»   » ಕನ್ನಡದ ಈ ಎಲ್ಲ ಸ್ಟಾರ್ ಗಳು ಫಿಧಾ ಆಗಿರುವುದು ಈ ಒಂದು ಡ್ರೆಸ್ ನೋಡಿ

ಕನ್ನಡದ ಈ ಎಲ್ಲ ಸ್ಟಾರ್ ಗಳು ಫಿಧಾ ಆಗಿರುವುದು ಈ ಒಂದು ಡ್ರೆಸ್ ನೋಡಿ

Posted By:
Subscribe to Filmibeat Kannada

ಸಿನಿಮಾ ತಾರೆಯರು ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕುತ್ತಾರೆ. ಪ್ರತಿ ದೃಶ್ಯಕ್ಕೆ ತಕ್ಕಂತೆ ವಿಧ ವಿಧವಾದ ಬಟ್ಟೆಯನ್ನು ತೊಡುತ್ತಾರೆ. ಡಿಫರೆಂಟ್ ಆಗಿರುವ ಸ್ಟೈಲಿಶ್ ಡ್ರೆಸ್ ಗಳ ಮೂಲಕ ತೆರೆ ಮೇಲೆ ನಟರು ಎಂಟ್ರಿ ಕೊಡುತ್ತಾರೆ. ಸ್ಟಾರ್ ಗಳು ಹಾಕುವ ಡ್ರೆಸ್ ಗಳನ್ನು ಅವರ ಅಭಿಮಾನಿಗಳು ಕೂಡ ಫಾಲೋ ಮಾಡುತ್ತಾರೆ.

ಪ್ರತಿ ಸಿನಿಮಾ ನಟರಿಗೆ ಅವರದ್ದೆ ಆದ ಒಂದು ಸ್ಟೈಲ್ ಇರುತ್ತದೆ. ಅದಕ್ಕೆ ತಕ್ಕಂತೆ ಅವರು ತಮ್ಮ ಬಟ್ಟೆ, ಅದರ ಬಣ್ಣ ಎಲ್ಲವನ್ನು ಆಯ್ಕೆ ಮಾಡುತ್ತಾರೆ. ಆದರೆ ಇದೀಗ ಕನ್ನಡ ಸ್ಟಾರ್ ನಟರಾದ ದರ್ಶನ್, ಉಪೇಂದ್ರ, ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಮತ್ತು ಗಣೇಶ್ ರಿಗೆ ಒಂದೇ ರೀತಿಯ ಬಟ್ಟೆಯ ಮೇಲೆ ಲವ್ ಆಗಿದೆ. ಹೌದು, ಬಿಳಿ ಬಣ್ಣದ ಪಂಚೆ ಅಂದರೆ ಈ ಎಲ್ಲ ನಟರಿಗೆ ತುಂಬ ಫೇವರೇಟ್ ಆಗಿದೆ. ಅಂದಹಾಗೆ, ಯಾವ ಯಾವ ಸಿನಿಮಾಗಳಲ್ಲಿ ಯಾವ ಯಾವ ನಟರು ಈ ರೀತಿಯ ಲುಕ್ ನಲ್ಲಿ ಮಿಂಚಿದ್ದಾರೆ ಎನ್ನುವ ಸಣ್ಣ ಪಟ್ಟಿ ಮುಂದಿದೆ ಓದಿ..

ತಾರಕ್

'ತಾರಕ್' ಸಿನಿಮಾದಲ್ಲಿ ಡಿ ಬಾಸ್ ದರ್ಶನ್ ಬಿಳಿ ಬಣ್ಣ ಪಂಚೆಯಲ್ಲಿ ಪಳ ಪಳ ಹೊಳೆಯುತ್ತಿದ್ದರು. ದರ್ಶನ್ ಅವರ ಅಭಿಮಾನಿಗಳಿಗೆ ಅವರ ಸಿಂಪಲ್ ಗೆಟಪ್ ತುಂಬಾನೇ ಇಷ್ಟ ಆಗಿತ್ತು.

ಚಮಕ್

ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ 'ಚಮಕ್' ಸಿನಿಮಾದಲ್ಲಿ ಸಖತ್ ಸ್ಟೈಲಿಶ್ ಡ್ರೆಸ್ ಗಳಲ್ಲಿ ಕಾಣಿಸಿಕೊಂಡಿದ್ದರು. ಅದರ ಜೊತೆಗೆ ಅವರ ಪಂಚೆಯ ಲುಕ್ ಕೂಡ ಗಮನ ಸೆಳೆದಿತ್ತು.

ದೊಡ್ಮನೆ ಹುಡ್ಗ

'ದೊಡ್ಮನೆ ಹುಡ್ಗ' ಸಿನಿಮಾದ ಹಾಡಿನಲ್ಲಿ ಪುನೀತ್ ರಾಜ್ ಕುಮಾರ್ ಬಿಳಿ ಪಂಚೆಯನ್ನು ತೊಟ್ಟು ಹಾಡಿಗೆ ಕುಣಿದಿದ್ದರು. ಆ ಬಿಳಿ ಬಟ್ಟೆಯಲ್ಲಿ ಅಪ್ಪು ಸೊಗಸಾಗಿ ಕಾಣುತ್ತಿದ್ದರು.

ರಿಯಾಲಿಟಿ ಶೋ ದಿಂದ ಈ ಸ್ಯಾಂಡಲ್ ವುಡ್ ಸ್ಟಾರ್ ಗಳು ದೂರ ಇರುವುದು ಏಕೆ?

ಶಿವಲಿಂಗ

ಶಿವರಾಜ್ ಕುಮಾರ್ ತಮ್ಮ 'ಶಿವಲಿಂಗ' ಸಿನಿಮಾದಲ್ಲಿ ಬಿಳಿ ಪಂಚೆ ಉಟ್ಟು ಮಿಂಚಿದ್ದರು. ಈ ಸಿನಿಮಾದ ಒಂದು ಹಾಡಿನಲ್ಲಿ ಶಿವಣ್ಣ ಪಂಚೆ ಧರಿಸಿದ್ದರು. ಅದೇ ಶೈಲಿಯ ಕಟ್ ಔಟ್ ಚಿತ್ರಮಂದಿರದ ಮುಂದೆ ರಾರಾಜಿಸಿತ್ತು.

ಉಪ್ಪಿ 2

'ಉಪ್ಪಿ 2' ಸಿನಿಮಾದ ನೀನು ಪಾತ್ರಕ್ಕೆ ಉಪೇಂದ್ರ ತುಂಬ ಸರಳವಾಗಿ ಒಂದು ಬಿಳಿ ಪಂಚೆ ಮತ್ತು ಬಿಳಿ ಅಂಗಿಯನ್ನು ತೊಡಿಸಿದ್ದರು. ಸಿನಿಮಾದ ಬಹುಪಾಲು ಭಾಗ ಇದೇ ಬಟ್ಟೆಯಲ್ಲಿ ಉಪ್ಪಿ ಇದ್ದರು.

'ಓಂ 2' ಸಿನಿಮಾಗೆ ದರ್ಶನ್, ಸುದೀಪ್, ಯಶ್ ರಲ್ಲಿ ಯಾರು ಹೀರೋ?

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದಲ್ಲಿ ಯಶ್ ಬಿಳಿ ಪಂಚೆ ತೊಟ್ಟು ತಮ್ಮ ಕನಸಿನ ರಾಣಿ ರಾಧಿಕಾ ಪಂಡಿತ್ ಗೆ ಪ್ರೊಪೋಸ್ ಮಾಡುತ್ತಾರೆ.

ಜಾಹಿರಾತಿನಲ್ಲಿ

ಈ ನಟರ ರೀತಿ ಕಿಚ್ಚ ಸುದೀಪ್ ಕೂಡ ಒಂದು ಜಾಹಿರಾತಿನಲ್ಲಿ ಬಿಳಿ ಪಂಚೆ ಉಟ್ಟಿದ್ದಾರೆ. ಸುದೀಪ್ ಫ್ಯಾನ್ಸ್ ಸಹ ಕಿಚ್ಚನ ಈ ಹೊಸ ಅವತಾರವನ್ನು ತುಂಬ ಮೆಚ್ಚಿಕೊಂಡಿದ್ದಾರೆ.

English summary
Kannada movie actors Darshan, Upendra, Shivaraj Kumar, Yash, Puneeth Rajkumar in dothies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada