»   » ಕನ್ನಡದ ಮೊದಲ ಹಾರರ್ ತ್ರಿಡಿ 'ಆಕ್ರಮಣ' ತೆರೆಗೆ

ಕನ್ನಡದ ಮೊದಲ ಹಾರರ್ ತ್ರಿಡಿ 'ಆಕ್ರಮಣ' ತೆರೆಗೆ

Posted By:
Subscribe to Filmibeat Kannada

ಕನ್ನಡದ ಮೊದಲ ಹಾರರ್ ತ್ರಿಡಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿತ್ರ ಆಕ್ರಮಣ. ಮೈಸೂರಿನ ಯುವಕ ಪ್ರಶಾಂತ್ ಕುಮಾರ್ ಎನ್ ಅವರ ಹಲವು ವರ್ಷಗಳ ಪ್ರಯತ್ನದ ಫಲ ಈ ಚಿತ್ರ. ಪ್ರಶಾಂತ್ ಕುಮಾರ್ ಅವರ ಚೊಚ್ಚಲ ನಿರ್ದೇಶನದಲ್ಲಿ '3ಡಿ ಹಾಗೂ 2ಡಿ' ತಂತ್ರಜ್ಞಾನದ ಸಿನಿಮಾ ಈ ವಾರ (ಜು.11) ಬಿಡುಗಡೆ ಆಗುತ್ತಿದೆ.

ಎ ಒನ್ ಸಿನಿಮಾಸ್ ಅಡಿಯಲ್ಲಿ ವಿಮಲ್ ಜೈನ್, ಸುರೇಶ್ ಜೈನ್, ಪರಮೇಶ್ ಜೊತೆ ಸೇರಿ ಪ್ರಶಾಂತ್ ಕುಮಾರ್ ಎನ್ ನಿರ್ಮಾಣ ಮಾಡಿದ್ದಾರೆ. 'ಆಕ್ರಮಣ' ಮೈಸೂರಿನಲ್ಲಿ ಪ್ರಾರಂಭವಾಗಿ ಮೈಸೂರಿನಲ್ಲೆ ಸಂಪೂರ್ಣಗೊಳಿಸಿದ ಚಿತ್ರ.

Aakramana movie poster

ರತೀಶ್ ಕುಮಾರ್ ಅವರ 3ಡಿ ಹಾಗೂ 2ಡಿ ತಂತ್ರಜ್ಞಾನದ ಛಾಯಾಗ್ರಹಣದಲ್ಲಿ ಮೈಸೂರು, ಮಡಿಕೇರಿ, ಕಾಸರಗೊಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚೆನ್ನೈನಲ್ಲಿ ಬಾಲ ಅವರು 3ಡಿ ಗಾಗಿ, ಬೆಂಗಳೂರಿನಲ್ಲಿ ಜೀವನ್ ಅವರು 2ಡಿ ತಂತ್ರಜ್ಞಾನದ ಸಂಕಲನ ಮಾಡಿದ್ದಾರೆ.

ಕಾರ್ಯಕಾರಿ ನಿರ್ಮಾಪಕರಾಗಿ ಸುನಿಲ್ ಆರ್, ಸತೀಶ್ ಆರ್ಯನ್ ಅವರ ಸಂಗೀತ, ಆಸ್ಕರ್ ಅಭಿಶೇಖ್, ಲಲಿತ ರಾಜ್ ವಿನಾಯಕ್, ಆದರ್ಶ್ ಎಂ ಎನ್ ಸಂಭಾಷಣೆ ಬರೆದಿದ್ದಾರೆ, ಶಂಕರ್, ಮಂಜುನಾಥ ರಾವ್, ಆದರ್ಶ್, ಸತೀಶ್ ಆರ್ಯನ್ ಆವರ ಗೀತ ಸಾಹಿತ್ಯವಿದೆ.

ದೀಪಕ್ ಅವರ ನೃತ್ಯ ನಿರ್ದೇಶನ, ಕೆ ಡಿ ವೆಂಕಟೇಶ್ ಅಂಡ್ ರಾಜೇಶ್ ಕಣ್ಣನ್ ಅವರ ಸಾಹಸ , ಸಹಾಯಕ ನಿರ್ದೇಶಕರಾಗಿ ಆದರ್ಶ, ಲಲಿತ ರಾಜ್ ವಿನಾಯಕ್, ಸಂಜೋತ ಅವರ ಸಹಾಯಕ ನಿರ್ದೇಶನ ಇದೆ.

ತಾರಾಗಣದಲ್ಲಿ ಖಾಕಿ ತೊಟ್ಟ ಅಧಿಕಾರಿಯಾಗಿ ರಘು ಮುಖರ್ಜಿ, ಡೈಸಿ ಶಾ, ಶಿಲ್ಪಿ ಶರ್ಮ, ಮಕರಂದ ದೇಶ್ ಪಾಂಡೆ, ಅವಿನಾಶ್, ಸಿದ್ಲಿಂಗು ಶ್ರೀಧರ್, ಸುದರ್ಶನ್, ರಮೇಶ್ ಪಂಡಿತ್, ಡ್ಯಾನಿ ಕುಟ್ಟಪ್ಪ, ಮಾರ್ಕೊ, ಪ್ರಕಾಶ್ ಶೆಣೈ, ಕಿಶೋರಿ ಬಲ್ಲಾಳ್ ಹಾಗೂ ಇತರರು ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Kannada film Aakramana (Attack) is a first 3D horror movie in Kannada releases on 11th July all over Karnataka. The film directed by Prashanth Kumar N and produced by Trio Suresh Jain, Vimal Jain and director himself. Raghu Mukherjee, Daisy Shah, Avinash, Makarandh Deshpande, Danny are in cast.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada