TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಪ್ರೇಮಿಗಳ ದಿನಕ್ಕೆ ಅಂಬಿ ಪುತ್ರ ಅಭಿಷೇಕ್ ರಿಂದ ದೊಡ್ಡ ಗಿಫ್ಟ್: ಏನದು.?
ತಂದೆ ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಅಗಲಿದ ನೋವು ಕಾಡುತ್ತಿದ್ದರೂ, ಎಲ್ಲವನ್ನೂ ಎದೆಯಲ್ಲಿ ಅದುಮಿಟ್ಟುಕೊಂಡು ಕೆಲವೇ ದಿನಗಳಲ್ಲಿ ವಾಪಸ್ ಶೂಟಿಂಗ್ ಗೆ ಹಾಜರ್ ಆಗಿ ಅಭಿಷೇಕ್ ವೃತ್ತಿಪರತೆ ಮೆರೆದಿದ್ದರು.
ಅಭಿಷೇಕ್ ಅಂಬರೀಶ್ ಅಭಿನಯದ ಚೊಚ್ಚಲ ಚಿತ್ರ 'ಅಮರ್' ಚಿತ್ರೀಕರಣದ ಕೊನೆಯ ಹಂತ ತಲುಪಿದೆ. ಸಿಂಗಾಪುರದಲ್ಲಿ ಶೂಟಿಂಗ್ ಮುಗಿದರೆ, 'ಅಮರ್' ಚಿತ್ರ ನೇರವಾಗಿ ಎಡಿಟಿಂಗ್ ಟೇಬಲ್ ಮೇಲೆ ಹೋಗಲಿದೆ.
ಹೀಗಿರುವಾಗಲೇ, ಫೆಬ್ರವರಿ 14.. ಅಂದ್ರೆ ಪ್ರೇಮಿಗಳ ದಿನಕ್ಕೆ ಒಂದು ದೊಡ್ಡ ಗಿಫ್ಟ್ ಕೊಡಲು ಅಭಿಷೇಕ್ ಮತ್ತು 'ಅಮರ್' ಚಿತ್ರತಂಡ ಪ್ಲಾನ್ ಮಾಡಿದೆ. ಏನದು ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...
ಪ್ರೇಮಿಗಳ ದಿನಕ್ಕೆ ಟೀಸರ್ ಬಿಡುಗಡೆ
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕರಾಗಿ ನಟಿಸುತ್ತಿರುವ 'ಅಮರ್' ಚಿತ್ರದ ಮೊದಲ ಟೀಸರ್ ಪ್ರೇಮಿಗಳ ದಿನಾಚರಣೆಯಂದು (ಫೆಬ್ರವರಿ 13ರ ಮಧ್ಯರಾತ್ರಿ 12 ಗಂಟೆಗೆ) ಬಿಡುಗಡೆಯಾಗಲಿದೆ. ಸಂದೇಶ್ ಕಂಬೈನ್ಸ್ ಮೂಲಕ ಸಂದೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಅಂಬರೀಶ್ ಅಭಿನಯಿಸಿದ ಸಾಕಷ್ಟು ಚಿತ್ರಗಳನ್ನು ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ.
ಅಂಬರೀಶ್ ಪುತ್ರ 'ಅಮರ್' ಎಂಟ್ರಿ ಯಾವಾಗ?
ಹೆಚ್ಚು ಲೊಕೇಷನ್ ಗಳಲ್ಲಿ ಚಿತ್ರೀಕರಣಗೊಂಡ ಚಿತ್ರ
ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಮಣಿಪಾಲ, ಊಟಿ, ಕೇರಳ, ಕೊಯಮತ್ತೂರು, ಸ್ವಿಜರ್ ಲ್ಯಾಂಡ್ ನಲ್ಲಿ 'ಅಮರ್' ಚಿತ್ರೀಕರಣಗೊಂಡಿದೆ. ಫೆಬ್ರವರಿ 11 ರಿಂದ ಸಿಂಗಾಪುರದಲ್ಲಿ ಶೂಟಿಂಗ್ ಆರಂಭವಾಗಲಿದೆ. ಅತಿಹೆಚ್ಚು ಲೊಕೇಷನ್ ಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಚಿತ್ರ ಎಂಬ ಹೆಗ್ಗಳಿಕೆಗೆ 'ಅಮರ್' ಪಾತ್ರವಾಗಿದೆ.
ಅಂಬಿ ಪುತ್ರ ಅಭಿಷೇಕ್ ಮತ್ತು 'ದೊಡ್ಮಗ' ದರ್ಶನ್ ಕೊಟ್ರು ಬ್ರೇಕಿಂಗ್ ನ್ಯೂಸ್
'ಅಮರ್' ಚಿತ್ರತಂಡದ ಕುರಿತು...
ನಾಗಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಸತ್ಯ ಹೆಗಡೆ ಛಾಯಾಗ್ರಹಣ, ಹರ್ಷ ಸಂಕಲನ, ಧನಂಜಯ್, ಇಮ್ರಾನ್, ಕಲೈ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ಥ್ರಿಲ್ಲರ್ ಮಂಜು, ಅಂಬು ಅರಿವು ಅವರ ಸಾಹಸ ನಿರ್ದೇಶನವಿದೆ. ಈ ಚಿತ್ರದ ತಾರಾಬಳಗದಲ್ಲಿ ಅಭಿಷೇಕ್ ಅಂಬರೀಶ್, ತಾನ್ಯಾ ಹೋಪ್, ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧುಕೋಕಿಲ, ನಿರೂಪ್ ಭಂಡಾರಿ ಮುಂತಾದವರಿದ್ದಾರೆ.
ಶೂಟಿಂಗ್ ಹಂತದಲ್ಲೇ ದಾಖಲೆ ಮಾಡಲು ಹೊರಟ 'ಅಮರ್
ವಿಶೇಷ ಪಾತ್ರದಲ್ಲಿ ದರ್ಶನ್
'ಅಮರ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್, ಅಭಿಷೇಕ್ ಅಭಿನಯದ ಹಾಡೊಂದರ ಚಿತ್ರೀಕರಣ ಇತ್ತೀಚೆಗಷ್ಟೇ 'ದಿ ಕ್ಲಬ್' ನಲ್ಲಿ ನಡೆಯಿತು.