»   » ಬುಲೆಟ್ ಹತ್ತಿ ಬಸ್ಯಾನಾಗಿ ಶರಣ್ ಬರ್ತಾವ್ನೆ ನೋಡಿ

ಬುಲೆಟ್ ಹತ್ತಿ ಬಸ್ಯಾನಾಗಿ ಶರಣ್ ಬರ್ತಾವ್ನೆ ನೋಡಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಕಾಮಿಡಿ ಕಿಂಗ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಬುಲೆಟ್ ಬಸ್ಯಾ' ಕರ್ನಾಟಕದಾದ್ಯಂತ ನಾಳೆ (ಜುಲೈ 24) ಭರ್ಜರಿಯಾಗಿ ತೆರೆಗೆ ಅಪ್ಪಳಿಸುತ್ತಿದೆ.

ಕರ್ನಾಟಕದಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ಆಗಿ ನಾಳೆ 'ಬುಲೆಟ್ ಬಸ್ಯಾ' ತೆರೆ ಮೇಲೆ ರಾರಾಜಿಸಲಿದ್ದಾನೆ. ಈಗಾಗಲೇ ಆನ್ ಲೈನ್ ಮೂಲಕ ಟಿಕೇಟ್ ಕಾಯ್ದಿರಿಸಿಕೊಳ್ಳುವವರಿಗೆ ಅವಕಾಶಗಳಿವೆ ಅಂತ ನಿರ್ದೇಶಕ ಜಯತೀರ್ಥ ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ. ['ಬುಲೆಟ್ ಬಸ್ಯಾ' ಮೂಲಕ ಕಥೆಗಾರನಾದ ಶರಣ್]


Kannada Movie 'Bullet Basya', releasing on July 24th

ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ 'ಬುಲೆಟ್ ಬಸ್ಯಾ' ಮೊದಲ ಶೋ ಮೂಲಕ ಸದ್ದು ಮಾಡಲಿದ್ದು, ಸದ್ಯಕ್ಕೆ ಅಲ್ಲಿದ್ದ ಹೊಸಬರ ಚಿತ್ರ 'ರಂಗಿತರಂಗ' ತ್ರಿಭುವನ್ ಚಿತ್ರಮಂದಿರಕ್ಕೆ ಶಿಫ್ಟ್ ಆಗಿದೆ. ['ಬುಲೆಟ್ ಬಸ್ಯಾ' ಬಂದ... ಸೈಲೆಂಟಾಗ್ ನಿಂತು ಸೈಡ್ ಕೊಡಿ..]


ನಿರ್ದೇಶಕ ಜಯತೀರ್ಥ ಆಕ್ಷನ್-ಕಟ್ ಹೇಳಿರುವ 'ಬುಲೆಟ್ ಬಸ್ಯಾ'ನಿಗೆ ಜಯಣ್ಣ ಬಂಡವಾಳ ಹಾಕಿದ್ದಾರೆ. 'ವೀರ ಕೇಸರಿ'ಯಂತೆ ಫೋಸ್ ಕೊಡುವ ಕಾಮಿಡಿ ಕಿಂಗ್ ಶರಣ್ , 'ಉಗ್ರಂ' ಖ್ಯಾತಿಯ ಹರಿಪ್ರಿಯ ಗ್ಲಾಮರ್, ಇವೆಲ್ಲವನ್ನೂ ನೀವು ನಾಳೆ ಕಣ್ತುಂಬಿಕೊಳ್ಳಬಹುದು. [ಬುಲ್ಲೆಟ್ ಬಸ್ಯಾನೋ ಮಳೆನೋ, ಒಟ್ನಲ್ಲಿ ಎರಡೂ ಮುಳುಗದಿರಲಿ]


ಈಗಾಗಲೇ ಅಬಿಮಾನಿಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರ ತೆರೆ ಕಾಣುವುದನ್ನು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಸೂಪರ್ ಹಾಡುಗಳಿಂದ ಗಾಂಧಿನಗರದಲ್ಲಿ ಸಖತ್ ಹವಾ ಎಬ್ಬಿಸಿರುವ 'ಬುಲೆಟ್ ಬಸ್ಯಾ', ಚಿತ್ರದ ಮೂಲಕ ಅದು ಯಾವ ಥರಾ ಪ್ರೇಕ್ಷಕರನ್ನು ಮೋಡಿ ಮಾಡಲಿದ್ದಾನೆ, ಅನ್ನೋದನ್ನ ನೋಡಲು ನಾಳೆಯವರೆಗೂ ಕಾಯಲೇಬೇಕು.

English summary
Kannada Movie 'Bullet Basya', is all set to release on July 24th. The movie features Sharan, Haripriya. The movie is directed by JayaTirtha of 'Tony' movie fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada