ರಲ್ಲಿ ಬಂದ ರಂಗಿತರಂಗ!

    2015ರಲ್ಲಿ ಬಂದ ರಂಗಿತರಂಗ!

    'ರಂಗಿತರಂಗ' ಸಿನಿಮಾ ತೆರೆಕಂಡು 7 ವರ್ಷ ಕಳೆದಿದೆ. 2015ರಲ್ಲಿ 'ರಂಗಿತರಂಗ' ಸಿನಿಮಾ ರಿಲೀಸ್ ಆಯ್ತು. ಈ ಸಿನಿಮಾ ರಿಲೀಸ್ ಆದಾಗ 'ಬಾಹುಬಲಿ' ಸಿನಿಮಾ ಕೂಡ ತೆರೆಗೆ ಬಂದಿತ್ತು. 'ಬಾಹುಬಲಿ' ಚಿತ್ರದ ಅಬ್ಬರದ ನಡುವೆಯೂ ಈ ಸಿನಿಮಾ ಅಬ್ಬರಿಸಿತು. ಜೊತೆಗೆ ಆಗ ಕನ್ನಡದಲ್ಲಿ ಬರುತ್ತಿದ್ದ ಸಿನಿಮಾಗಳ ಮಾದರಿಯನ್ನು ಹೊಡೆದು ಹಾಕಿತು. ರಂಗಿತರಂಗದ ಪರಿಗೆ ಜನ ಮನಸೋತಿದ್ದರು.

    ಅನೂಪ್ ಭಂಡಾರಿ ಟ್ವೀಟ್!

    ಈ ಸಿನಿಮಾ ಮಾಡಿ ಯಶಸ್ಸು ಕಂಡ ನಿರ್ದೇಶ ಅನೂಪ್ ಭಂಡಾರಿ ತಮ್ಮ ಈ ಚಿತ್ರವನ್ನು ನೆನೆದು ಟ್ವೀಟ್ ಮಾಡಿದ್ದಾರೆ. " 7 ವರ್ಷಗಳ ಹಿಂದೆ ನೀವು ನಮ್ಮ ಮೇಲೆ ಧಾರೆಯೆರೆದ ಪ್ರೀತಿಯಿಂದಾಗಿ ಇಂದು ನಾನು ಹೀಗೆ ಇದ್ದೇನೆ." ಎಂದು ಬರೆದುಕೊಂಡಿದ್ದಾರೆ. "ಇದೆಲ್ಲವೂ ಶುರುವಾಗಿದ್ದು 7 ವರ್ಷದ ಹಿಂದೆ, ಇದೇ ದಿನ. ಬದುಕಿನ ಅಲೆ...ಕೆಳಗೆ ಬಿದ್ದಾಗ ಭಂಗ, ಮನಸ್ಸಲ್ಲಿರೊ ನೋವೆಲ್ಲಾ ಬಹಿರಂಗ, ಮೇಲೆದ್ದಾಗ ಉತ್ತುಂಗ, ನಗುವಿನ ಸಂಗ, ಜೀವನ ಸಾವಿರ ಬಣ್ಣ ತುಂಬಿರೋ, ರಂಗಿತರಂಗ" ಎಂದು ಬರೆದುಕೊಂಡು ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ.

    ಅನೂಪ್, ನಿರೂಪ್ ಸಿನಿಮಾ ಜರ್ನಿ ಶುರು!

    ಅನೂಪ್, ನಿರೂಪ್ ಸಿನಿಮಾ ಜರ್ನಿ ಶುರು!

    'ರಂಗಿತರಂಗ' ಸಿನಿಮಾ ಕೇವಲ ಒಂದು ಸಿನಿಮಾ ಆಗಿ ದಾಖಲೆ ಮಾಡುವುದು ಮಾತ್ರ ಅಲ್ಲ. ಈ ಚಿತ್ರದಿಂದ ಸಿನಿಮಾರಂಗಕ್ಕೆ ಹಲವು ಪ್ರತಿಭೆಗಳ ಪರಿಚಯವಾಗಿಯಿತು. ಅನೂಪ್ ಭಂಡಾರಿ ಅಂತಹ ನಿರ್ದೇಶಕ, ನಿರೂಪ್ ಭಂಡಾರಿ ಅಂತಹ ನಾಯಕ ಸಿನಿಮಾರಂಗಕ್ಕೆ ಸಿಕ್ಕರು. ಜೊತೆಗೆ ಈ ಸಿನಿಮಾ ಒಂದು ಹೊಸ ಟ್ರೆಂಡ್ ಹುಟ್ಟು ಹಾಕಲು ದಾರಿಯಾಯಿತು. ಇನ್ನು ಚಿತ್ರದಲ್ಲಿ ನಟಿಸಿದ ರಾಧಿಕಾ ಮತ್ತು ಅವಂತಿಕ ಶೆಟ್ಟಿಗೂ ಉತ್ತಮ ಬ್ರೇಕ್ ಸಿಕ್ಕಿತು.

    43 ಕೋಟಿ ರೂ ಗಳಿಕೆ ಕಂಡ ಸಿನಿಮಾ!

    43 ಕೋಟಿ ರೂ ಗಳಿಕೆ ಕಂಡ ಸಿನಿಮಾ!

    'ರಂಗಿತರಂಗ' ಸಿನಿಮಾ ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ದೊಡ್ಡ ಮಟ್ಟದಲ್ಲಿ ಗಳಿಕೆ ಕಂಡ ಸಿನಿಮಾ. ಹಾಗಾಗಿ ಈ ಚಿತ್ರ ವಿಶೆಷವಾದ ದಾಖಲೆ ಮಾಡಿತು. ವಿಕಿಪೀಡಿಯಾದಲ್ಲಿ ನಮೂದಿಸಿರುವ ಪ್ರಕಾರ ಸಿನಿಮಾದ ಬಜೆಟ್ 1.5 ಕೋಟಿ. ಆದರೆ ಈ ಗಳಿಕೆ ಕಂಡಿದ್ದು 43 ಕೋಟಿ ರೂ. ಹಾಗಾಗಿ ಒಟ್ಟಾರೆ ಈ ಚಿತ್ರದ ಲಾಭ ಸುಮಾರು 41.5 ಕೋಟಿ ಎನ್ನಬಹುದು.

    English summary
    Kannada Hit Film Rangitaranga Complete 7 Years, Director Anup Bhandari Tweet About It, Know More
    Monday, July 4, 2022, 10:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X