»   » '100% ವೆಜ್' ಆದರೂ ಒಳ್ಳೆ ನಾನ್ ವೆಜ್ ಊಟ ಗುರೂ.!

'100% ವೆಜ್' ಆದರೂ ಒಳ್ಳೆ ನಾನ್ ವೆಜ್ ಊಟ ಗುರೂ.!

Posted By:
Subscribe to Filmibeat Kannada

'100% ವೆಜ್'...ಅದಕ್ಕೆ ''ಒಳ್ಳೆ ನಾನ್ ವೆಜ್ ಊಟ ಗುರೂ!'' ಅಂತ ಟ್ಯಾಗ್ ಲೈನ್. ಟೈಟಲ್ ಗೂ ಟ್ಯಾಗ್ ಲೈನ್ ಗೂ ಏನಪ್ಪಾ ಲಿಂಕು ಅಂತ ನಮ್ಮನ್ನ ಕೇಳ್ಬೇಡಿ. ಇಂತಹ ಫಿಲ್ಟರ್ ಇಲ್ಲದ ಟೈಟಲ್ ಇಟ್ಟು ಗಾಂಧಿನಗರದಲ್ಲಿ ಹೊಸ ಹವಾ ಸೃಷ್ಟಿಸುತ್ತಿರುವ ಸಿನಿಮಾ '100% ವೆಜ್'.

ಇದು '100% ವೆಜ್' ಸಿನಿಮಾ ಆದರೂ, ನಾನ್ ವೆಜ್ ಊಟ ಗ್ಯಾರೆಂಟಿ ಅಂತಾರೆ ನಿರ್ದೇಶಕರು. ಕೇವಲ ಒಂದೇ ಕೋಣೆಯಲ್ಲಿ 26 ಪಾತ್ರಗಳೊಂದಿಗೆ ಸಿನಿಮಾ ಚಿತ್ರೀಕರಣಗೊಳ್ಳುವುದು ಈ ಚಿತ್ರದ ವಿಶೇಷ.

Kannada movie 100% veg goes on floors

ಲೇಖಕ ರವೀಂದ್ರ ಕೊಟಕಿ ಚೊಚ್ಚಲ ನಿರ್ದೇಶನದ ಚಿತ್ರ ಈ '100% ವೆಜ್'. ಚಿತ್ರದ ಮುಹೂರ್ತ ಕಳೆದ ಭಾನುವಾರ ಸರಳವಾಗಿ ನೆರವೇರಿದೆ. ಸಾಮಾನ್ಯವಾಗಿ ಭಾನುವಾರ ಎಂದರೆ ಬಾಡೂಟ ಇದ್ದೇ ಇರುತ್ತದೆ. ಆದರೆ ಶೀರ್ಷಿಕೆಗೆ ತಕ್ಕಂತೆ ಈ ಚಿತ್ರದ ಮುಹೂರ್ತ '100% ವೆಜ್' ಆಫೀಸ್ ನಲ್ಲಿ ನೆರವೇರಿದೆ.

ಕಥೆ-ಚಿತ್ರಕಥೆ-ಸಾಹಿತ್ಯ-ಸಂಭಾಷಣೆ ಜೊತೆಗೆ ನಿರ್ದೇಶನದ ಹೊಣೆಗಾರಿಕೆ ಹೊತ್ತುಕೊಂಡಿದ್ದಾರೆ ರವೀಂದ್ರ ಕೊಟಕಿ. ಈ ಚಿತ್ರದ ಮ್ಯೂಸಿಕ್ ಕೆಲಸ ಈಗಾಗಲೇ ಚಾಲನೆ ಆಗಿದ್ದು, ಯುವ ಸಂಗೀತ ನಿರ್ದೇಶಕ ಆನಂದ್ ಸಂಗೀತ ಸಂಯೋಜಿಸುತ್ತಿದ್ದಾರೆ. ವಿನೋದ್, ಪ್ರವೀಣ್ ಮತ್ತು ಗೆಳೆಯರ ತಂಡ ಈ ಸಿನಿಮಾ ನಿರ್ಮಿಸುತ್ತಿದ್ದು, ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರೇ ಇರುತ್ತಾರೆ.

Kannada movie 100% veg goes on floors

ವೈಶಾಲಿ ಶಾಂಡಿಲ್ಯ-ಕಾರ್ತಿಕ್ ಶ್ರೀವತ್ಸ ಇಬ್ಬರೂ ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್ಸ್. ಆದ್ರೆ, ಪ್ರವೃತ್ತಿಯಲ್ಲಿ ಕಾರ್ತಿಕ್ ಸಾಫ್ಟು, ವೈಶಾಲಿ ಸಿಕ್ಕಾಪಟ್ಟೆ ಬೋಲ್ಡು. ವ್ಯಕ್ತಿತ್ವದ ವಿಚಾರದಲ್ಲಿ ಇಬ್ಬರೂ ಉತ್ತರ-ದಕ್ಷಿಣ ಧ್ರುವಗಳು. ಇಂತಹ ಜೋಡಿಯ ಮೊದಲ ರಾತ್ರಿಯ ಸುತ್ತಲೂ ನಡೆಯುವ ಕಥೆ ಈ '100% ವೆಜ್'. ಮೊನ್ನೆಯಷ್ಟೇ ಮುಹೂರ್ತ ಮುಗಿಸಿರುವ '100% ವೆಜ್' ಚಿತ್ರ ಈಗ ಶೂಟಿಂಗ್ ನಲ್ಲಿ ಬಿಜಿಯಾಗಿದೆ.

English summary
Kannada movie '100% veg' shooting in progress. The whole movie will be shot in a single room with 26 characters.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada