For Quick Alerts
  ALLOW NOTIFICATIONS  
  For Daily Alerts

  ಅರ್ಧ ಶತಕ ಬಾರಿಸಿದ ಸಂತಸದಲ್ಲಿ ಶೆಟ್ರ 'ಬೆಲ್ ಬಾಟಂ'

  |

  ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತರುವ 'ಬೆಲ್ ಬಾಟಂ' ಸಿನಿಮಾ 50 ದಿನಗಳನ್ನು ಪೂರೈಸಿದೆ. ಫೆಬ್ರವರಿಯಲ್ಲಿ ತೆರೆಕಂಡ 'ಬೆಲ್ ಬಾಟಂ' ಸಿನಿಮಾ ಹಾಫ್ ಸೆಂಚುರಿ ಬಾರಿಸಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಂತಸವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದೆ ಚಿತ್ರತಂಡ.

  ರೆಟ್ರೊ ಶೈಲಿಯಲ್ಲಿ ಮೂಡಿ ಬಂದಿರುವ 'ಬೆಲ್ ಬಾಟಂ' ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಚಿತ್ರದ ಡಿಟೆಕ್ಟಿವ್ ದಿವಾಕರನ ಪಾತ್ರ ಪ್ರೇಕ್ಷಕರನ್ನು ಇವತ್ತಿಗೂ ಕಾಡುತ್ತಿದೆ. ಮೊದಲ ಬಾರಿಗೆ ನಾಯಕನಾಗಿ 'ಬೆಲ್ ಬಾಟಂ' ಧರಿಸಿದ್ದ ರಿಷಭ್ ಶೆಟ್ಟಿ ಅಭಿನಯಕ್ಕೆ ಚಿತ್ರಪ್ರಿಯರು ಫಿದಾ ಆಗಿದ್ದಾರೆ. ಕುಸುಮ ಪಾತ್ರದ ಮೂಲಕ ನಟಿ ಹರಿಪ್ರಿಯಾ ಕೂಡ ಪ್ರೇಕ್ಷಕರ ಮನಗೆದ್ದಿದ್ದಾರೆ.

  ತಮಿಳು, ತೆಲುಗು, ಹಿಂದಿಯಲ್ಲಿ 'ಬೆಲ್ ಬಾಟಂ' : ನಾಯಕರ್ಯಾರು?

  ವಿಭಿನ್ನ ಕತೆಗಳನ್ನು ಹಿಡಿದು ನಿರ್ದೇಶನಕ್ಕೆ ಇಳಿಯುವ ನಿರ್ದೇಶಕ ಜಯತೀರ್ಥ ಈ ಬಾರಿ 'ಬೆಲ್ ಬಾಟಂ' ಅಂತಹ ರೆಟ್ರೊ ಶೈಲಿಯ ವಿನೂತನ ಕತೆಯ ಮೂಲಕ ಚಿತ್ರ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದಾರೆ.

  ಅಂದ್ಹಾಗೆ 50 ದಿನಗಳ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಬೆಲ್ ಬಾಟಂ' ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ಅಬ್ಬರಿಸಲು ಸಜ್ಜಾಗುತ್ತಿದೆ. ಡಿಟೆಕ್ಟಿವ್ ದಿವಾಕರ ಕನ್ನಡಿಗರನ್ನು ಮಾತ್ರವಲ್ಲದೇ ಬಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ ಪ್ರೇಕ್ಷಕರನ್ನು ರಂಜಿಸಲು ಹೊರಟಿದ್ದಾನೆ. ಸದ್ಯ 50 ದಿನಗಳನ್ನು ಪೂರೈಸಿದ ಸಂತಸದಲ್ಲಿರುವ 'ಬೆಲ್ ಬಾಟಂ' ಶತದಿನೋತ್ಸವ ಆಚರಿಸಲಿ ಎನ್ನುವುದು ನಮ್ಮ ಆಶಯ.

  English summary
  Kannada movie 'Bell Bottom' completed 50 days. Rishab Shetty and haripriya starrer 'Bell Bottom' directed by Jayatheertha.this movie released on february.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X