For Quick Alerts
  ALLOW NOTIFICATIONS  
  For Daily Alerts

  ಯಾರೇ ನೀ ಮೋಹಿನಿಯಾ ಗಂಡಸರಿಗೆ ಮಾತ್ರವಂತೆ

  By ರವಿಕಿಶೋರ್
  |

  ಈ ಚಿತ್ರದ ಹೆಸರೇ ಹೇಳುವಂತೆ ಇದೊಂದು ಪಕ್ಕಾ ಹಾರರ್ ಪ್ರಧಾನ ಚಿತ್ರ. ಕಾಶಿನಾಥ್ ಅವರ '12 AM, ಮಧ್ಯರಾತ್ರಿ' ನೋಡಿದ ಬಳಿಕ ಈಗ ಕನ್ನಡ ಚಿತ್ರರಸಿಕರ ಮುಂದೆ ವಿಭಿನ್ನ ಚಿತ್ರ 'ಯಾರೇ ನೀ ಮೋಹಿನಿಯಾ' ಬರುತ್ತಿದೆ. ಸೆಪ್ಟೆಂಬರ್ 7ರಂದು ಈ ಚಿತ್ರ ರಾಜ್ಯದ ಎರಡು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

  "ಟೂ ಹಾಟ್ ಅಂಡ್ ಸೆಕ್ಸಿ" ಎಂಬುದು ಚಿತ್ರದ ಟ್ಯಾಗ್ ಲೈನ್. ಅಂದರೆ ಹಾರರ್ ಜೊತೆಗೆ ಒಂದಿಷ್ಟು ಹಾಟ್, ಮಸಾಲೆ ಅಂಶಗಳು ಇರುತ್ತವೆ ಎಂದಾಯಿತು. ಪತ್ರಿಕೆಗಳಲ್ಲಿ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ.

  "ಮೀಸೆ ಹೊತ್ತ ಗಂಡಸರಿಗೆ ಮಾತ್ರ" ಈ ಚಿತ್ರದ ಎಂಬ ಜಾಹೀರಾತು ಎಲ್ಲೆಡೆ ಕಾಣಿಸುತ್ತಿದೆ. ಅಂದಹಾಗೆ ಮಹಿಳೆಯರು ಈ ಚಿತ್ರವನ್ನು ನೋಡಬಹುದೋ ಬೇಡವೋ ಎಂಬುದನ್ನು ಚಿತ್ರತಂಡವೇ ತಿಳಿಸಬೇಕು.

  ನವಭಾರತಿ ಎಂಬ ಚಿತ್ರದ ನಿರ್ದೇಶಕ ಗಣೇಶ್ ಆಕ್ಷನ್ ಕಟ್ ಹೇಳಿರುವ ಚಿತ್ರ. ಸಮರ್ಥ್ ಕ್ರಿಯೇಷನ್ಸ್ ಲಾಂಛನದಲ್ಲಿ ಗೋಪಿ ಶಾಸ್ತ್ರಿ ನಿರ್ಮಿಸಿದ್ದಾರೆ. ಸದ್ದುಗದ್ದಲವಿಲ್ಲದಂತೆ ಬಿಡುಗಡೆಗೆ ಅಣಿಯಾಗಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಲಿ ಯು/ಎ ಸರ್ಟಿಫಿಕೇಟ್ ನೀಡಿದೆ.

  ಈ ಚಿತ್ರ ಬಿಡುಗಡೆಯಾಗುತ್ತಿರುವುದು ಕೇವಲ ಎರಡೇ ಎರಡು ಚಿತ್ರಮಂದಿರಗಳಲ್ಲಿ. ಬೆಂಗಳೂರಿನ ಮೇನಕ ಹಾಗೂ ಮಂಗಳೂರಿನ ರಮಾಕಾಂತಿ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು ಹಾಗೂ ಸಂಗೀತ ಗೋಪಿ.

  ಛಾಯಾಗ್ರಹಣ ನಾರಾಯಣ್, ಸಂಕಲನ ರಾಜಶೇಖರ ರೆಡ್ಡಿ. ಪಾತ್ರವರ್ಗದಲ್ಲಿ ಶಂಕರ್ ಅಶ್ವತ್ಥ್, ಆಕಾಶ್, ಶಾಂತಲಾ, ಸ್ಕಂದ ಶಂಕರ್ ಅಶ್ವತ್ಥ್ (ಶಂಕರ್ ಅಶ್ವತ್ಥ್ ಅವರ ಪುತ್ರ) ಉಲ್ಲಾಸಿನಿ, ಆಶಾ ಮುಂತಾದವರಿದ್ದಾರೆ. (ಏಜೆನ್ಸೀಸ್)

  English summary
  A tale of spine-chilling horror, innocent love and never-ending lust film Yaare Ni Mohiniya releasing all over Karnataka on 7th of September 2012. Don't miss it!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X