»   » 'ಬೆತ್ತನಗೆರೆ' ಅಲ್ಬಮ್ ರಿಲೀಸ್ ಗೆ ಆರ್.ಜಿ.ವಿ. ಬರ್ತಾರಂತೆ!

'ಬೆತ್ತನಗೆರೆ' ಅಲ್ಬಮ್ ರಿಲೀಸ್ ಗೆ ಆರ್.ಜಿ.ವಿ. ಬರ್ತಾರಂತೆ!

Posted By:
Subscribe to Filmibeat Kannada

ನೈಜ ಘಟನೆ ಆಧಾರಿತ 'ಬೆತ್ತನಗೆರೆ' ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಜುಲೈ 27 ರಂದು ನಡೆಯಲಿದೆ. ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿಯಾದ ತೆಲುಗು ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಸಮಾರಂಭದ ಮುಖ್ಯ ಅತಿಥಿಯಾಗಲಿದ್ದಾರೆ ಅನ್ನೋದು ಗಾಂಧಿನಗರದ ಲೇಟೆಸ್ಟ್ ಮಾಹಿತಿ.

'ಸವಿಕ' ಲಾಂಛನದಡಿ ಮೂಡಿಬರುತ್ತಿರುವ 'ಬೆತ್ತನಗೆರೆ' ಕುಖ್ಯಾತ ರೌಡಿ ಶೀಟರ್ 'ಬೆತ್ತನಗೆರೆ' ಸೀನನ ರಕ್ತಚರಿತ್ರೆ ಕಥೆಯಾಧಾರಿತ ಚಿತ್ರವಾಗಿದೆ. ಬಿ.ಜಿ.ಮೋಹನ್ ಬೆತ್ತನಗೆರೆ, ಆಕ್ಷನ್-ಕಟ್ ಹೇಳಿರುವ 'ಬೆತ್ತನಗೆರೆ' ಚಿತ್ರದಲ್ಲಿ ಸುಮಂತ್ ಶೈಲೇಂದ್ರ ಹಾಗೂ 'ಸಿಲ್ಕ್' ಖ್ಯಾತಿಯ ಅಕ್ಷಯ್ ಕುಮಾರ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ['ಬೆತ್ತನಗೆರೆ' ಎ ರಾ ಸ್ಟೋರಿ ಮೊದಲನೇ ಹಂತ ಫಿನಿಷ್!]

Kannada movie 'Betthanagere' Audio releasing on July 27th.

ಅಂದ ಹಾಗೆ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 149 ಬಾರಿ ಸೆನ್ಸಾರ್ ಮಂಡಳಿಯಿಂದ ಕತ್ತರಿ ಹಾಕಿಸಿಕೊಂಡ ಸಿನೆಮಾ ಯಾವುದು ಅಂದ್ರೆ ಆ ಕೀರ್ತಿ 'ಬೆತ್ತನಗೆರೆ' ಚಿತ್ರಕ್ಕೆ ಸಲ್ಲುತ್ತದೆ.

'ಎ ರಾ ಸ್ಟೋರಿ!' ಎಂಬ ಅಡಿಬರಹ ಇರುವ 'ಬೆತ್ತನನಗೆರೆ' ಯ ಮತ್ತೊಂದು ಆಕರ್ಷಣೆ ಅಂದರೆ ಖ್ಯಾತ ಕ್ರಿಕೆಟ್ ಪಟು ವಿನೋದ್ ಕಾಂಬ್ಳಿ ಅವರು ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಇದೀಗ ಚಿತ್ರ ಮತ್ತಷ್ಟು ಕುತೂಹಲ ಸೃಷ್ಟಿಸಿದೆ. ['ಬೆತ್ತನಗೆರೆ' ಸೀನನ್ನ ಕೊಚ್ಚಿ ಹಾಕಿದ ಸೆನ್ಸಾರ್ ಮಂಡಳಿ]

ರಾಜೇಶ್ ರಾಮನಾಥ್ ಮ್ಯೂಸಿಕ್ ಕಂಪೋಸ್ ಮಾಡಿರುವ 'ಬೆತ್ತನಗೆರೆ' ಚಿತ್ರದಲ್ಲಿ ನಯನಾ ಇಬ್ಬರು ನಾಯಕರೊಂದಿಗೆ ಡ್ಯುಯೆಟ್ ಹಾಡಲಿದ್ದಾರೆ. ಚಿತ್ರದಲ್ಲಿ ಸುಮಂತ್ ಶೈಲೇಂದ್ರ ಹಾಗೂ ಅಕ್ಷಯ್ ಸಹೋದರರಾಗಿ ಅಭಿನಯಿಸಿದ್ದಾರೆ.

ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆ ಚಿತ್ರಕ್ಕಿದ್ದು, ಬಿ.ಎನ್ ಸ್ವಾಮಿ ಅವರು ಬಂಡವಾಳ ಹೂಡಿದ್ದಾರೆ. ಇನ್ನೂ ಜೈ ಜಗದೀಶ್, ಬುಲ್ಲೆಟ್ ಪ್ರಕಾಶ್, ಶರತ್ ಲೋಹಿತಾಶ್ವ, ಯತಿರಾಜ್ ಮುಂತಾದ ತಾರಾ ಬಳಗವೇ ಈ ಚಿತ್ರಕ್ಕಿದೆ.

English summary
Kannada movie 'Betthanagere' Audio releasing on July 27th. Telugu fame, Kannada movie 'Killing Veerappan' director Ram Gopal Varma Guest. 'Betthanagere' movie features Kannada actor Sumanth Shailendra, Kannada actor Akshay, Actress Nayana in the lead role. The movie is directed by B.G Mohan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada