For Quick Alerts
  ALLOW NOTIFICATIONS  
  For Daily Alerts

  ಅನಂತ್ ನಾಗ್ ಸಾಕ್ಷ್ಯಚಿತ್ರ; ಕನ್ನಡದ ಈ ಲೆಜೆಂಡರಿ ನಟನ ಬಗ್ಗೆ ನಿಮಗೆಷ್ಟು ಗೊತ್ತು?

  |

  ಕನ್ನಡ ಸಿನಿಮಾರಂಗದ ಅಪ್ರತಿಮ ನಟರ ಸಾಲಿನಲ್ಲಿ ಅನಂತ್ ನಾಗ್ ಕೂಡ ಒಬ್ಬರು. ಸಿನಿಮಾರಂಗಕ್ಕೆ ಅನಂತ್ ನಾಗ್ ಕೊಡುಗೆ ಅಪಾರ. ಸುಮಾರು 48 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅನಂತ್ ನಾಗ್ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲೂ ನಟಿಸಿದ್ದಾರೆ. ತನ್ನ ಪ್ರತಿಭೆಗೆ ಸವಾಲೊಡ್ಡುವ ಪಾತ್ರಗಳಲ್ಲಿ ಅನಂತ್ ನಾಗ್ ಅದ್ಭುತ ಪ್ರದರ್ಶನದ ಮೂಲಕ ಚಿತ್ರಾಭಿಮಾನಿಗಳನ್ನು ಮೂಕವಿಸ್ಮಿತರನ್ನಾಗಿಸುವ ನಟ.

  ಈ ಲೆಜೆಂಡರಿ ನಟನ ಬಗ್ಗೆ ಎಷ್ಟು ಹೇಳಿದರು ಕಮ್ಮಿಯೇ. ಇಂಥ ಮೇರು ನಟನ ಜೀವನ ಮತ್ತು ಸಾಧನೆ ಬಗ್ಗೆ ಸಾಕ್ಷ್ಯಚಿತ್ರದ ಮೂಲಕ ಕಿರುಪರಿಚಯ ಮಾಡಿ ಕೊಟ್ಟಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ತಂಡ. ಅನಂತ್ ನಾಗ್ ಬಗ್ಗೆ ಚಿಕ್ಕದಾದ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಆ ಮೂಲಕ ಅನಂತ್ ನಾಗ್ ಸಾಧನೆಯನ್ನು ಚುಟುಕಾಗಿ ಪರಿಚಯ ಮಾಡಿಕೊಡಲಾಗಿದೆ. ಈ ಸಾಕ್ಷ್ಯಚಿತ್ರವನ್ನು ರಿಷಬ್ ಶೆಟ್ಟಿ ಫಿಲ್ಮ್ಸ ನಲ್ಲಿ ಬಿಡುಗಡೆ ಮಾಡಲಾಗಿದೆ.

  ಈ ಸಾಕ್ಷ್ಯಚಿತ್ರ ಅಭಿಮಾನಿಗಳಿಂದ ಮತ್ತು ಸಿನಿ ಗಣ್ಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಅನಂತ್ ನಾಗ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಯಾವಾಗ?, ಸಿನಿ ಪಯಣ ಪ್ರಾರಂಭವಾಗಿದ್ದು ಹೇಗೆ? ಇತ್ಯಾದಿ ವಿಷಯಗಳು ಈ ಸಾಕ್ಷ್ಯಚಿತ್ರದಲ್ಲಿದೆ. ಭಟ್ಕಳ ತಾಲ್ಲೂಕಿನ ಶಿರಸಿಯ ನಾಗರಕಟ್ಟೆಯಲ್ಲಿ ಜನಿಸಿದ ಅನಂತ್ ನಾಗ್ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿದರು.

  ನಂತರ ಮುಂಬೈಗೆ ಕಾಲಿಟ್ಟ ಅನಂತ್ ನಾಗ್ ಮುಂಬೈನಲ್ಲಿ ಶಿಕ್ಷಣ ಮುಂದುವರೆಸಿದರು. ಬಳಿಕ ರಂಗಭೂಮಿಯಿಂದ ವೃತ್ತಿ ಜೀವನ ಪ್ರಾರಂಭಿಸಿದ ಅನಂತ್ ನಾಗ್ ಮೊದಲು ಕೊಂಕಣಿ, ಕನ್ನಡ ಮತ್ತು ಮರಾಠಿ ನಾಟಕಗಳನ್ನು ಮಾಡುತ್ತಿದ್ದರು. ಅನಂತ್ ನಾಗ್ ಸತ್ಯದೇವ್ ದುಬೆ, ಅಮೋಲ್ ಪಾಲೇಕರ್ ಮತ್ತು ಗಿರೀಶ್ ಕಾರ್ನಾಡ್ ಅವರಂತಹ ಖ್ಯಾತ ರಂಗಕರ್ಮಿಗಳ ಜೊತೆೆ ಕೆಲಸ ಮಾಡಿದರು. ಸುಮಾರು ಐದು ವರ್ಷಗಳ ಕಾಲ ಕೊಂಕಣಿ, ಕನ್ನಡ, ಮರಾಠಿ ಮತ್ತು ಹಿಂದಿ ನಾಟಕಗಳಲ್ಲಿ ನಟಿಸಿದರು.

  1973ರಲ್ಲಿ ರಂಗಭೂಮಿಯಿಂದ ಸಿನಿಮಾರಂಗಕ್ಕೆ ಕಾಲಿಟ್ಟರು. ಸಂಕಲ್ಪ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ರಂಗಭೂಮಿ ನಿರ್ದೇಶಕ ಸತ್ಯದೇವ್ ದುಬೆ ಅವರಿಂದ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ಪರಿಚಯವಾಯಿತು. ಅನಂತ್ ನಾಗ್ ನಿರ್ದೇಶಕ ಶ್ಯಾಮ್ ಬೆನಗಲ್ ಅವರ 6 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂಕುರ್, ನಿಶಾಂತ್, ಮಂಥನ್, ಭೂಮಿಕಾ, ಕೊಂಡೂರ ಮತ್ತು ಕಲ್ ಯುಗ್ ಸಿನಿಮಾಗಳಲ್ಲಿ ಅನಂತ್ ನಾಗ್ ನಟಿಸಿದ್ದಾರೆ.

  ಜೆವಿ ಅಯ್ಯರ್ ಅವರ ಹಂಸಗೀತೆ ಸಿನಿಮಾದಲ್ಲಿ ಅನಂತ್ ನಾಗ್ ನಟಿಸಿದ್ದರು. ಈ ಸಿನಿಮಾ ಕನ್ನಡದ ಅತ್ಯುತ್ತಮ ಸಿನಿಮಾ ರಾಷ್ಟ್ರ ಪ್ರಶಸ್ತಿ ಗೆದ್ದಿತು. ರಂಗಭೂಮಿ ಸಿನಿಮಾ ಜೊತೆಗೆ ಅನಂತ್ ನಾಗ್ ಧಾರಾವಾಹಿಯಲ್ಲೂ ಮಿಂಚಿದ್ದಾರೆ. ಅನಂತ್ ಅವರ ಸಹೋದರ ಶಂಕರ್ ನಾಗ್ ನಿರ್ದೇಶನದ ಆರ್ ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಅನಂತ್ ನಾಗ್ ನಟಿಸಿದ್ದರು. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ದೊಡ್ಡ ಮಟ್ಟದ ಯಶಸ್ಸು ಕಂಡಿತು.

  ಕನ್ನಡದ ಜೊತೆಗೆ ತೆಲುಗು, ಹಿಂದಿ ಸಿನಿಮಾಗಳಲ್ಲೂ ಅನಂತ್ ನಾಗ್ ನಟಿಸಿದ್ದಾರೆ. ಸಹೋದರ ಶಂಕರ್ ನಾಗ್ ಜೊತೆಯೂ ನಟಿಸಿದ್ದಾರೆ. ಕಲಾ ಸೇವೆಯ ಜೊತೆಗೆ ಅನಂತ್ ನಾಗ್ ರಾಜಕೀಯ ಕ್ಷೇತ್ರದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಸಿನಿಮಾರಂಗ ಕೈ ಹಿಡಿದಷ್ಟು ರಾಜಕೀಯ ಕೈ ಹಿಡಿಲಿಲ್ಲ. ಮತ್ತೆ ಬಣ್ಣದಲೋಕದಲ್ಲಿ ಬ್ಯುಸಿಯಾದ ಅನಂತ್ ನಾಗ್ ವಯಸ್ಸಿಗೆ ತಕ್ಕದಾದ ಪಾತ್ರಗಳನ್ನು ಮಾಡುತ್ತಾ, ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಡಾಕ್ಯುಮೆಂಟರಿಯಲ್ಲಿ ಚುಟುಕಾಗಿ ವಿವರಿಸಲಾಗಿದೆ.

  ಅಂದಹಾಗೆ ಇಂಥ ಲೆಜಂಡರಿ ನಟನಿಗೆ ಪದ್ಮಪ್ರಶಸ್ತಿ ಸಿಗಬೇಕೆಂದು ಕನ್ನಡದಲ್ಲಿ ಅಭಿಯಾನ ಮಾಡಲಾಗಿತ್ತಿದೆ. ಈ ಅಭಿಯಾನಕ್ಕೆ ಅಭಿಮಾನಿಗಳ ಜೊತೆಗೆ ಕನ್ನಡದ ಖ್ಯಾತ ನಟರು ಕೈ ಜೋಡಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರು ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕೆಂದು ಅಭಿಯಾನ ಮಾಡುತ್ತಿದ್ದಾರೆ.

  English summary
  Kannada Legendary Actor Ananth Nag Documentary by Rishab Shetty Films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X