»   » 'ಬಟರ್ ಫ್ಲೈ' ಚಿತ್ರದ ಮೊದಲ ನೋಟ ಸಖತ್ ಕಲರ್ ಫುಲ್

'ಬಟರ್ ಫ್ಲೈ' ಚಿತ್ರದ ಮೊದಲ ನೋಟ ಸಖತ್ ಕಲರ್ ಫುಲ್

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಹಿಟ್ ಚಿತ್ರ 'ಕ್ವೀನ್' ಕನ್ನಡಕ್ಕೆ ರೀಮೇಕ್ ಆಗುತ್ತಿದೆ ಎಂದು ಹೇಳಿದ್ವಿ. ಇದೀಗ, ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಖತ್ ಕಲರ್ ಫುಲ್ ಆಗಿದೆ.

ಕನ್ನಡದಲ್ಲಿ 'ಕ್ವೀನ್' ಆಗಿ ನಟಿ ಪಾರುಲ್ ಯಾದವ್ ಕಾಣಿಸಿಕೊಳ್ಳುತ್ತಿದ್ದು, ನಟಿ ಆಮಿ ಜಾಕ್ಸನ್ ಕೂಡ 'ಬಟರ್ ಫ್ಲೈ' ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರವನ್ನ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಡೈರೆಕ್ಟ್ ಮಾಡುತ್ತಿದ್ದಾರೆ.

Kannada Movie Butterfly First look

ಉಳಿದಂತೆ ಈ ಚಿತ್ರ ದಕ್ಷಿಣದ ಎಲ್ಲ ಭಾಷೆಗಳಲ್ಲೂ ರೀಮೇಕ್ ಆಗುತ್ತಿದ್ದು, ತಮಿಳಿನಲ್ಲಿ ಈ ಚಿತ್ರವನ್ನ ರಮೇಶ್ ಅವರೇ ನಿರ್ದೇಶನ ಮಾಡಲಿದ್ದಾರೆ. ಅದೇ ರೀತಿ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ. ಉಳಿದಂತೆ ಕನ್ನಡ ಪಾರುಲ್ ಯಾದವ್ ನಿರ್ವಹಿಸುತ್ತಿರುವ ಪಾತ್ರಕ್ಕೆ ಬೇರೆ ಭಾಷೆಯಲ್ಲಿ ಇನ್ನು ಯಾವ ನಟಿಯೂ ಅಂತಿಮವಾಗಿಲ್ಲ.['ದಿ ವಿಲನ್' ಬಳಿಕ ರಮೇಶ್ ಅರವಿಂದ್ ಸಿನಿಮಾದಲ್ಲಿ ಆಮಿ ಜಾಕ್ಸನ್!]

2014 ರಲ್ಲಿ ತೆರೆಕಂಡಿದ್ದ 'ಕ್ವೀನ್' ಚಿತ್ರದಲ್ಲಿ ಕಂಗನಾ ರನೌತ್ ನಾಯಕಿ ಆಗಿ ಕಾಣಿಸಿಕೊಂಡಿದ್ದರು. 2014 ನೇ ಸಾಲಿನಲ್ಲಿ ನಾಲ್ಕು ರಾಷ್ಟ್ರ ಪ್ರಶಸ್ತಿಗಳನ್ನು ಈ ಚಿತ್ರ ಪಡೆದುಕೊಂಡಿತ್ತು. ವಿಕಾಸ್ ಭಾಲ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.

English summary
Presenting the first look of actress Parul Yadav in the Kannada remake of the Bollywood hit Queen, called Butterfly,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada