»   » 139 ಕಟ್‌ಗಳೊಂದಿಗೆ ಸೆನ್ಸಾರ್ ಪಾಸ್ ಆದ 'ಬೆತ್ತನಗೆರೆ'

139 ಕಟ್‌ಗಳೊಂದಿಗೆ ಸೆನ್ಸಾರ್ ಪಾಸ್ ಆದ 'ಬೆತ್ತನಗೆರೆ'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಒಂದು ಚಿತ್ರ ಸೆನ್ಸಾರ್ ಆಗುತ್ತಿದೆ ಅಂತಿಟ್ಕೊಳ್ಳಿ. ಅಬ್ಬಬ್ಬ ಅಂದ್ರೆ ಸೆನ್ಸಾರ್ ಮಂಡಳಿ ಅದೆಷ್ಟು ಕಟ್ ಮಾಡಬಹುದು ಒಂದು ಹತ್ತು, ಹದಿನೈದು ಬಿಡಿ ಒಂದು ಐವತ್ತು ಅಂತಾನೇ ಇರಲಿ.

ಆದ್ರೆ ಬರೋಬ್ಬರಿ 139 ಕಟ್ ಗಳನ್ನು ಪಡೆದುಕೊಂಡ ಸ್ಯಾಂಡಲ್ ವುಡ್ ನ ಮೊದಲ ಚಿತ್ರ 'ಬೆತ್ತನಗೆರೆ' ಅಂತಾನೇ ಹೇಳಬಹುದು. ಹಾಗಂತ ಸೆನ್ಸಾರ್ ಮಂಡಳಿಯವರು ಇದು ನಾಲ್ಕನೇ ಬಾರಿಯಂತೆ ಚಿತ್ರ ವೀಕ್ಷಿಸುತ್ತಿರುವುದು.['ಬೆತ್ತನಗೆರೆ' ಸೀನನ್ನ ಕೊಚ್ಚಿ ಹಾಕಿದ ಸೆನ್ಸಾರ್ ಮಂಡಳಿ]

Kannada movie 'Bettanagere' gets U/A Certificate

ಅಂತೂ ಇಂತೂ ಕೊನೆಯದಾಗಿ 139 ಕಟ್ ಗಳನ್ನು ನೀಡಿದ ನಂತರ 'ಬೆತ್ತನಗೆರೆ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಪೂರ್ಣ ಪ್ರಮಾಣದ ಅನುಮತಿ ಸಿಕ್ಕಿದೆ. ಇದೀಗ ಯು/ಎ ಪ್ರಮಾಣಪತ್ರ ನೀಡುವ ಮೂಲಕ ಚಿತ್ರ ಬಿಡುಗಡೆ ತಥಾಸ್ತು ಎಂದಿದ್ದಾರೆ.

ಸ್ಯಾಂಡಲ್ ವುಡ್ ನ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇರುವ ನಿರ್ದೇಶಕ ಬಿ.ಎನ್ ಸ್ವಾಮಿ 'ಬೆತ್ತನಗೆರೆ' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.['ಬೆತ್ತನಗೆರೆ' ಅಲ್ಬಮ್ ರಿಲೀಸ್ ಗೆ ಆರ್.ಜಿ.ವಿ. ಬರ್ತಾರಂತೆ!]

'ಆಟ', 'ದಿಲ್ ವಾಲಾ' ಚಿತ್ರದಲ್ಲಿ ಅಷ್ಟೇನು ಯಶಸ್ಸು ಗಳಿಸದ ಸುಮಂತ್ ಶೈಲೇಂದ್ರ ಹಾಗು 'ಸಿಲ್ಕ್' ಖ್ಯಾತಿಯ ನಾಯಕ ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಸಹೋದರರ ಪಾತ್ರದಲ್ಲಿ ಮಿಂಚಿದ್ದಾರೆ.

Kannada movie 'Bettanagere' gets U/A Certificate

ನಿರ್ದೇಶಕ ಮೋಹನ್ ಗೌಡ ಆಕ್ಷನ್-ಕಟ್ ಹೇಳಿರುವ, ನಿಜ ಘಟನೆಯಾಧರಿತ 'ಬೆತ್ತನಗೆರೆ' ಚಿತ್ರದಲ್ಲಿ 'ಬೆತ್ತನಗೆರೆ' ಸೀನ ಪಾತ್ರದಲ್ಲಿ ಸುಮಂತ್ ಮಿಂಚಿದ್ದು, ಬೆತ್ತನಗೆರೆ ಶಂಕ್ರ ಪಾತ್ರದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಖ್ಯಾತ ಕ್ರಿಕೇಟಿಗ ವಿನೋದ್ ಕಾಂಬ್ಳಿ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.['ಬೆತ್ತನಗೆರೆ' ಎ ರಾ ಸ್ಟೋರಿ ಮೊದಲನೇ ಹಂತ ಫಿನಿಷ್!]

ಸವಿಕ ಎಂಟರ್ಪ್ರೈಸಸ್ ಅಡಿಯಲ್ಲಿ ಮೂಡಿಬರುತ್ತಿರುವ 'ಬೆತ್ತನಗೆರೆ' ಚಿತ್ರದಲ್ಲಿ ನಯನಾ ನಾಯಕಿಯಾಗಿ ಡ್ಯುಯೆಟ್ ಹಾಡಲಿದ್ದಾರೆ. ಇನ್ನುಳಿದಂತೆ ಜೈ ಜಗದೀಶ್, ಬುಲ್ಲೆಟ್ ಪ್ರಕಾಶ್, ಶರತ್ ಲೋಹಿತಾಶ್ವ, ಯತಿರಾಜ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಸೆನ್ಸಾರ್ ಮಂಡಳಿಯಿಂದ ಸುಮಾರು 139 ಕಟ್ ಬಿದ್ದ ಮೇಲೆ ಇದೀಗ 125 ನಿಮಿಷಗಳ ಕಾಲ ಚಿತ್ರ ತೆರೆಯ ಮೇಲೆ ಓಡಲಿದೆಯಂತೆ. ಓಟ್ನಲ್ಲಿ ರೌಡಿಸಂ, ಮಚ್ಚು, ಲಾಂಗ್, ರಕ್ತ, ನೋಡಲು ನೀವು ತಯಾರಾಗಿ ಏನಂತೀರಾ.

English summary
Kannada movie 'Bettanagere' gets U/A Certificate from the Censor Board. 'Bettanagere' features Kannada actor sumanth shailendra, Kannada actor akshay kumar, Actress Nayana in the lead role. The movie is directed by Mohan Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada