For Quick Alerts
  ALLOW NOTIFICATIONS  
  For Daily Alerts

  ಹಳ್ಳಿ ಸೊಗಡಿನ 'ಆನೆಬಲ' ನಾಳೆ ರಾಜ್ಯಾದ್ಯಂತ ಬಿಡುಗಡೆ

  |

  ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ 'ಆನೆಬಲ' ನಾಳೆ (ಫೆಬ್ರವರಿ 28) ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಟ್ರೈಲರ್ ಹಾಗೂ ಹಾಡುಗಳಿಂದ ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡಿರುವ 'ಆನೆಬಲ' ಸಿನಿಮಾ ನಾಳೆ ನಿಮ್ಮೆಲ್ಲರ ಮುಂದೆ ಬರಲಿದೆ.

  ಪ್ರಾಕೃತಿಕ ಸೊಬಗು ಮತ್ತು ಗ್ರಾಮ ಸಂಸ್ಕೃತಿಯನ್ನು ಸಾರುವ ಸಿನಿಮಾ 'ಆನೆಬಲ'. ಮಂಡ್ಯ ಭಾಗದ ಹಳ್ಳಿ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ 'ಆನೆಬಲ' ಚಿತ್ರದಲ್ಲಿ ರಾಗಿ ಮತ್ತು ರಾಗಿ ಮುದ್ದೆಯ ಮಹತ್ವಕ್ಕೆ ಹೆಚ್ಚು ಒತ್ತು ನೀಡಲಾಗಿದೆ.

  ಹೊಸ ನಿರೀಕ್ಷೆ ಹುಟ್ಟು ಹಾಕಿದ ಹೊಸಬರ ಹೊಸ ನಿರೀಕ್ಷೆ ಹುಟ್ಟು ಹಾಕಿದ ಹೊಸಬರ "ಆನೆಬಲ" ಚಿತ್ರ

  'ಆನೆಬಲ' ಚಿತ್ರದ ಕೆಲ ದೃಶ್ಯಗಳನ್ನ ರಿಯಲ್ ಆಗಿ ಜಾತ್ರೆಯಲ್ಲಿ ಚಿತ್ರೀಕರಿಸಲಾಗಿದೆ. ಜೊತೆಗೆ ರಾಗಿ ಮುದ್ದೆ ನುಂಗುವ ಸ್ಪರ್ಧೆಯನ್ನೂ ರಿಯಲ್ ಆಗಿ ಆಯೋಜಿಸಿ ಶೂಟಿಂಗ್ ಮಾಡಲಾಗಿದೆ. ಹೀಗೆ ಹೆಚ್ಚು ನೈಜತೆಯಿಂದ ಚಿತ್ರೀಕರಣಗೊಂಡಿರುವ 'ಆನೆಬಲ' ಚಿತ್ರಕ್ಕೆ ಸೂನಗಹಳ್ಳಿ ರಾಜು ಆಕ್ಷನ್ ಕಟ್ ಹೇಳಿದ್ದಾರೆ.

  ಹೊಸಬರ ವಿನೂತನ ಪ್ರಯೋಗದ 'ಆನೆಬಲ' ಚಿತ್ರದ ಟ್ರೈಲರ್ ಬಿಡುಗಡೆಹೊಸಬರ ವಿನೂತನ ಪ್ರಯೋಗದ 'ಆನೆಬಲ' ಚಿತ್ರದ ಟ್ರೈಲರ್ ಬಿಡುಗಡೆ

  ಯೋಗರಾಜ್ ಭಟ್ ಮತ್ತು ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಹಾಡುಗಳಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಜನತಾ ಟಾಕೀಸ್ ಸಂಸ್ಥೆ ಮೂಲಕ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಅವರು ನಿರ್ಮಿಸಿರುವ ಚಿತ್ರದಲ್ಲಿ ಸಾಗರ್, ರಕ್ಷಿತ, ಮಲ್ಲರಾಜು, ಉದಯ್ ಶ್ವೇತಾ, ಹರೀಶ್ ಶೆಟ್ಟಿ, ಚಿರಂಜೀವಿ, ಮುತ್ತುರಾಜು, ಗೌತಮ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.

  English summary
  Kannada Movie Aanebala is releasing tomorrow (Feb 28th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X