twitter
    For Quick Alerts
    ALLOW NOTIFICATIONS  
    For Daily Alerts

    ವಯಸ್ಕರ ಚಿತ್ರ ನಿರ್ಮಾಣ:ದಾಖಲೆಯತ್ತ ಕನ್ನಡ ಚಿತ್ರರಂಗ

    |

    ಎರಡು ದಿನಗಳ ಹಿಂದೆ ರಾಜ್ಯದ ಉಚ್ಚ ನ್ಯಾಯಾಲಯ ಕನ್ನಡ ಚಿತ್ರರಂಗದ ಗುಣಮಟ್ಟದ ಬಗ್ಗೆ ತರಾಟೆಗೆ ತೆಗೆದುಕೊಂಡಿತ್ತು. ಈಗ ಅಂಕಿಅಂಶದ ಪ್ರಕಾರ ವಯಸ್ಕರ ಚಿತ್ರ ನಿರ್ಮಾಣದಲ್ಲಿ ಕನ್ನಡ ಚಿತ್ರರಂಗ ದೇಶದಲ್ಲೇ ಮೊದಲ ಸ್ಥಾನದತ್ತ ದಾಪುಗಾಲು ಹಾಕುತ್ತಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.

    ಖ್ಯಾತ ಸಮಾಜಶಾಸ್ತ್ರ ತಜ್ಞ ಪ್ರೊ.ಜಿ ಕೆ ಕಾರಂತ್ ನಡೆಸಿದ ಅಧ್ಯಯನದ ಪ್ರಕಾರ, ಈಗ ರಾಷ್ಟ್ರೀಯ ಚಿತ್ರ ನಿರ್ಮಾಣದ ಸರಾಸರಿಯಲ್ಲಿ ಕನ್ನಡ ಚಿತ್ರರಂಗ 'ಎ' ಸರ್ಟಿಫಿಕೇಟ್ ಚಿತ್ರ ನಿರ್ಮಿಸುವುದಲ್ಲಿ ಇತರ ಭಾಷೆಗಳಿಗಿಂತ ಮುಂದಿದೆ.

    ಅಧ್ಯಯನದ ಪ್ರಕಾರ ಚಿತ್ರದ ಸನ್ನಿವೇಶ, ಡೈಲಾಗುಗಳಿಗೆ ಸೆನ್ಸಾರ್ ಕತ್ತರಿ ಬೀಳುವುದರಲ್ಲೂ ಕನ್ನಡ ಚಿತ್ರಗಳು ಇತರ ಭಾಷೆಗಳ ಚಿತ್ರಗಳಿಗಿಂತ ಮಂಚೂಣಿಯಲ್ಲಿದೆ. ಇನ್ನೊಂದು ಗಮನಿಸ ಬೇಕಾದ ವಿಚಾರವೆಂದರೆ ಬೇರೆ ಭಾಷೆಯ ಚಿತ್ರಗಳಲ್ಲಿ ಎ ಸರ್ಟಿಫಿಕೇಟ್ ಚಿತ್ರ ಕಮ್ಮಿ ನಿರ್ಮಾಣವಾಗುತ್ತಿದ್ದರೆ ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ಎ ಚಿತ್ರಗಳು ನಿರ್ಮಾಣವಾಗುತ್ತಿದೆ.

    ಇನ್ನೂ ಕೆಲವು ಸಾರಸ್ಯಕರ ಅಂಶಗಳು ಸ್ಲೈಡಿನಲ್ಲಿ..

    ಎ ಚಿತ್ರದಲ್ಲಿ ಕನ್ನಡ ಚಿತ್ರಗಳು ಮುಂದು

    ಎ ಚಿತ್ರದಲ್ಲಿ ಕನ್ನಡ ಚಿತ್ರಗಳು ಮುಂದು

    ಎಲ್ಲರಿಗೂ ತಿಳಿದಿರುವ ಹಾಗೆ ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಿಸಿ U (unrestricted exhibition), U/A (unrestricted wih adult content) ಮತ್ತು A (adult only) ಹೀಗೆ ಮೂರರಲ್ಲಿ ಯಾವುದಾದರೂ ಒಂದು ಸರ್ಟಿಫಿಕೇಟ್ ಅನ್ನು ಚಿತ್ರಕ್ಕೆ ನೀಡುತ್ತದೆ. 2005ರಿಂದ 2010ರ ವರೆಗಿನ ಅವಧಿಯಲ್ಲಿ 'U' ಸರ್ಟಿಫಿಕೇಟ್ ಪಡೆದ ಚಿತ್ರಗಳ ಸಂಖ್ಯೆ ಶೇ.61.7 ರಿಂದ
    ಶೇ. 49.7ಕ್ಕೆ ಇಳಿದಿದೆ.

