»   » ವರಮಹಾಲಕ್ಷ್ಮಿ ಹಬ್ಬಕ್ಕೆ ರವಿಚಂದ್ರನ್ 'ಅಪೂರ್ವ'

ವರಮಹಾಲಕ್ಷ್ಮಿ ಹಬ್ಬಕ್ಕೆ ರವಿಚಂದ್ರನ್ 'ಅಪೂರ್ವ'

Posted By:
Subscribe to Filmibeat Kannada

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಒನ್ ಮ್ಯಾನ್ ಶೋ 'ಅಪೂರ್ವ' ರಿಲೀಸ್ ಆಗಿರ್ಬೇಕಿತ್ತು. ಆದ್ರೆ, ಅನಿವಾರ್ಯ ಕಾರಣಗಳಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುತ್ತಲೇ ಇದೆ.

ಯುಗಾದಿ ಹಬ್ಬದಂದು ಬಿಡುಗಡೆ ಆಗಬೇಕಿದ್ದ 'ಅಪೂರ್ವ' ಚಿತ್ರವನ್ನ ವರಮಹಾಲಕ್ಷ್ಮೀ ಹಬ್ಬದ ದಿನ ತೆರೆಗೆ ತರುವುದಕ್ಕೆ ರವಿಮಾಮ ನಿರ್ಧರಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಕೊಂಚ ಬಾಕಿ ಉಳಿದಿರುವ ಕಾರಣ ಆಗಸ್ಟ್ 28, ಅಂದ್ರೆ ವರಮಹಾಲಕ್ಷ್ಮಿ ಹಬ್ಬದ ದಿನ ಸಿನಿಮಾ ಬಿಡುಗಡೆ ಮಾಡುವುದಾಗಿ ರವಿಚಂದ್ರನ್ ತಿಳಿಸಿದ್ದಾರೆ. [ಚಕಿತಗೊಳಿಸುವ ರವಿಚಂದ್ರನ್ 'ಅಪೂರ್ವ' ಸಂಗತಿಗಳು]


apoorva

'ಲವ್ ಯು ಆಲಿಯ' ಮತ್ತು ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಬಿಜಿಯಾಗಿದ್ದರಿಂದ 'ಅಪೂರ್ವ' ಚಿತ್ರ ಕೊಂಚ ತಡವಾಗುತ್ತಿದೆ. 'ಲವ್ ಯು ಆಲಿಯ' ಚಿತ್ರದ ಆಡಿಯೋ ಮೊನ್ನೆಯಷ್ಟೇ ಬಿಡುಗಡೆ ಆಗಿದೆ. ಆಗಸ್ಟ್ ವೇಳೆಗೆ ತೆರೆಗೆ ಬರುವ ನಿರೀಕ್ಷೆ ಇದೆ. 'ಲವ್ ಯು ಆಲಿಯ' ಬೆಳ್ಳಿತೆರೆಗೆ ಅಪ್ಪಳಿಸಿದ ಬಳಿಕ 'ಅಪೂರ್ವ' ರಿಲೀಸ್ ಮಾಡ್ತಾರಂತೆ ರವಿಚಂದ್ರನ್. [ತಂದೆಯ ಹುಟ್ಟುಹಬ್ಬಕ್ಕೆ ರವಿಚಂದ್ರನ್ 'ಅಪೂರ್ವ' ಕನಸು]


19 ವರ್ಷದ ಯುವತಿ ಮತ್ತು 61 ವರ್ಷದ ಮುದುಕನ ನಡುವಿನ ಅಪರೂಪದ ಪ್ರೇಮ ಕಥೆ ಈ 'ಅಪೂರ್ವ'. ಒಂದೇ ಲಿಫ್ಟ್ ನಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವುದು 'ಅಪೂರ್ವ' ಚಿತ್ರದ ಸ್ಪೆಷಾಲಿಟಿ. ಕಥೆ-ಚಿತ್ರಕಥೆ-ನಿರ್ದೇಶನ-ಸಂಗೀತ ನಿರ್ದೇಶನ ಸೇರಿದಂತೆ ಸಂಪೂರ್ಣ ಹೊಣೆಗಾರಿಕೆ ಹೊತ್ತು ರವಿಚಂದ್ರನ್ 'ಅಪೂರ್ವ' ಚಿತ್ರವನ್ನ ರೆಡಿಮಾಡಿದ್ದಾರೆ.

English summary
Most Awaited Kannada Movie Apoorva is all set to release on Varamahalakshmi festival (August 28th). 'Apoorva' is directed by Crazy Star V.Ravichandran.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada