»   » '5ನೇ ಜನರೇಷನ್'ನಲ್ಲಿ ಮತ್ತೆ ಗಾಂಧಿ ಹುಟ್ಟಿ ಬಂದರೇ......!

'5ನೇ ಜನರೇಷನ್'ನಲ್ಲಿ ಮತ್ತೆ ಗಾಂಧಿ ಹುಟ್ಟಿ ಬಂದರೇ......!

Posted By:
Subscribe to Filmibeat Kannada

ಪ್ರಸ್ತುತ ಸಮಾಜದಲ್ಲಿ ಏನೇ ಆದರೂ ಒಂದು ಮಾತು ಸಾಮಾನ್ಯವಾಗಿ ಕೇಳಬಹುದು. ಕೊಲೆ, ಅತ್ಯಾಚಾರ, ದೌರ್ಜನ್ಯ, ಹಿಂಸೆ...ಹೀಗೆ ಏನೇ ಆದರೂ ಅಲ್ಲೊಂದು ಮಾತು ಕೇಳಿ ಬರುತ್ತೆ......''ಒಂದು ವೇಳೆ ಮಹಾತ್ಮ ಗಾಂಧಿ ಬದುಕಿದ್ದರೇ, ಇದನ್ನೆಲ್ಲ ನೋಡಿದ್ದರೇ.....'' ಹೀಗೆ ಬದುಕ್ಕಿದ್ದರೇ, ನೋಡಿದ್ದರೇ.....ಮಾತು ಸಹಜ.

ಅದಕ್ಕೆ ಈ ಸಮಾಜವನ್ನ ತೋರಿಸಲು ಸ್ವತಃ ಮಹಾತ್ಮ ಗಾಂಧಿಯನ್ನ ಬದುಕಿಸಿ ಕರೆತಂದಿದ್ದಾರೆ '5G' ಚಿತ್ರತಂಡ. ಗುರುವೇಂದ್ರ ಶೆಟ್ಟಿ ನಿರ್ದೇಶನದ '5G' ಸಿನಿಮಾ ಇದೇ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಹಲವು ವಿಶೇಷಗಳನ್ನ ಹೊಂದಿರುವ ಈ ಚಿತ್ರ 500 ರೂಪಾಯಿ ಹಳೆ ನೋಟು ಮತ್ತು ಮಹಾತ್ಮ ಗಾಂಧಿ ವಿಚಾರಕ್ಕೆ ಹೆಚ್ಚು ಸುದ್ದಿ ಮಾಡಿದೆ.

'ಗಾಂಧಿ'ಯಿಂದ 'ಮೋದಿ'ವರೆಗೂ ನಡೆಯುವ ಕಥೆಯೇ '5G'

Kannada Movie 5g releasing this august 25th

'5G'....ಇದೊಂದು ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾ. ಎಲ್ಲ ಚಿತ್ರಗಳಂತೆ ಆಕ್ಷನ್, ಲವ್, ಥ್ರಿಲ್ಲ್ ಈ ಚಿತ್ರದಲ್ಲೂ ಇದೆ. ಅದೇ ರೀತಿ ಒಂದು ಹೊಸ ಬಗೆಯ ಪ್ರಯತ್ನವಾಗಿದೆ. ಅಂದ್ಹಾಗೆ, 500 ರೂಪಾಯಿ ಹಳೆ ನೋಟು ಚಿತ್ರದ ಪ್ರಮುಖವಾದ ಕಥಾವಸ್ತು. ಈ ಹಳೆಯ 500 ನೋಟು ಇಡೀ ಸಿನಿಮಾವನ್ನ ಕರೆದುಕೊಂಡು ಹೋಗುತ್ತೆ. 5 ತಲೆಮಾರಿನಲ್ಲಿ ಕಥೆಯಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾ ಅಂಗಗಳು ಹೇಗೆ ಕಾರ್ಯ ನಿರ್ವಹಿಸಿದೆ ಎಂಬುದನ್ನ ಈ ನೋಟಿನ ಮುಖಾಂತರ ತೋರಿಸಲಾಗಿದೆ.

ಆಗಸ್ಟ್ 25 ರಂದು ಸ್ಯಾಂಡಲ್ ವುಡ್ ಗೆ '5G' ಎಂಟ್ರಿ

Kannada Movie 5g releasing this august 25th

500 ನೋಟಿನ ಜೊತೆ ಜೊತೆಯಲ್ಲಿ ಮಹಾತ್ಮ ಗಾಂಧಿಯ ಪಾತ್ರ ಕೂಡ ಮೂಡಿ ಬಂದಿದೆ. 5G ಚಿತ್ರದಲ್ಲಿ ಗಾಂಧಿ ಪಾತ್ರ ನಿರ್ವಹಿಸಿರುವುದು 'ಕೂರ್ಮಾವತಾರ' ಖ್ಯಾತಿಯ ಶಿಕಾರಿಪುರ ಕೃಷ್ಣಮೂರ್ತಿ ಅವರು ಕಾಣಿಸಿಕೊಂಡಿದ್ದಾರೆ. ಉಳಿದಂತೆ 'ಸಿಂಪಲಾಗ್ ಇನ್ನೊಂದು ಲವ್ ಸ್ಟೋರಿ' ಪ್ರವೀಣ್ ಮತ್ತು ನಿಧಿ ಸುಬ್ಬಯ್ಯ ನಾಯಕ, ನಾಯಕಿ ಆಗಿ ಅಭಿನಯಿಸಿದ್ದಾರೆ.

ಶ್ರೀಧರ್ ವಿ.ಸಂಭ್ರಮ್ ಈ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದು, ಗುರು ಪ್ರಶಾಂತ ರೈ ಅವರು ಛಾಯಗ್ರಾಹಣ ಈ ಚಿತ್ರಕ್ಕಿದೆ. ಜಗದೀಶ, ದೀಪು ಹಾಗೂ ಗಿರೀಶ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇನ್ನುಳಿದಂತೆ ಅವಿನಾಶ್, ಸಾಧುಕೋಕಿಲ, 'ಎಡಕಲ್ಲು ಗುಡ್ಡ ಮೇಲೆ' ಚಂದ್ರಶೇಖರ್, ಕೀರ್ತಿಶ್ರೀ ಸ್ವಪ್ನರಾಜ್ ಇತರರು ತಾರಾಬಳಗದಲ್ಲಿದ್ದು, ಆಗಸ್ಟ್ 25 ರಂದು ಬಿಗ್ ಸ್ಕ್ರೀನ್ ಮೇಲೆ ನೋಡಬಹುದಾಗಿದೆ.

English summary
Kannada Movie 5G will be releasing on august 25th. The Movie directed by Guruvendra Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada