»   » ಹೊಸ ಹೊಸ ಪ್ರತಿಭೆಗಳ ಸಿನಿಮಾ 'ಆರಂಭ' ಶುಭಾರಂಭ

ಹೊಸ ಹೊಸ ಪ್ರತಿಭೆಗಳ ಸಿನಿಮಾ 'ಆರಂಭ' ಶುಭಾರಂಭ

Posted By:
Subscribe to Filmibeat Kannada

ಇತ್ತೀಚೆಗೆ ಬೆಳ್ಳಿತೆರೆಗೆ ಹೊಸ ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಕೆಲವರ ನಸೀಬು ಚೆನ್ನಾಗಿದ್ದರೆ, ಗಾಂಧಿನಗರ ಕೈಬೀಸಿ ಕರೆಯುತ್ತದೆ. ಗ್ರಹಚಾರ ಕೆಟ್ಟರೆ ಕೈ ಬಂದ ತುತ್ತು ಬಾಯಿಗಿಲ್ಲ ಅನ್ನುವಂತಾಗುತ್ತದೆ.

ಅದೇನೆ ಇರಲಿ ನಾವೀಗ ಹೇಳೋಕೆ ಬಂದ ಸಂಗತಿ ಏನೆಂದರೆ, ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಭಿ ಹನಕೆರೆ ನಿರ್ದೇಶನದಲ್ಲಿ ಈ ದಿನ ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿರುವ "ಆರಂಭ" "The Last Chance"ಎಂಬ ಅಡಿಬರಹದಲ್ಲಿ ಬರುತ್ತಿರುವ ಚಿತ್ರದ ಬಗ್ಗೆ. ಈ ಮೊದಲು ಹಲವಾರು ಗಾಸಿಪ್ ಗಳಿಂದ ಸುದ್ದಿ ಮಾಡಿದ್ದ ಈ ಚಿತ್ರ ದಾವಣಗೆರೆಯ ತ್ರಿಶೂಲ್ ಚಿತ್ರಮಂದಿರದಲ್ಲಿ ಕೊನೆಗೂ ಭರ್ಜರಿಯಾಗಿ ತೆರೆ ಮೇಲೆ ಬರುತ್ತಿದೆ. ['ಆರಂಭ' ಚಿತ್ರದ ಟೀಸರ್ ನಲ್ಲಿ ಇದೇನಿದು 'ಆ' ದೃಶ್ಯ?]

Mithun Prakash Starrer Kannada movie Aarambha release

ಇದಕ್ಕೂ ಮೊದಲು 'ಆರಂಭ' ಚಿತ್ರದ ಉಲ್ಟಾ ಹಾಡೊಂದು ಯೂಟ್ಯೂಬ್ ನಲ್ಲಿ ಭಾರಿ ಫೇಮಸ್ ಆಗಿತ್ತು. ಇದು ಜನರ ಮೆಚ್ಚುಗೆಗೆ ಪಾತ್ರವಾಗಿ ಮಾಧ್ಯಮ ಮಿತ್ರರಿಂದಲೂ ಗುರುತಿಸಲ್ಪಟ್ಟಿತ್ತು. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಊರಾದ ಕಣಗಾಲ್ ನಲ್ಲಿ ಚಿತ್ರೀಕರಣ ನಡೆದಿರುವುದು ಈ ಚಿತ್ರದ ಇನ್ನೊಂದು ವಿಶೇಷ. [ಪ್ರಪಂಚದ ಮೊದಲ ಉಲ್ಟಾ ಹಾಡು ಇನ್ನೂ ನೋಡಿಲ್ವಾ!]

ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ನಿರ್ವಾಹಕರಾಗಿ (ಪ್ರೊಡಕ್ಷನ್ ಮ್ಯಾನೇಜರ್) ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ್ ಮಧುಗಿರಿ ಅವರ ಪುತ್ರ ಮಿಥುನ್ ಪ್ರಕಾಶ್ 'ಆರಂಭ' ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಗೋವಾ, ಮುಂಬೈ, ದೆಹಲಿ, ಪುಣೆ, ಕೋಲ್ಕತ್ತಾ, ಚೆನ್ನೈ, ಕೊಯಮತ್ತೂರು, ಹೊಸೂರು, ಕಾಸರಗೋಡು ಮತ್ತಿತ್ತರ ಕಡೆ 'ಆರಂಭ' ಚಿತ್ರವನ್ನು ಚಿತ್ರೀಕರಿಸಲಾಗಿದೆ.

Mithun Prakash Starrer Kannada movie Aarambha release

ಗುರುಕಿರಣ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕವಿರಾಜ್, ಗೋಟುರಿ ಸಾಹಿತ್ಯದಲ್ಲಿ 'ಆರಂಭ' ಚಿತ್ರದ ಹಾಡುಗಳು ಮೂಡಿಬಂದಿವೆ. ಅಭಿರಾಮಿ, ರಸಗವಳ ನಾರಾಯಣ್, ಬೇಬಿ ಹಾಸಿನಿ, ಪಾಂಡುಕುಮಾರ್, ಅಭಿರಾಮ್, ಬ್ಯಾಂಕ್ ಜನಾರ್ಧನ್, ಜೋಗಿ ನಾಗರಾಜು ಮೊದಲಾದ ತಾರಾಗಣ ಚಿತ್ರದಲ್ಲಿದೆ.

English summary
Kannada movie Aarambha released today(July 3). The Movie features Mithun Prakash, Abhirami, The movie is directed by S Abhi Hanakere

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada