»   » ಸರ್ಜಾ ಕುಟುಂಬದ ಕುಡಿ ಪವನ್ ಅಭಿನಯದ 'ಅಥರ್ವ' ಟೀಸರ್

ಸರ್ಜಾ ಕುಟುಂಬದ ಕುಡಿ ಪವನ್ ಅಭಿನಯದ 'ಅಥರ್ವ' ಟೀಸರ್

Posted By:
Subscribe to Filmibeat Kannada

ಖ್ಯಾತ ಖಳನಟ ಅರ್ಜುನ್ ಸರ್ಜಾ ಅವರ ಕುಟುಂಬದಿಂದ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಡುತ್ತಿದೆ. ಸದ್ಯ, ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ಅವರನ್ನ ಚಂದನವನಕ್ಕೆ ಪರಿಚಯಿಸುವ ಉತ್ಸಾಹದಲ್ಲಿರುವ ಆಕ್ಷನ್ ಕಿಂಗ್ ಈಗ ಮತ್ತೊಬ್ಬ ಅಳಿಯನನ್ನ ಸ್ವಾಗತಿಸಬೇಕಾಗಿದೆ.

ಹೌದು, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ನಂತರ ಈಗ ಪವನ ತೇಜ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಪವನ್ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ 'ಅಥರ್ವ' ಈಗ ಟೀಸರ್ ಬಿಡುಗಡೆ ಮಾಡಿದ್ದು, ಪವನ್ ಎಂಟ್ರಿ ಅದ್ಧೂರಿಯಾಗಿದೆ.

ಸೋದರಳಿಯನ 'ಭರ್ಜರಿ' ನೋಡಿ ಅರ್ಜುನ್ ಸರ್ಜಾ ಫುಲ್ ಖುಷ್.!

ಪವನ್ ತೇಜ, ಅರ್ಜುನ್ ಸರ್ಜಾ ಅವರ ತಂಗಿ ಮಗ. ಎಲ್ಲ ರೀತಿಯ ಪೂರ್ವ ತಯಾರಿ ಮಾಡಿಕೊಂಡೇ ಸಿನಿಮಾರಂಗಕ್ಕೆ ಪ್ರವೇಶಿಸಿದ್ದಾರೆ. ಆಕ್ಟಿಂಗ್, ಡ್ಯಾನ್ಸ್, ಫೈಟ್ ಹೀಗೆ ಎಲ್ಲವನ್ನ ತರಬೇತಿ ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಪವನ್ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, 15 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಮೈಸೂರಿನಲ್ಲಿ ಶಿಕ್ಷಣ ಮುಗಿಸಿರುವ ಪವನ್, ರಂಗಭೂಮಿಯಲ್ಲಿ ಪಳಗಿದ್ದಾರೆ.

kannada movie atharva teaser released

ಅಂದ್ಹಾಗೆ, ,ಅರುಣ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸನಂ ಶೆಟ್ಟಿ ನಾಯಕಿಯಾಗಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ. ಇನ್ನುಳಿದಂತೆ ರಂಗಾಯಣ ರಘು, ಧರ್ಮೇಂದ್ರ ಅರಸ್, ಯಶವಂತ್ ಶೆಟ್ಟಿ, ಸುಚ್ಚೇಂದ್ರ ಪ್ರಸಾದ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಫೆಬ್ರವರಿ ತಿಂಗಳಲ್ಲಿ ತೆರೆಮೇಲೆ ಬರುವ ಸಾಧ್ಯತೆ ಇದೆ.

ಅಥರ್ವ ಟೀಸರ್ ನೋಡಿ

English summary
Kannada Actor Arjun sarja nephew Pawan tej starrer Kannada movie atharva teaser has released. the movie directed by arun and sanam shetty playing female lead opposite of pawan tej.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X