»   » ಸ್ಯಾಂಡಲ್ ವುಡ್ ಹೀರೋಗಳು ಪರಭಾಷೆಯಲ್ಲಿ ವಿಲನ್ ಗಳು

ಸ್ಯಾಂಡಲ್ ವುಡ್ ಹೀರೋಗಳು ಪರಭಾಷೆಯಲ್ಲಿ ವಿಲನ್ ಗಳು

By: ಸೋನು ಗೌಡ
Subscribe to Filmibeat Kannada

ಸ್ಯಾಂಡಲ್ ವುಡ್ ನ ಟಾಪ್ ಸ್ಟಾರ್ ಹೀರೋಗಳು ಕನ್ನಡ ಚಿತ್ರದಲ್ಲಿ ಹೀರೋಗಳಾಗಿ ಮೆರೆದ್ರೆ ಪರಭಾಷೆಯಲ್ಲಿ ವಿಲನ್ ಗಳಾಗಿ ಮೆರೆಯುವುದು ಇದೀಗ ಟ್ರೆಂಡ್ ಆದಂತಿದೆ.

ಕನ್ನಡದಲ್ಲಿ ಹಿಟ್ ನಟರ ಜೊತೆಗೆ ಅಷ್ಟಾಗಿ ಯಶಸ್ಸು ಗಳಿಸದ ನಟರು ಪರಭಾಷೆಯಲ್ಲಿ ಕ್ಲಿಕ್ ಆಗುತ್ತಿದ್ದಾರೆ. ಹಿಟ್ ನಟರಲ್ಲಿ ಇದಕ್ಕೆ ಉತ್ತಮ ನಿದರ್ಶನ ಅಂದ್ರೆ ಕಿಚ್ಚ ಸುದೀಪ್ ಅವರು ಕನ್ನಡದಲ್ಲಿ ಮಾತ್ರವಲ್ಲದೇ ಇತರೇ ಭಾಷೆಯಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.[ತಮಿಳಿನಲ್ಲಿ ಕಿಚ್ಚ ಸುದೀಪ್ ವಿಲನ್ ಪಾತ್ರ ಒಪ್ಪಿದ್ದೇಕೆ?]

ಇದೀಗ ಮತ್ತೊಬ್ಬ ಕನ್ನಡದ ಸ್ಟಾರ್ ಪರಭಾಷೆಯಲ್ಲಿ ವಿಲನ್ ರೋಲ್ ನಲ್ಲಿ ಮಿಂಚಿದ್ದು, ಸದ್ಯಕ್ಕೆ ತಮಿಳು ಚಿತ್ರರಂಗದಲ್ಲಿ ಅವರ ಪಾತ್ರ ಹೈಲೈಟ್ ಆಗ್ತಾ ಇದೆ.

ಇದೀಗ ಇವರೆಲ್ಲರ ಸಾಲಿಗೆ ಹೊಸ ಸೇರ್ಪಡೆ ಯಾರಪ್ಪ ಅಂದ್ರೆ, ಅವರೇ ನಮ್ಮ ಕನ್ನಡದ ಸಿಂಗ್ ಫ್ಯಾಮಿಲಿ ಕುಡಿ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ ಇದೀಗ ತಮಿಳು ಚಿತ್ರ 'ವಾಲು' ನಲ್ಲಿ ಸಖತ್ ಫೈಟ್ ಮಾಡಿದ್ದಾರೆ.[ತಮಿಳಿನಲ್ಲಿ ಡೆಡ್ಲಿ ಆದಿತ್ಯನ ಹೊಸ ಅವತಾರ]

Silabarasan

ತಮಿಳು ನಟ ಸಿಲಂಬರಸನ್ ಹಾಗೂ ಹನ್ಸಿಕಾ ಮೋಟ್ವಾನಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ತಮಿಳು ಚಿತ್ರ 'ವಾಲು' ತೆರೆ ಕಂಡಿದ್ದು ಈ ಚಿತ್ರದಲ್ಲಿ ನಮ್ಮ ಕನ್ನಡದ ನಟ ಆದಿತ್ಯ ವಿಲನ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.[ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ಯಾರು?]

ಸ್ಯಾಂಡಲ್ ವುಡ್ ನ ಇನ್ನಿತರೇ ಸ್ಟಾರ್ ಗಳು ಪರಭಾಷೆಯಲ್ಲಿ ಮಿಂಚಿರುವುದನ್ನು ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..

ಕನ್ನಡಿಗ ಹಾಗೂ ಪರಭಾಷಾ ನಟ ಪ್ರಕಾಶ್ ರೈ

ಅಂದ ಹಾಗೆ ಕನ್ನಡದವರೇ ಆದ ಪ್ರಕಾಶ್ ರೈ ಅವರು ಕನ್ನಡ ಚಿತ್ರವೊಂದರಲ್ಲಿ ಹೀರೋ ಆಗಿ ನಟಿಸಿ ಇದೀಗ ಅಧಿಕೃತವಾಗಿ ಪರಭಾಷೆಗಳಲ್ಲಿ ಹೆಚ್ಚಿನ ಚಿತ್ರಗಳಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಮಿಳು 'ವಾಲು' ಚಿತ್ರದಲ್ಲಿ ಆದಿತ್ಯ

ತಮಿಳು ನಟ ಸಿಲಂಬರಸನ್ ಹಾಗೂ ಹನ್ಸಿಕಾ ಮೋಟ್ವಾನಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ವಾಲು' ಚಿತ್ರದಲ್ಲಿ ಆದಿತ್ಯ ಸಖತ್ ಫವರ್ ಫುಲ್ ಅಭಿನಯ ನೀಡಿದ್ದು, ತಮಿಳು ಸಿನಿಪ್ರಿಯರಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸ್ಯಾಂಡಲ್ ವುಡ್ ಸ್ಟಾರ್ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್

ಕನ್ನಡದ ಖ್ಯಾತ ನಟ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬ್ಲಾಕ್ ಬಸ್ಟರ್' ಹಿಟ್ ತೆಲುಗು ಚಿತ್ರ 'ಈಗ' ದಲ್ಲಿ ವಿಲನ್ ಪಾತ್ರ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಜೊತೆಗೆ 'ಬಾಹುಬಲಿ' ಚಿತ್ರದಲ್ಲೂ ಮಿಂಚಿದ್ದರು. ಮಾತ್ರವಲ್ಲದೇ ಇದೀಗ ಇಳೆಯದಳಪತಿ ವಿಜಯ್ ಜೊತೆ ತಮಿಳು 'ಪುಲಿ' ಚಿತ್ರದಲ್ಲೂ ನಟಿಸಿದ್ದಾರೆ.

ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ

ತೆಲುಗು ಸ್ಟೈಲೀಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ರೀಸೆಂಟ್ ಹಿಟ್ ಚಿತ್ರ 'ಸನ್ ಆಫ್ ಸತ್ಯಮೂರ್ತಿ' ಯಲ್ಲಿ ನಮ್ಮ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ವಿಲನ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಮಾತ್ರವಲ್ಲದೇ ಉಪೇಂದ್ರ ಅವರು ವಿಶಾಲ್ ಅಭಿನಯದ 'ಸತ್ಯ ಐ.ಪಿ.ಎಸ್' ತಮಿಳು ಚಿತ್ರದಲ್ಲೂ ವಿಲನ್ ಗೆಟಪ್ ನಲ್ಲಿ ಮಿಂಚಿದ್ದರು.

ಡೈನಾಮಿಕ್ ಸ್ಟಾರ್ ದೇವರಾಜ್

ಕನ್ನಡ ಚಿತ್ರರಂಗ ಕಂಡ ಮತ್ತೊಬ್ಬ ನಟ ದೇವರಾಜ್ ಕೂಡ ಪರಭಾಷೆಯಲ್ಲಿ ವಿಲನ್ ರೋಲ್ ಮಾಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಕನ್ನಡ ನಟ ಅವಿನಾಶ್

ಸ್ಯಾಂಡಲ್ ವುಡ್ ನ ಬಹುಮುಖ ಪ್ರತಿಭೆ ಅವಿನಾಶ್ ಅವರು ತಮಿಳು ನಟ ಸಿದ್ದಾರ್ಥ್ ಕಾಣಿಸಿಕೊಂಡಿದ್ದ 'ಉದಯಮ್ ಎನ್.ಹೆಚ್ 4' ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

English summary
Kannada Actor Aditya of 'Deadly Soma' fame turns Villain in Kollywood. Aditya is seen potraying Villain character in Simbu starrer 'Vaalu' directed by debutant Vijay Chandar. Here are the few other prominent actor who accepted negative shade roles in other film industries.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada