»   » ಫೇಸ್ ಬುಕ್ ಲೈವ್ ಮೂಲಕ 'ಭರ್ಜರಿ' ಸಿನಿಮಾ ಬಿಟ್ಟಿ ಪ್ರಸಾರ.!

ಫೇಸ್ ಬುಕ್ ಲೈವ್ ಮೂಲಕ 'ಭರ್ಜರಿ' ಸಿನಿಮಾ ಬಿಟ್ಟಿ ಪ್ರಸಾರ.!

Posted By:
Subscribe to Filmibeat Kannada
Bharjar ' movie leaked on Facebook | Filmibeat Kannada

ಧ್ರುವ ಸರ್ಜಾ ನಟನೆಯ 'ಭರ್ಜರಿ' ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಸಿನಿಮಾದ ಟೈಟಲ್ ಗೆ ತಕ್ಕಂತೆ ಚಿತ್ರಕ್ಕೆ ಭರ್ಜರಿಯಾದ ರೆಸ್ಪಾನ್ಸ್ ಸಿಕ್ಕಿದೆ. ಹೀಗಿರುವಾಗಲೇ, ಕಿಡಿಗೇಡಿಯೊಬ್ಬ ಫೇಸ್ ಬುಕ್ ಲೈವ್ ಮೂಲಕ 'ಭರ್ಜರಿ' ಚಿತ್ರವನ್ನ ಪುಕ್ಕಟೆ ಪ್ರಸಾರ ಮಾಡಿದ್ದಾನೆ.

'ಭರ್ಜರಿ' ಸಿನಿಮಾದ ಕೆಲ ದೃಶ್ಯಗಳು ಈಗ 'ಫೇಸ್ ಬುಕ್ ಲೈವ್' ಮೂಲಕ ಲೀಕ್ ಆಗಿದೆ. ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದ ಕಿಡಿಗೇಡಿಯೊಬ್ಬ ಚಿತ್ರಮಂದಿರದಿಂದಲೇ ಫೇಸ್ ಬುಕ್ ಲೈವ್ ಮಾಡಿ 'ಭರ್ಜರಿ' ಚಿತ್ರವನ್ನ ಫೇಸ್ ಬುಕ್ ನಲ್ಲಿರುವವರಿಗೆ ಬಿಟ್ಟಿಯಾಗಿ ತೋರಿಸಿದ್ದಾನೆ.

ಎರಡು ವರ್ಷಗಳಿಂದ ಕಷ್ಟಪಟ್ಟು ಸಿನಿಮಾ ಮಾಡಿದ್ದ 'ಭರ್ಜರಿ' ಚಿತ್ರತಂಡಕ್ಕೆ ಈ ಫೇಸ್ ಬುಕ್ ಲೈವ್ ದೊಡ್ಡ ಶಾಕ್ ನೀಡಿದೆ. ಮುಂದೆ ಓದಿ...

ಫೇಸ್ ಬುಕ್ ನಲ್ಲಿ 'ಭರ್ಜರಿ' ಲೈವ್!

ಇಂದು ಬಿಡುಗಡೆಯಾದ 'ಭರ್ಜರಿ' ಚಿತ್ರವನ್ನು ಕೆಲ ಕಿಡಿಗೇಡಿಗಳು ಫೇಸ್ ಬುಕ್ ಲೈವ್ ಮೂಲಕ ಬಿಟ್ಟಿ ಪ್ರಸಾರ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ 'ಭರ್ಜರಿ' ಚಿತ್ರದ ದೃಶ್ಯಗಳು ಹರಿದಾಡುತ್ತಿದೆ.

ಹುಬ್ಬಳ್ಳಿ ಮೂಲದ ಯುವಕ

ಹುಬ್ಬಳ್ಳಿ ಮೂಲದ ಸಂತೋಷ್ ಎಂಬ ಯುವಕ ಚಿತ್ರಮಂದಿರದಲ್ಲಿ ಕುಳಿತು ತನ್ನ ಫೇಸ್ ಬುಕ್ ಖಾತೆಯ ಮೂಲಕ 'ಫಸ್ಟ್ ಡೇ ಫಸ್ಟ್ ಶೋ' ಎಂದು 'ಭರ್ಜರಿ' ಸಿನಿಮಾವನ್ನು ಲೈವ್ ಮಾಡಿದ್ದಾನೆ.

ಬಿಟ್ಟಿ ಪ್ರಸಾರ

ಸಂತೋಷ್ ಎಂಬ ಯುವಕ ಲೈವ್ ಮಾಡಿದ ವಿಡಿಯೋವನ್ನು ಅನೇಕರು ಶೇರ್ ಮಾಡಿದ್ದಾರೆ. 856ಕ್ಕೂ ಹೆಚ್ಚು ಜನರು ಸಿನಿಮಾವನ್ನು ಬಿಟ್ಟಿಯಾಗಿ ಕಣ್ತುಂಬಿಕೊಂಡಿದ್ದಾರೆ

ಒಂದುವರೆ ಗಂಟೆ ಲೀಕ್

'ಭರ್ಜರಿ' ಸಿನಿಮಾವನ್ನು ಮೊದಲ ಒಂದುವರೆ ಗಂಟೆ ಫೇಸ್ ಬುಕ್ ನಲ್ಲಿ ಲೈವ್ ಮಾಡಿದ್ದ ಸಂತೋಷ್ ಬಳಿಕ ಅನೇಕರ ಕಾಮೆಂಟ್ ಗಳನ್ನು ನೋಡಿ ಲೈವ್ ನಿಲ್ಲಿಸಿದ್ದಾನೆ.

ಅನೇಕ ಬಾರಿ ಆಗಿದೆ

'ಭರ್ಜರಿ' ಚಿತ್ರಕ್ಕೂ ಹಿಂದೆ ಸುದೀಪ್ ಅವರ 'ಹೆಬ್ಬುಲಿ', ದರ್ಶನ್ ಅವರ 'ಚಕ್ರವರ್ತಿ' ಚಿತ್ರಗಳಿಗೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು.

ಸಿಕ್ಕಾಪಟ್ಟೆ ಕ್ರೇಜ್ ಇದೆ

'ಭರ್ಜರಿ' ಧ್ರುವ ಸರ್ಜಾ ಮತ್ತು ರಚಿತಾ ರಾಮ್ ನಟಿಸಿರುವ ಸಿನಿಮಾ. 'ಬಹದ್ದೂರ್' ಖ್ಯಾತಿಯ ಚೇತನ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಂದ್ಹಾಗೆ, ಚಿತ್ರಕ್ಕೆ ದೊಡ್ಡ ರೆಸ್ಪಾನ್ಸ್ ಸಿಕ್ಕಿದ್ದು, ದಾವಣಗೆರೆ, ಬಿಜಾಪುರ, ಹೊಸಪೇಟೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಚಿತ್ರದ ಪ್ರದರ್ಶನ ಮಧ್ಯರಾತ್ರಿಯಿಂದ ಶುರುವಾಗಿದೆ.

ಶ್ರಮಕ್ಕೆ ಬೆಲೆ ಕೊಡಿ

ಒಂದು ಸಿನಿಮಾ ಮಾಡುವುದಕ್ಕೆ ವರ್ಷಗಳ ಕಾಲ ಎಷ್ಟೋ ಜನ ಕಷ್ಟಪಟ್ಟಿರುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳಿ. ಇಡೀ ಚಿತ್ರತಂಡದ ಶ್ರಮಕ್ಕೆ ಬೆಲೆ ನೀಡಿ. ಫೇಸ್ ಬುಕ್ ಲೈವ್ ಮೂಲಕ ಅಥವಾ ವಿಡಿಯೋ ರೆಕಾರ್ಡ್ ಮಾಡಿ ಲೀಕ್ ಮಾಡುವ ಮೂಲಕ ನಿರ್ಮಾಪಕರಿಗೆ ನಷ್ಟ ಮಾಡಬೇಡಿ.

English summary
Kannada Movie 'Bharjari' was streamed live on Facebook by a person called Santhosh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada