For Quick Alerts
  ALLOW NOTIFICATIONS  
  For Daily Alerts

  ಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಕಲಹ: ಪೊಲೀಸ್ ಠಾಣೆ ಮೆಟ್ಟಿಲೇರಿದ ದಂಪತಿ

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್ ವುಡ್ ನ ಖ್ಯಾತ ಚಿತ್ರಸಾಹಿತಿ ಕೆ. ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತ್ನಿ ಅಶ್ವಿನಿ ಕಾಣೆಯಾಗಿದ್ದಾರೆಂದು ಮಾವ ಮತ್ತು ಅತ್ತೆಯ ವಿರುದ್ಧ ಖ್ಯಾತ ಸಾಹಿತಿ ಕೆ.ಕಲ್ಯಾಣ್ ದೂರು ದಾಖಲಿಸಿದ್ದಾರೆ. ಬೆಳಗಾವಿಯ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಕೆ.ಕಲ್ಯಾಣ್ ಸೆಪ್ಟಂಬರ್ 30 ರಂದು ದೂರು ನೀಡಿದ್ದಾರೆ.

  ಇದೇನಿದು ಕೆ ಕಲ್ಯಾಣ್ ಹೆಂಡತಿಯ ಆರೋಪ | K. Kalyan | Filmibeat Kannada

  ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅಶ್ವಿನಿ ಪರ ವಕೀಲ ಸತೀಶ್ ದಳವಾಯಿ ಅವರು, ಪತಿಯಾಗಿ ಕೆ. ಕಲ್ಯಾಣ ಅವರು ತಮ್ಮ ಜವಾದ್ಬಾರಿ ನಿಭಾಯಿಸಿಲ್ಲ. ನನ್ನ ಕಕ್ಷಿದಾರ ಅಶ್ವಿನಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಕೆ.ಕಲ್ಯಾಣ ಮುಂದಾಗಿದ್ದಾರೆ. ಅಶ್ವಿನಿ ಕಾಣೆಯಾಗಿಲ್ಲ. ಕೆ.ಕಲ್ಯಾಣ ಅವರ ಕಿರುಕುಳಕ್ಕೆ ಬೇಸತ್ತಿದ್ದಾರೆ. ಅಲ್ಲದೇ ಜೂನ್ 26 ರಂದು ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ . ಹೀಗಾಗಿ ಕೆ.ಕಲ್ಯಾಣ್ ಅವರು ಏನೇನೋ ಆರೋಪ ಮಾಡುತ್ತಿದ್ದಾರೆ ಎಂದರು.

  ಕಲ್ಯಾಣ್ ದೂರಿನ ಆಧಾರದ ಮೇಲೆ ಪೊಲೀಸರು ಇಂದು ಪತ್ನಿ ಅಶ್ವಿನಿಯನ್ನು ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗಲಾಟೆಯ ಬಗ್ಗೆ ಸ್ಪಷ್ಟನೆ ನೀಡಿರುವ ಅಶ್ವನಿ, ತಮ್ಮ ಪತಿ ಕೆ ಕಲ್ಯಾಣ್ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ. ಕಲ್ಯಾಣ್ ಜೊತೆ ಇನ್ಮುಂದೆ ಜೀವನ ನಡೆಸುವುದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಅಶ್ವಿನಿ ಕಳೆದ 6 ತಿಂಗಳಿಂದ ನಾವು ಒಟ್ಟಿಗೆ ಇಲ್ಲ ಎಂದು ತಿಳಿಸಿದ್ದಾರೆ.

  ಕೆ ಕಲ್ಯಾಣ್ ದಾಂಪತ್ಯದಲ್ಲಿ ಕಳೆದ 6 ತಿಂಗಳ ಹಿಂದೆ ಬೇರೆಬೇರೆ ಆಗಿದ್ದಾರಂತೆ. 2005ರಲ್ಲಿ ಕೆ.ಕಲ್ಯಾಣ್, ಅಶ್ವಿನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸುಮಾರು 15 ವರ್ಷಗಳ ದಾಂಪತ್ಯ ಜೀವನವನ್ನು ಕಡಿದುಕೊಳ್ಳಲು ತೀರ್ಮಾನಿಸಿದ್ದು, ನ್ಯಾಯಾಲದ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

  Kannada Lyricist K Kalyan Wife Ashwini Files Complaint Against Him

  ಕೆ ಕಲ್ಯಾಣ್ ಪ್ರತಿಕ್ರಿಯೆ

  ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿ ಮಾಹಿತಿ ಹಂಚಿಕೊಂಡಿರುವ ಕೆ.ಕಲ್ಯಾಣ ಅವರು, ನನ್ನ ವಿರುದ್ಧ ಪತ್ನಿ ಅಶ್ವಿನಿ ಮಾಡುತ್ತಿರುವ ಆರೋಪ ಆಕೆಯ ಅನಿಸಿಕೆ. ನನ್ನ ವಿರುದ್ಧ ಮಾಡಲಾದ ಆರೋಪ ಸಂಬಂಧ ಪತ್ನಿ ಅಶ್ವಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರು.

  English summary
  Kannada lyricist K Kalyan wife Ashwini files complaint against him

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X