For Quick Alerts
  ALLOW NOTIFICATIONS  
  For Daily Alerts

  ಕನ್ನಡಿಗರ ಕಾಲೆಳೆಯುವ ಕನ್ನಡ ಮಾಧ್ಯಮದ ಬಗ್ಗೆ ಜಗ್ಗೇಶ್ ಬೇಸರ

  By Suneetha
  |

  ಈ ಸಿನಿಮಾ ಕ್ಷೇತ್ರ ಎಂದರೆ ಹಾಗೆ, ಒಮ್ಮೆ ಅದ್ಭುತ ಯಶಸ್ಸು ಸಿಕ್ಕರೆ, ಇನ್ನೊಮ್ಮೆ ಅದೇ ಯಶಸ್ಸು, ಮೇಲಿನಿಂದ ಎತ್ತಿ ಕೆಳಗೆ ಒಗೆಯುತ್ತದೆ. ಒಮ್ಮೆಗೆ ನಟಿಸಿದ ನಾಲ್ಕೈದು ಚಿತ್ರಗಳು ಸೂಪರ್ ಹಿಟ್ ಆದ್ರೆ, ಇನ್ನೊಮ್ಮೆ ಐದಾರು ಸಿನಿಮಾಗಳು ತೋಪೆದ್ದು ಡಬ್ಬಾ ಸೇರಬಹುದು.

  ಇದಕ್ಕೆಲ್ಲಾ ಕೆಲವೊಂದು ಕನ್ನಡ ನಟ-ನಟಿಯರೇ ಉತ್ತಮ ನಿದರ್ಶನ ಆಗುತ್ತಾರೆ. ಅಂದಹಾಗೆ ಇದೀಗ ಕಾಮಿಡಿ ನಟ ಕೋಮಲ್ ಕುಮಾರ್ ಅವರ ಬಗ್ಗೆ ಸೋಲಿನ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ.[ಕೋಮಲ್ ಗೆ 'ಗುರು'ಬಲ ತಂದ ಕಷ್ಟ]

  ಇವರು ಕಾಮಿಡಿ ನಟನಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾಗ, ಸಾಕಷ್ಟು ಅಭಿಮಾನಿಗಳು ಇವರ ಕಾಮಿಡಿ ಇಷ್ಟಪಟ್ಟಿದ್ದರು. ಜೊತೆಗೆ ಒಂಥರಾ ಹೀರೋಗಳಿಗಿಂತ ಇವರೇ ಸ್ಟಾರ್ ಪಟ್ಟದಲ್ಲಿರುತ್ತಿದ್ದರು.

  ಆದರೆ ಹೀರೋ ಅಗಿ ಅಭಿನಯಿಸಲು ಶುರು ಮಾಡಿದಾಗ ಕೊಂಚ ಸ್ಟಾರ್ ವ್ಯಾಲ್ಯೂ ಕಡಿಮೆ ಆಯ್ತು, ಅವರು ನಟಿಸಿದ ಸಿನಿಮಾಗಳೆಲ್ಲಾ ಮಕಾಡೆ ಮಲಗಿದ್ವು, ಹಾಗೆ-ಹೀಗೆ ಅಂತ ಮಾಧ್ಯಮವೊಂದು ಪುಂಗಿ ಊದಿತ್ತು. ಇದನ್ನು ಕಂಡ ನಟ ಕೋಮಲ್ ಅವರ ಸಹೋದರ ನವರಸ ನಾಯಕ ಜಗ್ಗೇಶ್ ಅವರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

  ಅಂದಹಾಗೆ ಕೋಮಲ್ ಅವರ ಸಿನಿಮಾಗೂ, ನಟ ಜಗ್ಗೇಶ್ ಅವರ ಬೇಸರಕ್ಕೂ ಏನು ಸಂಬಂಧ?, ಜಗ್ಗೇಶ್ ಅವರು ತಮ್ಮ ಬೇಸರವನ್ನು ಯಾಕೆ ಹೊರಹಾಕಿದ್ದಾರೆ ಅನ್ನೋದನ್ನ ನೋಡಲು ಮುಂದೆ ಓದಿ.....

  ಹೀರೋ ಆದ ಕಾಮಿಡಿ ಕಿಂಗ್

  ಹೀರೋ ಆದ ಕಾಮಿಡಿ ಕಿಂಗ್

  ಕಾಮಿಡಿ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಸಾಕಷ್ಟು ಸಿನಿಮಾಗಳನ್ನು ಮಾಡಿದ ನಟ ಕೋಮಲ್ ಅವರು ಒಂದು ಕಾಲದಲ್ಲಿ ಹಿಟ್ ಕಾಮಿಡಿ ನಟನಾಗಿ ಹೊರಹೊಮ್ಮಿದ್ದರು. ತದನಂತರ ನಾಯಕ ನಟನಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ಅದರಲ್ಲಿ ಕೆಲವು ಸಿನಿಮಾಗಳು ಹಿಟ್ ಆದರೆ ಇನ್ನೂ ಕೆಲವು ಸಿನಿಮಾಗಳು ಕೈ ಕೊಟ್ಟವು.[ವಾವ್.! ಹೊಟ್ಟೆ ಕರಗಿಸಿ ಸ್ಲಿಮ್ ಆದ ಕೋಮಲ್ ಕುಮಾರ್]

  ಮಾಧ್ಯಮದಲ್ಲಿ ವರದಿ

  ಮಾಧ್ಯಮದಲ್ಲಿ ವರದಿ

  ಸಿನಿಮಾ ಕ್ಷೇತ್ರದಲ್ಲಿ ಕೋಮಲ್ ಅವರ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಖಾಸಗಿ ನ್ಯೂಸ್ ಚಾನೆಲ್ (ಈಟಿವಿ) ನಲ್ಲಿ 'ಎದ್ದೇಳು ಕೋಮಲ್' ಅಂತ ವಿಶೇಷ ಕಾರ್ಯಕ್ರಮ ನಡೆಸಿದ್ದರು. ಇದೀಗ ಈ ವಿಚಾರದ ಬಗ್ಗೆ ನಟ ಜಗ್ಗೇಶ್ ಅವರಿ ಟ್ವೀಟ್ ಗಳ ಸುರಿಮಳೆ ಸುರಿಸಿದ್ದಾರೆ.

  ಕೋಮಲ್ ಕಾಲೆಳೆದರೆ, ಹಸುವಿನ ಕಾಲೆಳೆದಂತೆ

  ಕೋಮಲ್ ಕಾಲೆಳೆದರೆ, ಹಸುವಿನ ಕಾಲೆಳೆದಂತೆ

  'ಕೋಮಲ್ ಯಾರ ಸಹಾಯವೂ ಇಲ್ಲದೇ, ಸ್ವಪ್ರತಿಭೆಯಿಂದ ಬೆಳೆದ ನಟ. ಅವನಲ್ಲಿ ಪ್ರತಿಭೆಯು ಇದೆ ಅಪಮಾನ ಸಹಿಸುವ ತಾಳ್ಮೆಯು ಇದೆ. ಅವನ ಕಾಲೆಳೆಯುವುದು ಒಂದೇ ಹಸುವಿನ ಕಾಲೆಳೆಯುವುದು ಒಂದೆ..ನೀವು ಮುಂದುವರೆಸಿ..." ಎಂದು ಜಗ್ಗೇಶ್ ಸಹೋದರ ಕೋಮಲ್ ಪರ ಟ್ವೀಟ್ ಮಾಡಿದ್ದಾರೆ.

  ಜಗ್ಗೇಶ್ ಬೇಸರ

  ಜಗ್ಗೇಶ್ ಬೇಸರ

  'ಇಂದು ಆತನ ಬಗ್ಗೆ ETv ಯಲ್ಲಿ ನೋಡಿ ಬೇಜಾರಾಯಿತು. ಕನ್ನಡಿಗರ ಕಾಲೆಳೆದು ಕೊಂದರೆ! ನಿಮಗೆ ಸಂತೋಷ ಸಿಕ್ಕರೆ ದಯಮಾಡಿ ಮುಂದುವರೆಸಿ. ಇದು ಕನ್ನಡ ನಟರ ದೌರ್ಭಾಗ್ಯ". -ಜಗ್ಗೇಶ್.

  ಮಾಧ್ಯಮದವರೇ ಆತ್ಮವಿಮರ್ಶೆ ಮಾಡಿಕೊಳ್ಳಿ

  ಮಾಧ್ಯಮದವರೇ ಆತ್ಮವಿಮರ್ಶೆ ಮಾಡಿಕೊಳ್ಳಿ

  'ಕನ್ನಡದ ನಟರು ಹಾಗೂ ಕನ್ನಡ ಚಿತ್ರರಂಗ ಬಯಸುವುದೇ ಕನ್ನಡ ಪ್ರೇಕ್ಷಕ ಮಾಧ್ಯಮದ ಬೆಂಬಲವನ್ನು. ನೀವೇ ನಿಮ್ಮವರನ್ನು ತೆಗಳಿದರೆ, ನಿಮ್ಮವರು ಬೆಳೆಯೋದು ಹೇಗೆ..ಆತ್ಮ ವಿಮರ್ಶೆ ಮಾಡಿಕೊಳ್ಳಿ...ಓ ಕನ್ನಡದ ಮನಸೇ" ಎಂದು ಜಗ್ಗೇಶ್ ಅವರು ಮಾಧ್ಯಮದ ಮಂದಿಗೆ ಕರೆ ಕೊಟ್ಟಿದ್ದಾರೆ.

  ನಿರ್ಮಾಪಕ ಖುಷಿಯಾಗಿರಬೇಕಾದ್ರೆ, ನಿಮಗೇನು.?

  ನಿರ್ಮಾಪಕ ಖುಷಿಯಾಗಿರಬೇಕಾದ್ರೆ, ನಿಮಗೇನು.?

  'ಹಿಂದಿನ ಮೂರು ಚಿತ್ರ 'ನಮೋ ಭೂತಾತ್ಮ', 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಹಾಗೂ 'ಡೀಲ್ ರಾಜಾ' ಗಳಿಕೆಯಲ್ಲಿ ಗೆದ್ದಿದೆ. ನಿರ್ಮಾಪಕರೇ ಖುಷಿಯಿಂದ ಇದ್ದಾರೆ ಅಂದ ಮೇಲೆ, ಇದಕ್ಕಿಂತ ಬೇರೆ ಏನು ಸಾಧಿಸಬೇಕು, ನನಗೆ ಅರ್ಥವಾಗುತ್ತಿಲ್ಲ'. ಎಂದು ಜಗ್ಗೇಶ್ ಅವರು ಕೋಮಲ್ ಬಗ್ಗೆ ಪುಂಗಿ ಊದಿದ ಮಾಧ್ಯಮಕ್ಕೆ ಸರಿಯಾಗಿ ಜಾಡಿಸಿದ್ದಾರೆ.[ಕಲೆಕ್ಷನ್ ಚೆನ್ನಾಗಿದ್ದರೂ 'ಪುಟ್ಟಣ್ಣ'ನಿಗೆ ಮಲ್ಟಿಪ್ಲೆಕ್ಸ್ ಸಿಗುತ್ತಿಲ್ಲ]

  ಶಾರದೆ ಇದ್ದಲ್ಲಿ ಲಕ್ಷ್ಮಿ ಇರುತ್ತಾಳೆ

  ಶಾರದೆ ಇದ್ದಲ್ಲಿ ಲಕ್ಷ್ಮಿ ಇರುತ್ತಾಳೆ

  "ಲಕ್ಷ್ಮಿ ಇದ್ದ ಕಡೆ ಶಾರದೆ ಬರೋಲ್ಲಾ..ಅದೇ ಶಾರದೆ ಇದ್ದೆಡೆ ಲಕ್ಷ್ಮಿ ಬರುತ್ತಾಳೆ..ಕಲಾವಿದರು ಶಾರದೆ ಪುತ್ರರು..ಕಲಾವಿದ ಕೋಟಿಗೊಬ್ಬ.ಅವನಿಗೆ ಗೆಲುವಾಗಲಿ' ಎಂದು ಜಗ್ಗೇಶ್ ಅವರು ತಮ್ಮ ಮನಸ್ಸಿನಲ್ಲಿ ಮಡುಗಟ್ಟಿದ್ದ ಬೇಸರವನ್ನು ಹೊರಹಾಕಿದ್ದಾರೆ.

  English summary
  Kannada media should supports kannnda stars, says Kannada Actor Jaggesh. Here is the Jaggesh tweets about Actor Komal Kumar's film and Kannada Media. Check it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X