»   » 'ಬೆಂಗಳೂರು 560023', ನ.6ರ ಬದಲು ನ.20ಕ್ಕೆ ಬಿಡುಗಡೆ!

'ಬೆಂಗಳೂರು 560023', ನ.6ರ ಬದಲು ನ.20ಕ್ಕೆ ಬಿಡುಗಡೆ!

Posted By:
Subscribe to Filmibeat Kannada

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಸೂಪರ್ ಸ್ಟಾರ್ ಜೆ.ಕೆ ಅಲಿಯಾಸ್ ಜಯ ಕಾರ್ತಿಕ್, ಚಂದನ್, ಧ್ರುವ ರಾಜೀವ್, ಚಿಕ್ಕಣ್ಣ ಮುಂತಾದವರು ಲೀಡ್ ರೋಲ್ ನಲ್ಲಿ ಮಿಂಚಿರುವ 'ಬೆಂಗಳೂರು 560023' ಸಿನಿಮಾ ನವೆಂಬರ್ 6ಕ್ಕೆ, ಅಂದರೆ ಇದೇ ವಾರ ತೆರೆ ಕಾಣಬೇಕಿತ್ತು. ಆದರೆ ಥಿಯೇಟರ್ ಸಮಸ್ಯೆಯಿಂದಾಗಿ 'ಬೆಂಗಳೂರು 560023' ಗೆ ಶನಿ ದೆಸೆ ಬಡಿದಂತಾಗಿದ್ದು, ಚಿತ್ರ ಬಿಡುಗಡೆ ಕಾರ್ಯಕ್ರಮ ಮುಂದಕ್ಕೆ ಹೋಗುತ್ತಿದೆ.

ಹಾಗಾಗಿ ನಿರ್ದೇಶಕ ಎ.ಪ್ರದೀಪ್ ರಾಜ್ ಅವರು ಚಿತ್ರದ ಬಿಡುಗಡೆ ಕಾರ್ಯಕ್ರಮವನ್ನು ನವೆಂಬರ್ 20ಕ್ಕೆ ಪೋಸ್ಟ್ ಪೋನ್ ಮಾಡಿದ್ದಾರೆ. ತಮಿಳಿನ 'ಚೆನ್ನೈ 600028' ಚಿತ್ರದ ರಿಮೇಕ್ ಆಗಿರುವ 'ಬೆಂಗಳೂರು 560023' ಚಿತ್ರ ಕ್ರಿಕೆಟ್ ಗೆ ಸಂಬಂದಪಟ್ಟ ಕಥೆಯನ್ನು ಹೊಂದಿದೆ.

Kannada movie 'Bangalore 560023' postponed to November 20th

ರಿಯಲ್ ಲೈಫ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಟೀಮ್ ನಲ್ಲಿ ಕ್ರಿಕೆಟ್ ಪ್ಲೇಯರ್ ಅಗಿರುವ ಜೆ.ಕೆ ಅಲಿಯಾಸ್ ಜಯಕಾರ್ತಿಕ್, ಧ್ರುವ ಹಾಗೂ ರಾಜೀವ್ ಅವರು ರೀಲ್ ನಲ್ಲೂ ಸಖತ್ ಸಿಕ್ಸರ್ ಬಾರಿಸಿದ್ದಾರೆ.

ಜೀ ಕನ್ನಡ ವಾಹಿನಿಯ 'ರಾಧಾ ಕಲ್ಯಾಣ' ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ ಚಂದನ್ ಹಾಗೂ ಸ್ಯಾಂಡಲ್ ವುಡ್ ನ ಖ್ಯಾತ ಕಾಮಿಡಿ ನಟ ಚಿಕ್ಕಣ್ಣ ಅವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ.

Kannada movie 'Bangalore 560023' postponed to November 20th

ಇನ್ನುಳಿದಂತೆ ನಟಿ ಸಂಜನಾ ಹಾಗೂ ಶಿವಾನಿ ಅವರು ನಾಯಕಿಯರಾಗಿ ಮಿಂಚಿದ್ದು, ನಿರ್ಮಾಪಕ ಪುನೀತ್ ಬಿ.ಎಂ ಅವರು ಬಂಡವಾಳ ಹೂಡಿದ್ದಾರೆ. ಸಂಗೀತ ನಿರ್ದೇಶಕ ಅರುಣ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಕೆಲ ದಿನಗಳ ಹಿಂದೆ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.

English summary
If everything had gone right, then JK starrer 'Bangalore 560023' was supposed to release on the 06th of November. However, the film's release got postponed due to non-availability of theaters and the film has been postponed to November 20th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada