Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಚ್ಡಿಕೆ, ಸಿದ್ದರಾಮಯ್ಯ, ಯಡಿಯೂರಪ್ಪ ಮೆಚ್ಚಿದ 'ಕನ್ನಡ ಗೀತೆ'.!

ಕನ್ನಡ ನಾಡು ಸಂಸ್ಕೃತಿಯನ್ನು ಕುರಿತು ಹಲವಾರು ಹಾಡುಗಳು ಮೂಡಿ ಬಂದಿವೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ 'ಕನ್ನಡ ಕಲಿಸಿ, ಕನ್ನಡ ಉಳಿಸಿ, ಕನ್ನಡ ಬೆಳೆಸಿ' ಎಂಬ ಗೀತೆಯು ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಜನರಿಗೆ ತಿಳುವಳಿಕೆ ಹೇಳಿದರೆ ಕೇಳುವುದಿಲ್ಲ ಎಂದು ತಿಳಿದ ಅಭಿಲಾಷ್ ಈ ಹಾಡನ್ನು ಒಬ್ಬ ಕನ್ನಡಿಗನಾಗಿ, ಪರ ಭಾಷೆಯನ್ನು ಉಪಯೋಗಿಸುವ ಕನ್ನಡಿಗರನ್ನು ನೋಡಿ ಬಂದಂತಹ ರೋಷ ಮತ್ತು ಆವೇಶದಿಂದ ರಚಿಸಿದ್ದಾರೆ. ಹಾಗೆಯೇ ಸ್ವರ ಸಂಯೋಜಿಸಿ -ನಿರ್ಮಾಣ ಸಹ ಮಾಡಿದ್ದಾರೆ.
ಕನ್ನಡ ಎಂಬುದು ಒಂದು ರಾಜಕೀಯ ಪಕ್ಷಕ್ಕೆ ಅಥವಾ ಒಂದು ಕನ್ನಡ ಪರ ಸಂಘಟನೆಗೆ ಮಾತ್ರ ಸೀಮಿತವಾಗಿದ್ದಲ್ಲ ಎಂದು ಅರಿತ ಅಭಿಲಾಷ್ ಎಲ್ಲಾ ಪಕ್ಷದ ಮುಖಂಡರಿಗೂ ಮತ್ತು ನಾಯಕರಿಗೂ ಹಾಗೆಯೇ ಕನ್ನಡ ಪರ ಸಂಘಟನೆಯ ಅಧ್ಯಕ್ಷರಿಗೂ ಮತ್ತು ಸಾಹಿತಿಗಳಿಗೂ ಕೇಳಿಸಿ ಮೆಚ್ಚುಗೆ ಪಡೆದಿದ್ದಾರೆ.
ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರು ಈ ಹಾಡನ್ನು ಕೇಳುವಾಗ, ಕನಿಷ್ಠ ಒಂದು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಅವರ ಕಛೇರಿಯಲ್ಲಿ ಇದ್ದರೂ ಸಹ ಮತ್ತೊಮ್ಮೆ ಕೇಳಿಸಿ ಎಂದು ಎರಡೆರಡು ಬಾರಿ ಕೇಳಿದ್ದಾರೆ ಎಂದು ಅಭಿಲಾಷ್ ಹೇಳುತ್ತಾರೆ.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಈ ಹಾಡನ್ನು ನೋಡಿ ನೀವು ರಚಿಸಿದ್ದಾ..?? ಎಂದು ಶಾಕ್ ರಿಯಾಕ್ಷನ್ ನೀಡಿ ಮತ್ತೊಮ್ಮೆ ಕೇಳಿ, ಅಭಿಲಾಷ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಅಭಿಪ್ರಾಯ ಸಿಕ್ಕಿದ್ದು ಮಾತ್ರ ವಿಚಿತ್ರ.. ಹಾಡಿನ ಸಂಯೋಜನೆ ಆಗುವ ಮೊದಲೇ ಅಭಿಲಾಷ್ ಅವರಿಗೆ ಯಡಿಯೂರಪ್ಪನವರ ಬಿಡುವಿನ ಸಮಯ ಗೊತ್ತಾಗಿ ಕಛೇರಿಗೆ ಹೋಗಿ ಭೇಟಿ ಮಾಡಿದಾಗ ತಾವೇ ಹಾಡನ್ನು ಹಾಡುವುದಾಗಿ ಹೇಳಿಕೊಂಡಿದ್ದಾರೆ, ಹಾಡಲು ಅವಕಾಶ ಕೊಟ್ಟಂತಹ ಯಡಿಯೂರಪ್ಪನವರು ಅಭಿಲಾಷ್ ಹಾಡುವುದನ್ನು ಕೇಳಿ ಮುಗಿದನಂತರ ಮೇಲೆದ್ದು ಚಪ್ಪಾಳೆ ತಟ್ಟಿ ಅವರೇ ಅವರ ಸಹಾಯಕರನ್ನು ಕರೆದು ಫೋಟೊ ಕ್ಲಿಕ್ಕಿಸುವಂತೆ ಹೇಳಿದ್ದರಂತೆ.
ಮಾನ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಸಹ ಈ ಹಾಡನ್ನು ಕೇಳಿಸಲು ಹೋದಾಗ, ಕಾಕತಾಳೀಯವೆಂಬಂತೆ "ನಾನು ಕನ್ನಡಿಗ" ಎಂಬ ಟೀ ಶರ್ಟ್ ಧರಿಸಿ ಕುಳಿತಿದ್ದರು. ಈ ಹಾಡನ್ನು ಕೇಳಿದ ನಂತರ ಮೆಚ್ಚುಗೆ ವ್ಯಕ್ತಪಡಿಸಿ 'ನಾನು ಕನ್ನಡಿಗ ಎಂಬ ಟೀ ಶರ್ಟ್ ಧರಿಸಿದ ದಿನವೇ ಕನ್ನಡ ನಾಡು ನುಡಿಯನ್ನು ಕುರಿತ ಹಾಡನ್ನು ಕೇಳಿಸಿ ಅಭಿಪ್ರಾಯ ಪಡೆದಿದ್ದೀರಾ, ಇದೆಲ್ಲಾ ಕಾಕತಾಳೀಯ ಬ್ರದರ್ ಎಂದು ಹೇಳಿದರು ಎಂದು ಅಭಿಲಾಷ್ ಹೇಳುತ್ತಾರೆ.
ಹೀಗೆಯೇ ಕನ್ನಡಪರ ಸಂಘಟನೆಗಳಿಂದ ಜಯ ಕರ್ನಾಟಕದ ಸಂಸ್ಥಾಪಕರಾದ ಮುತ್ತಪ್ಪ ರೈ ಅವರು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣಗೌಡರು ಮತ್ತು ಖ್ಯಾತ ಸಾಹಿತಿಗಳಾದ ಡಾಕ್ಟರ್ ಪ್ರೊಫೆಸರ್ ದೊಡ್ಡರಂಗೇಗೌಡರು ಮತ್ತು ಪ್ರೊಫೆಸರ್ ಚಂದ್ರಶೇಖರ್ ಪಾಟೀಲ್ ರವರು ಮತ್ತು ಎಂಎಸ್ ನರಸಿಂಹಮೂರ್ತಿ ಅವರು ಹೀಗೆ ಹಲವಾರು ಗಣ್ಯರು ಹಾಡನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಾಡಿಗಾಗಿ ಇಬ್ಬರು ಸಂಗೀತ ನಿರ್ದೇಶಕರನ್ನು ಬದಲಾಯಿಸಿ ಮತ್ತು ಮೂರು ಜನ ಗಾಯಕರನ್ನು ಬದಲಾಯಿಸಿ, ಕೊನೆಗೆ ಬಾಬು ಅವರ ಕೈಯಲ್ಲಿ ಸಂಗೀತ ಸಂಯೋಜಿಸಿ, ಹೇಮಂತ್ ರವರ ಧ್ವನಿಯಲ್ಲಿ ಗಾಯನ ಮಾಡಿಸಿ ರಾಜ್ಯದ ಎಲ್ಲಾ ಗಣ್ಯರಿಗೂ ಕೇಳಿಸಿ ಬಿಡುಗಡೆ ಮಾಡಿದ್ದಾರೆ.