»   » ಮಹಿಳೆಯರ ರಕ್ಷಣೆಗೆ ನಿಂತ ಪ್ರಿಯಾಂಕಾ ಉಪೇಂದ್ರ

ಮಹಿಳೆಯರ ರಕ್ಷಣೆಗೆ ನಿಂತ ಪ್ರಿಯಾಂಕಾ ಉಪೇಂದ್ರ

Posted By:
Subscribe to Filmibeat Kannada
ಪ್ರಿಯಾಂಕಾ ಉಪೇಂದ್ರ ಮಹಿಳೆಯರ ರಕ್ಷಣೆಗೆ ನಿಲ್ಲಲು ರೆಡಿ | Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅಭಿನಯದ '2nd ಹಾಫ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕುತೂಹಲ ಹೆಚ್ಚಿಸಿದೆ. ಪೊಲಿಟಿಕಲ್ ಥ್ರಿಲ್ಲಿಂಗ್ ಕಥೆ ಹೊಂದಿರುವ ಈ ಸಿನಿಮಾ ಟ್ರೈಲರ್ ಮೂಲಕ ಮತ್ತಷ್ಟು ನಿರೀಕ್ಷೆ ಉಳಿಸಿಕೊಂಡಿದೆ.

ಮಧ್ಯಮ ವರ್ಗ ಕುಟುಂಬದ ಪೊಲೀಸ್ ಪೇದೆಯ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅಭಿನಯಸಿದ್ದು, ಪೊಲೀಸ್ ಗೆಟಪ್ ನಲ್ಲಿ ಮೋಡಿ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಖಾಕಿ ತೊಟ್ಟಿರುವ ಪ್ರಿಯಾಂಕಾ ಚಿತ್ರಕ್ಕಾಗಿ ಸಖತ್ ತಯಾರಿ ಮಾಡಿಕೊಂಡಿದ್ದರು.

ವಿಶೇಷ ಅಂದ್ರೆ, ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಕೂಡ ಈ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಪರಿಚಯವಾಗ್ತಿದ್ದಾರೆ. ಮಹಿಳೆಯರ ಅಪಹರಣ, ಅತ್ಯಾಚಾರ, ರಾಜಕೀಯ ನಂಟು, ಹಿರಿಯ ಅಧಿಕಾರಿ ಕಿರುಕುಳ, ಪೊಲೀ ಹುಡುಗರ ಹಾವಳಿ, ಹೀಗೆ ಈ ಎಲ್ಲ ಅಂಶಗಳನ್ನ ಪೊಲೀಸ್ ಪೇದೆಯೊಬ್ಬಳು ಹೇಗೆ ಭೇದಿಸುತ್ತಾಳೆ ಎಂಬುದು ಈ ಥ್ರಿಲ್ಲಿಂಗ್ ಸ್ಟೋರಿ.

ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟ ಉಪ್ಪಿ ಮುದ್ದಿನ ಮಗಳು ಐಶ್ವರ್ಯ

kannada movie 2nd Half trailer released

ಯೋಗಿ ದೇವಗಂಗೆ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಚೇತನ್ ಸೋಸ್ಕ ಅವರ ಸಂಗೀತ ಮತ್ತು ಅಪರಂಜಿತ್ ಶ್ರಿಸ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ನಾಗೇಶ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇನ್ನುಳಿದಂತೆ ಶರತ್ ಲೋಹಿತಾಶ್ವ, ಸುರಭಿ ಸಂತೋಷ್, ಸತ್ಯಜಿತ್, ನವೀನ್ ಸೋಮನಹಳ್ಳಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಸದ್ಯ, ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಆದಷ್ಟೂ ಬೇಗ ತೆರೆಮೇಲೆ ಬರುವ ಯೋಚನೆಯಲ್ಲಿದೆ.

English summary
Kannada actress priyanka upendra starrer '2nd Half' movie trailer released. the movie directed by Yogi Devagange. Priyanka plays the role of a police constable in '2nd Half'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X