»   » ಚಕ್ರವರ್ತಿ ಮೊದಲ ಪ್ರದರ್ಶನ, ಅಭಿಮಾನಿಗಳ ವಿಮರ್ಶೆ ಸಂಭ್ರಮ

ಚಕ್ರವರ್ತಿ ಮೊದಲ ಪ್ರದರ್ಶನ, ಅಭಿಮಾನಿಗಳ ವಿಮರ್ಶೆ ಸಂಭ್ರಮ

Posted By:
Subscribe to Filmibeat Kannada

ರಿಲೀಸ್ ಗೂ ಮುಂಚೆನೇ ದಾಖಲೆ ಮೇಲೆ ದಾಖಲೆಗಳನ್ನ ಬರೆದಿರುವ 'ಚಕ್ರವರ್ತಿ' ಇಂದು (ಏಪ್ರಿಲ್ 14) ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಮಧ್ಯರಾತ್ರಿಯಿಂದಲೇ 'ಚಕ್ರವರ್ತಿ'ಯ ಅಬ್ಬರ ಶುರುವಾಗಿದ್ದು, ಈಗಾಗಲೇ ಫಸ್ಟ್ ಡೇ, ಫಸ್ಟ್ ಶೋನೇ ನೋಡಿ ಖುಷಿ ಪಟ್ಟಿದ್ದಾರೆ ಚಿತ್ರ ಪ್ರೇಮಿಗಳು.

ಹಾಗಾದ್ರೆ, ಪ್ರೇಕ್ಷಕರಿಗೆ 'ಚಕ್ರವರ್ತಿ' ಇಷ್ಟವಾಯಿತಾ? ಚಿತ್ರದ ಮೇಲೆ ತಾವು ಇಟ್ಟಿದ ನಿರೀಕ್ಷೆ, ಕುತೂಹಲಕ್ಕೆ ಚಿತ್ರತಂಡ ನ್ಯಾಯ ಒದಗಿಸಿದೆಯಾ? 'ಚಕ್ರವರ್ತಿ'ಯಲ್ಲಿ ದರ್ಶನ್ ಅಬ್ಬರ ಹೇಗಿದೆ? ಈ ಪ್ರಶ್ನೆಗಳಿಗೂ ಮೊದಲ ಶೋ ಸಿನಿಮಾದ ಅಭಿಮಾನಿಗಳು ಉತ್ತರ ಕೊಟ್ಟಿದ್ದಾರೆ.['ಚಕ್ರವರ್ತಿ'ಗೆ ರಾಜ್ಯಾದ್ಯಂತ ಸಿಕ್ತು ಭರ್ಜರಿ ಓಪನಿಂಗ್]

'ಚಕ್ರವರ್ತಿ' ಚಿತ್ರವನ್ನ ಫಸ್ಟ್ ಶೋ ನೋಡಿದ ಅಭಿಮಾನಿ ದೇವರುಗಳು ಕೊಟ್ಟ ಮಾರ್ಕ್ಸ್ ಇಲ್ಲಿದೆ ನೋಡಿ.

'ಚಕ್ರವರ್ತಿ' ಚಿತ್ರದಲ್ಲಿ ಏನಿದೆ

''ಒಬ್ಬ ಕಾಮನ್ ಮ್ಯಾನ್ ಅಂಡರ್ ವರ್ಲ್ಡ್ ಡಾನ್ ಆಗುವ ಕಥೆ. ನೈಜಕಥೆಯಾಧರಿತ ಅಂಶಗಳಿವೆ. ಫ್ಯಾಮಿಲಿ ಎಲಿಮೆಂಟ್ಸ್ ಗಳು ಗಮನ ಸೆಳೆಯುತ್ತೆ''['ಚಕ್ರವರ್ತಿ'ಯ ದರ್ಶನಕ್ಕೂ ಮುನ್ನ ನೀವು ಗಮನಿಸಬೇಕಾದ ವಿಶೇಷತೆಗಳು]

'ದೇಶಪ್ರೇಮ'ದ ಚಿತ್ರ

ಚಕ್ರವರ್ತಿ ರೌಡಿಸಂ ಸಿನಿಮಾ ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ರೆ, ಇದೊಂದು ''ದೇಶಪ್ರೇಮವನ್ನ ಹುರಿದುಂಬಿಸುಂತಹ'' ಕಥೆ ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.[ಕರ್ನಾಟಕದಾಚೆಯೂ ಸುನಾಮಿ ಎಬ್ಬಿಸಲು 'ಚಕ್ರವರ್ತಿ' ರೆಡಿ!]

ಕ್ಲಾಸಿಕಲ್ ಚಿತ್ರ

ದರ್ಶನ್ ಅವರಿಂದ ಕ್ಲಾಸಿಕಲ್ ಚಿತ್ರ. ಕಥೆ ಮತ್ತು ಅಭಿನಯ ಅದ್ಭುತವಾಗಿದೆ. ನೋಡಲೇಬೇಕಾದ ಚಿತ್ರ.[ಪರಭಾಷೆ ಚಿತ್ರಗಳ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ ದರ್ಶನ್]

ದರ್ಶನ್ ಡಾನ್

'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ಡಾನ್ ಆಗಿ ಮಿಂಚಿದ್ದಾರೆ. ಆದಿತ್ಯ ಕಾಪ್ ಆಗಿ ಮಿಂಚಿದ್ದಾರೆ.['ಚಕ್ರವರ್ತಿ' ಕಥೆ ಕುರಿತು ