»   » ಡೈರೆಕ್ಟರ್ ಸ್ಪೆಷಲ್ ಹುಡುಗ 'ಬಾಕ್ಸರ್' ಹೇಗಾದ? ವಿಡಿಯೋ ನೋಡಿ!

ಡೈರೆಕ್ಟರ್ ಸ್ಪೆಷಲ್ ಹುಡುಗ 'ಬಾಕ್ಸರ್' ಹೇಗಾದ? ವಿಡಿಯೋ ನೋಡಿ!

Posted By:
Subscribe to Filmibeat Kannada

ನಿರ್ದೇಶಕ ಪ್ರೀತಂ ಗುಬ್ಬಿ ಆಕ್ಷನ್-ಕಟ್ ಹೇಳಿರುವ, ಡೈರೆಕ್ಟರ್ ಸ್ಪೆಷಲ್ ಹುಡುಗ ಧನಂಜಯ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಜಬರ್ದಸ್ತ್ 'ಬಾಕ್ಸರ್' ಸಿನಿಮಾ ನವೆಂಬರ್ 20 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆ ಕಾಣುತ್ತಿದೆ.

ಅಲ್ಲದೇ ದ ಮೋಸ್ಟ್ ರೊಮ್ಯಾಂಟಿಕ್ ಹಾಗೂ ಆಕ್ಷನ್ ಕಥೆಯಾಗಿರುವ ಕಿಕ್ 'ಬಾಕ್ಸರ್' ಚಿತ್ರ ಸ್ಪೆಷಲ್ ಹುಡುಗನಿಗೆ ಒಂದೊಳ್ಳೆ ಬ್ರೇಕ್ ನೀಡುವ ಸಿನಿಮಾ ಆಗಬಹುದು ಅಂತ ಗಾಂಧಿನಗರದ ಮಂದಿಯ ಅಭಿಪ್ರಾಯ.['ಬಾಕ್ಸರ್' ನಲ್ಲಿ ಡೈರೆಕ್ಟರ್ ಸ್ಪೆಷಲ್ ಹುಡುಗನ ಜಬರ್ದಸ್ತ್ ಫೈಟ್]

Kannada movie 'Boxer' releasing on November 20th

ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಬಾಕ್ಸರ್' ಚಿತ್ರದಲ್ಲಿ ನಟಿ ಕೃತಿಕಾ ಜಯಕುಮಾರ್ ಅವರು ಧನಂಜಯ್ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಿಟ್ ಆಗಿದ್ದು, ಇವರಿಬ್ಬರ ಕೆಮಿಸ್ಟ್ರಿ ತೆರೆಯ ಮೇಲೆ ಸಖತ್ ಆಗಿ ವರ್ಕೌಟ್ ಆಗಿದೆ.

'ರಾಟೆ' ಚಿತ್ರದಲ್ಲಿ ಮುಗ್ದ ಲವರ್ ಬಾಯ್ ಆಗಿದ್ದ ಧನಂಜಯ್ ಅವರು 'ಬಾಕ್ಸರ್' ಚಿತ್ರದಲ್ಲಿ ರಫ್ ಅಂಡ್ ಟಫ್ ಆಗಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡಲಿದ್ದಾರೆ.['ಬಾಕ್ಸರ್' ಆದ ಧನಂಜಯ್ ಜಬರ್ದಸ್ತ್ ಸ್ಟಂಟ್ಸ್]

ಇನ್ನು ಈ ಚಿತ್ರಕ್ಕೆ ನಟ ಧನಂಜಯ್ ಅವರು ತುಂಬಾ ವರ್ಕೌಟ್ ಮಾಡಿದ್ದು, ಸಿನಿಮಾ ಚೆನ್ನಾಗಿ ಮೂಡಿ ಬರಲು ತುಂಬಾ ಶ್ರದ್ಧೆ ಹಾಗೂ ಪ್ರೀತಿಯಿಂದ ಶ್ರಮ ವಹಿಸಿದ್ದಾರಂತೆ. ಈ ಬಗ್ಗೆ ನಿರ್ದೇಶಕ ಪ್ರೀತಂ ಗುಬ್ಬಿ ಅವರು ಹೇಳಿಕೊಂಡಿದ್ದು, ಧನಂಜಯ್ ಅವರು 'ಬಾಕ್ಸರ್' ಚಿತ್ರಕ್ಕೆ ಮಾಡಿದ ವರ್ಕೌಟ್ ನ ವಿಡಿಯೋ ತುಣುಕುಗಳು ನಮಗೆ ಲಭ್ಯವಾಗಿದೆ.

Kannada movie 'Boxer' releasing on November 20th

ನಿರ್ದೇಶಕ ಎ.ಪಿ ಅರ್ಜುನ್ ಅವರ 'ರಾಟೆ' ಚಿತ್ರದ ನಂತರ ಸ್ಪೆಷಲ್ ಹುಡುಗ ಮತ್ತೊಮ್ಮೆ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಬಹುನಿರೀಕ್ಷಿತ 'ಬಾಕ್ಸರ್' ಸಿನಿಮಾ ಧನಂಜಯ್ ಅವರಿಗೆ ಬ್ರೇಕ್ ನೀಡಬಹುದು ಅಂತ ಕಾದು ನೋಡಬೇಕು.

English summary
Watch Boxer Training Video. The Video of how Dhananjay prepared for the role of the boxer. Music composed by Judah Sandy. Directed by Preetham Gubbi. Kannada movie 'Boxer' is all set to release on November 20th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada