Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'19-20-21' ಟೀಸರ್ ಬಿಡುಗಡೆ: ಭರವಸೆ ಮೂಡಿಸಿದ ಮಂಸೋರೆಯ ಮತ್ತೊಂದು ಸಿನಿಮಾ
ರಾಷ್ಟ್ರಪ್ರಶಸ್ತಿ ವಿಜೇತ 'ನಾತಿಚರಾಮಿ', 'ಹರಿವು' ಸಿನಿಮಾಗಳ ಸೃಷ್ಟಿಕರ್ತ ಮಂಸೋರೆ, ಕನ್ನಡ ಚಿತ್ರರಂಗದಲ್ಲಿ ಪರ್ಯಾಯ ಸಿನಿಮಾಕರ್ಮಿಗಳಲ್ಲಿ ಒಬ್ಬರು. ಇವರ ನಿರ್ದೇಶನದ ಹೊಸ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ.
ನಿಜ ಘಟನೆಗಳನ್ನು ಆಧರಿಸಿದ '19-20-21' ಸಿನಿಮಾವನ್ನು ಮಂಸೋರೆ ನಿರ್ದೇಶನ ಮಾಡಿದ್ದು, ಚಿತ್ರೀಕರಣ ಹಂತದಲ್ಲಿಯೇ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾದ ಟೀಸರ್ ಇಂದು ಅಂದರೆ ಜನವರಿ 20 ರಂದು ಬಿಡುಗಡೆ ಆಗಿದೆ.
'ಆಕ್ಟ್-1978' ಸಿನಿಮಾ ಮೂಲಕ ಗಮನ ಸೆಳೆದಿದ್ದ ಮಂಸೋರೆ ಇದೀಗ ಮತ್ತೊಂದು 'ಜನ ಜಾಗೃತಿ' ಸಿನಿಮಾ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, ಟೀಸರ್ ನೋಡಿದರೆ ಪೊಲೀಸ್ ದೌರ್ಜನ್ಯದ ವಿರುದ್ಧ ಎತ್ತಿದ ದನಿ ಈ ಸಿನಿಮಾ ಆಗಿರುವ ಸಾಧ್ಯತೆ ಕಂಡುಬರುತ್ತಿದೆ.
'ಆಕ್ಟ್ 1978' ಸಿನಿಮಾ ಮೂಲಕ ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದ ಮಂಸೋರೆ, '19-20-21' ಸಿನಿಮಾ ಮೂಲಕ ಪೊಲೀಸ್ ಬ್ರುಟಾಲಿಟಿ ಬಗ್ಗೆ, ಸರ್ಕಾರದ ವಿರುದ್ಧ ಸಾಮಾನ್ಯರ ಹೋರಾಟದ ಬಗ್ಗೆ ಕತೆ ಹೇಳ ಹೊರಟಿದ್ದಾರೆ.
ಸಿನಿಮಾದ ಟೀಸರ್ ಅಷ್ಟೆ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಟ್ರೈಲರ್ ಜನವರಿ 27 ರಂದು ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಜನರಿಂದ, ಜನರಿಗಾಗಿ ಎಂಬ ಟ್ಯಾಗ್‌ಲೈನ್ ಸಹ ಇದ್ದು, ಗಣರಾಜ್ಯೋತ್ಸವದ ಮಾರನೇಯ ದಿನ ಸಿನಿಮಾದ ಟ್ರೈಲರ್ ಬಿಡುಗಡೆ ಆಗುತ್ತಿರುವುದು ವಿಶೇಷ.
ಮಂಸೋರೆ ನಿರ್ದೇಶನದ ಈ ಸಿನಿಮಾದಲ್ಲಿ ಶೃಂಗ ಬಿವಿ, ಎಂಡಿ ಪಲ್ಲವಿ, ಬಾಲಾಜಿ ಮನೋಹರ್, ರಾಜೇಶ್ ನಟರಂಗ, ಮಹದೇವ್ ಹಡಪದ್, ಪಿಡಿ ಸತೀಶ್, ವೆಂಕಟೇಶ್ ಪ್ರಸಾದ್ ಇನ್ನು ಹಲವರು ನಟಿಸಿದ್ದಾರೆ. ಮಂಸೋರೆಯ ನಂಬಿಕಸ್ತ ತಂತ್ರಜ್ಞರ ತಂಡವೇ ಮತ್ತೆ ಈ ಸಿನಿಮಾಕ್ಕಾಗಿ ಮತ್ತೆ ಒಂದಾಗಿದೆ.