For Quick Alerts
  ALLOW NOTIFICATIONS  
  For Daily Alerts

  ಅಭಿನಯ ಚಕ್ರವರ್ತಿ ಸುದೀಪ್ ಹೊಸ ಚಿತ್ರ ಆರಂಭ

  By Rajendra
  |

  ತೆಲುಗು, ತಮಿಳು ಭಾಷೆಯ 'ಈಗ' ಚಿತ್ರದ ಯಶಸ್ಸಿನ ಅಲೆಯಲ್ಲಿ ಜೀಕಾಡಿದ ಅಭಿನಯ ಚಕ್ರವರ್ತಿ ಸುದೀಪ್ ಈಗ ಗಾಂಧಿನಗರಲ್ಲಿ ಲ್ಯಾಂಡ್ ಆಗಿದ್ದಾರೆ. ಬಚ್ಚನ್ ಚಿತ್ರದ ಚಿತ್ರೀಕರಣ ಕೆಂಗೇರಿಯ ಇಂಡೊ ಅಮೆರಿಕನ್ ಆಸ್ಪತ್ರೆಯಲ್ಲಿ ಚಾಲನೆ ಪಡೆದುಕೊಂಡಿತು.

  ಶಶಾಂಕ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದನ್ನು ಉದಯ್ ಮೆಹ್ತಾ ನಿರ್ಮಿಸುತ್ತಿದ್ದಾರೆ. ಈಗಾಗಲೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿವೆ. ಮೊದಲನೇ ದಿನದ ಚಿತ್ರೀಕರಣ ಕೆಂಗೇರಿಯಲ್ಲಿ ನಡೆದರೆ ಎರಡನೇ ದಿನದ ಚಿತ್ರೀಕರಣ ಹೆಬ್ಬಾಳದ ಕಾವೇರಿ ಆಸ್ಪತ್ರೆಯಲ್ಲಿ ನಡೆಯಿತು.

  ಚಿತ್ರೀಕರಣದಲ್ಲಿ ಸುದೀಪ್, 'ಗೋವಿಂದಾಯ ನಮಃ' ಚಿತ್ರದ ಪ್ಯಾರ್ ಗೆ ಆಗ್ಬಿಟ್ಟೈತೆ ಚಿತ್ರದ ಪಾರುಲ್ ಯಾದವ್ ಹಾಗೂ ನಟ ನಾಸಿರ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಶುಕ್ರವಾರದಿಂದ (ಜು.20) ನೈಸ್ ರಸ್ತೆಯಲ್ಲಿ ಚಿತ್ರೀಕರಣ ನಡೆಯಲಿದೆ. ಮಲ್ಲು ಬೆಡಗಿ ಭಾವನಾ ಚಿತ್ರದ ನಾಯಕಿ.

  ತೆಲುಗು ಚಿತ್ರರಂಗದ ಸ್ಟಾರ್ ಜಗಪತಿ ಬಾಬು ಅವರು ಚಿತ್ರದಲ್ಲಿ ವಿಶೇಷ ಪಾತ್ರವನ್ನು ಪೋಷಿಸುತ್ತಿದ್ದಾರೆ. ಆಶಿಷ್ ವಿದ್ಯಾರ್ಥಿ, ಪ್ರದೀಪ್ ಸಿಂಗ್ ರಾವತ್ ಹಾಗೂ ರವಿಶಂಕರ್ ಚಿತ್ರದ ಪಾತ್ರವರ್ಗದಲ್ಲಿರುವ ಇತರ ತಾರೆಗಳು. ಚಿತ್ರದ ಇನ್ನೊಬ್ಬ ನಾಯಕಿಯ ಆಯ್ಕೆ ಇನ್ನೂ ಅಂತಿಮವಾಗಿಲ್ಲ.

  ಬಚ್ಚನ್ ಮತ್ತೊಬ್ಬ ನಾಯಕಿಗಾಗಿ ಬಾಲಿವುಡ್ ಬೆಡಗಿ ಟುಲಿಪ್ ಜೋಷಿ ಅವರನ್ನು ಕರೆತರುವ ಸಾಧ್ಯತೆಗಳಿವೆ. ದಂತದಗೊಂಬೆಯಂತಹ ಈ ಚೆಲುವೆ ಈ ಹಿಂದೆ ಸೂಪರ್ ಸ್ಟಾರ್ ಉಪೇಂದ್ರ ಅವರ 'ಸೂಪರ್' ಚಿತ್ರದಲ್ಲಿ ಅಭಿನಯಿಸಿದ್ದರು.

  ಶೇಖರ್ ಚಂದ್ರು ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. ಆರಂಭದಿಂದಲೂ 'ಬಚ್ಚನ್' ಚಿತ್ರಕ್ಕೆ ನಾಯಕಿಯರು ಕಾರಣಾಂತರಗಳಿಂದ ಬದಲಾಗುತ್ತಲೇ ಇದ್ದಾರೆ. ಮೊದಲು ನಯನತಾರಾ ನಾಯಕಿ ಎನ್ನಲಾಗಿತ್ತು. ಬಳಿಕ ಐಂದ್ರಿತಾ ರೇ ಹೆಸರು ಕೇಳಿಬಂದಿತ್ತು. ಕಡೆಗೆ ದೀಪಾ ಸನ್ನಿಧಿ ಎಂಬ ಸುದ್ದಿ ತೇಲಿಬಂದ ಹಿನ್ನೆಲೆಯಲ್ಲೇ ಠುಸ್ ಆಗಿತ್ತು. ಕಡೆಗೆ ಫಿಕ್ಸ್ ಆಗಿದ್ದು ಮಾತ್ರ ಭಾವನಾ.

  ಅಮಿತಾಬ್ ಬಚ್ಚನ್ ಅವರಿಂದ ಸ್ಫೂರ್ತಿ ಪಡೆದು ಈ ಚಿತ್ರದ ಕಥೆ ಬರೆಯಲಾಗಿದೆ, ಅದೇ ಕಾರಣದಿಂದ 'ಆಂಗ್ರಿ ಯಂಗ್ ಮ್ಯಾನ್' ಎಂಬ ಅಡಿಬರಹವನ್ನು ಬಚ್ಚನ್ ಚಿತ್ರಕ್ಕೆ ಕೊಡಲಾಗಿದೆ" ಎಂದಿದ್ದಾರೆ ಚಿತ್ರದ ನಿರ್ದೇಶಕ ಶಶಾಂಕ.

  "ಒಳ್ಳೇತನಾನ ವೀಕ್ನೆಸ್ ಅಂದ್ಕೊಳ್ಳೋದು ಮುಠ್ಠಾಳತನ... ಒಳ್ಳೆಯವನಿಗೆ ಕೋಪ ಬರಿಸೋದು ಅದಕ್ಕಿಂತ ದೊಡ್ಡ ಮುಠ್ಠಾಳತನ..." "ಖುಷಿಯಾಗಿದ್ದಾಗ ದೇವ್ರು ಮೈಮರೆತು ಎಂಥೆಂಥವರನ್ನೋ ಸೃಷ್ಟಿ ಮಾಡ್ಬಿಡ್ತಾನೆ...! ಕೋಪ ಬಂದಾಗ ಮಾತ್ರ ನನ್ನಂಥವರನ್ನ ಸೃಷ್ಟಿ ಮಾಡ್ತಾನೆ...!" ಚಿತ್ರದ ಟೀಸರ್ ಈಗಾಗಲೆ ಅಭಿಮಾನಿಗಳ ಶಿಳ್ಳೆ ಗಿಟ್ಟಿಸಿದೆ. (ಏಜೆನ್ಸೀಸ್)

  English summary
  Abhinaya Chakravarthi Sudeep, Bhavana and Parul Yadav lead Kannada film Bachchan shooting is progressing at brisk pace. The film features background score and soundtrack composed by V. Harikrishna and cinematography handled by Shekar Chandru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X