    ಸೆನ್ಸಾರ್ ಸರ್ಟಿಫಿಕೇಟ್

    ಸೆನ್ಸಾರ್ ಸರ್ಟಿಫಿಕೇಟ್

    ಎ ಸರ್ಟಿಫಿಕೇಟ್ ಚಿತ್ರದ ಪ್ರಸಾರದ ಹಕ್ಕನ್ನು ಟಿವಿ ವಾಹಿನಿಗಳು ಪಡೆಯುವಂತಿಲ್ಲ. ಆದರೂ ಚಿತ್ರ ನಿರ್ಮಾಪಕರ ಒಲವು ಎ ಚಿತ್ರದ ಪರವಾಗಿದೆ ಎನ್ನುತ್ತದೆ ಅಧ್ಯಯನ. U/A ಚಿತ್ರ ನಿರ್ಮಾಣದ ಸಂಖ್ಯೆ 2005ರಲ್ಲಿ ಶೇ. 33.3 ಇದ್ದದ್ದು 2010ರಲ್ಲಿ ಶೇ. 41.3ಕ್ಕೇರಿದೆ. ಆದರೆ ಇದೇ ಅವಧಿಯಲ್ಲಿ ಬಿಡುಗಡೆಯಾದ A ಚಿತ್ರಗಳ ಸಂಖ್ಯೆ ಶೇ. 4.9ರಿಂದ ಶೇ.9.1ಕ್ಕೇರಿದೆ.

    ಸೆನ್ಸಾರ್ ಕಟ್

    ಸೆನ್ಸಾರ್ ಕಟ್

    ಆಕ್ಷೇಪಾರ್ಹ ಸನ್ನಿವೇಶಗಳು ಮತ್ತು ಸಂಭಾಷಣೆಗಳಿಗೆ ಸೆನ್ಸಾರ್ ಕತ್ತರಿ ಹಾಕುವುದು ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರಗಳಿಗೇ ಹೆಚ್ಚು. 2005ರಲ್ಲಿ ಶೇ.63 ಚಿತ್ರಗಳಿಗೆ ಸೆನ್ಸಾರ್ ಕತ್ತರಿ ಪ್ರಯೋಗಿಸಿತ್ತು. 2005 ರಿಂದ 2010ರ ಅವಧಿಯಲ್ಲಿ ಸೆನ್ಸಾರ್ ಕತ್ತರಿ ಪ್ರಯೋಗಿಸಿದ ಚಿತ್ರಗಳ ಸಂಖ್ಯೆ ಶೇ.62 ರಿಂದ ಶೇ.65ಕ್ಕೆ ಏರಿದೆ.

    ಇತರ ಭಾಷೆಗಳು

    ಇತರ ಭಾಷೆಗಳು

    ಅದೇ ಅವಧಿಯಲ್ಲಿ ಕನ್ನಡೇತರ ಚಿತ್ರಗಳಲ್ಲಿ ಸೆನ್ಸಾರ್ ಕತ್ತರಿ ಪ್ರಯೋಗಿಸಿದ ಚಿತ್ರಗಳ ಸಂಖ್ಯೆ ಶೇ.48ರಿಂದ ಶೇ.38ಕ್ಕೆ ಇಳಿದಿದೆ. ಕಾಮಿಡಿ ಚಿತ್ರಗಳು ಎಲ್ಲಾ ಭಾಷೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ.

    ಸಮಾಜಕ್ಕೆ ಸಂದೇಶ

    ಸಮಾಜಕ್ಕೆ ಸಂದೇಶ

    2005 ರಿಂದ 2010ರ ಅವಧಿಯಲ್ಲಿ ಸಾಮಾಜಿಕ ಸಂದೇಶವಿರುವ ಕನ್ನಡ ಚಿತ್ರಗಳ ಸಂಖ್ಯೆ ಶೇ.75 ರಿಂದ ಶೇ. 55ಕ್ಕೆ ಇಳಿದಿದೆ. ಆಕ್ಷನ್, ಥ್ರಿಲ್ಲರ್, ಕಾಮಿಡಿ ಚಿತ್ರಗಳು ಇದನ್ನು ಆಕ್ರಮಿಸಿಕೊಂಡಿವೆ. ಸಾಮಾಜಿಕ ಸಂದೇಶವಿರುವ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಗುತ್ತಿರುವುದು ಇದಕ್ಕೆ ಕೊಡಬಹುದಾದ ಇನ್ನೊಂದು ಕಾರಣ.

    English summary
    A study by Prof GK Karanth of Institute for Social and Economic Change (ISEC), Kannada films are more adult-rated films than ever before, and much more than the national average.
    Thursday, July 25, 2013, 17:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X