»   » ಅಬ್ಬಬ್ಬಾ.. ಒಂದಲ್ಲ, ಎರಡಲ್ಲ, ಮೂರ್ಮೂರು ಬಾರಿ ಸೆನ್ಸಾರ್ ಆಗಿದೆ '5G'!

ಅಬ್ಬಬ್ಬಾ.. ಒಂದಲ್ಲ, ಎರಡಲ್ಲ, ಮೂರ್ಮೂರು ಬಾರಿ ಸೆನ್ಸಾರ್ ಆಗಿದೆ '5G'!

Posted By:
Subscribe to Filmibeat Kannada

ಸೆನ್ಸಾರ್ ಅಂಗಳದಿಂದ ಕ್ಲೀನ್ ಚಿಟ್ ಪಡೆದು ಒಮ್ಮೆ ಪಾಸ್ ಆಗುವುದೇ ದೊಡ್ಡ ಸಾಹಸ. ಅಂಥದ್ರಲ್ಲಿ, ಕನ್ನಡದ '5G' ಸಿನಿಮಾ ಮೂರ್ಮೂರು ಬಾರಿ ಸೆನ್ಸಾರ್ ಆಗಿದೆ ಅಂದ್ರೆ ನೀವು ನಂಬಲೇ ಬೇಕು.

ಅಷ್ಟಕ್ಕೂ, ಮೂರ್ಮಾರು ಬಾರಿ '5G' ಸಿನಿಮಾ ಸೆನ್ಸಾರ್ ಆಗಲು ಕಾರಣ ಚಿತ್ರದಲ್ಲಿ ಆಗಾಗ ಮಾಡಲಾದ ಬದಲಾವಣೆಗಳು.

'5ನೇ ಜನರೇಷನ್'ನಲ್ಲಿ ಮತ್ತೆ ಗಾಂಧಿ ಹುಟ್ಟಿ ಬಂದರೇ......!

kannada-movie-5g-got-censored-thrice

ಯಾರಿಗೂ ತೋರಿಸದೆ ಚಿತ್ರವನ್ನ ಬಿಡುಗಡೆ ಮಾಡುವ ಬದಲು, ಒಂದಷ್ಟು ಮಂದಿಗೆ ತೋರಿಸಿ ಅವರ ಅನಿಸಿಕೆ ಪಡೆದು ಅದಕ್ಕೆ ತಕ್ಕ ಹಾಗೆ ಬದಲಾವಣೆ ಮಾಡಿಕೊಂಡರೆ ಸಿನಿಮಾ ಚೆನ್ನಾಗಿ ಮೂಡಿಬರುತ್ತದೆ ಎಂದು ಪ್ಲಾನ್ ಮಾಡಿಕೊಂಡ ಚಿತ್ರತಂಡ ಸುಮಾರು 70 ಮಂದಿಗೆ '5G' ದರ್ಶನ ಮಾಡಿಸಿತು.

ಎಲ್ಲರ ಅಭಿಪ್ರಾಯಗಳನ್ನು ಪಡೆದು ಚಿತ್ರದಲ್ಲಿ ಬದಲಾವಣೆ ಮಾಡಿದ ಕಾರಣ ಸಿನಿಮಾಗೆ ಮೂರು ಬಾರಿ ಸೆನ್ಸಾರ್ ಮಾಡಲಾಗಿದೆ.

'ಗಾಂಧಿ'ಯಿಂದ 'ಮೋದಿ'ವರೆಗೂ ನಡೆಯುವ ಕಥೆಯೇ '5G'

kannada-movie-5g-got-censored-thrice

ಅಸಲಿಗೆ, ಇಷ್ಟೊಂದು ಬದಲಾವಣೆ ಯಾಕೆ ಅಂದ್ರೆ '5G' ಚಿತ್ರಕಥೆಯೇ ಅಂಥದ್ದು. ದೇಶದ ಗಂಭೀರ ವಿಚಾರಗಳನ್ನು ಹೇಳಲು ಹೊರಟಿರುವ '5G' ಸಿನಿಮಾ ಪ್ರೇಕ್ಷಕರ ಮೇಲೆ ಉತ್ತಮ ಪರಿಣಾಮ ಬೀರಬೇಕು ಎಂಬ ಕಾರಣಕ್ಕೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ಇದೊಂದು ಉತ್ತಮ ಸಿನಿಮಾ ಆಗಲಿದೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ. ಜಗದೀಶ್ ನಿರ್ಮಾಣದ ಗುರುವೇಂದ್ರ ಶೆಟ್ಟಿ ನಿರ್ದೇಶನ ಮಾಡಿರುವ '5G' ಸಿನಿಮಾ ನಾಳೆ (ಆಗಸ್ಟ್ 25) ರಾಜ್ಯಾದ್ಯಂತ ಬಿಡುಗಡೆ ಆಗಲಿದೆ

500 ರೂಪಾಯಿ ನೋಟಿನ ಸುತ್ತ ಹೆಣೆದಿರುವ '5G' ಚಿತ್ರದಲ್ಲಿ ಪ್ರವೀಣ್, ನಿಧಿ ಸುಬ್ಬಯ್ಯ ಮುಖ್ಯಭೂಮಿಕೆಯಲ್ಲಿದ್ದಾರೆ.

English summary
Kannada Movie 5G got censored thrice. Read the article to know the reason.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada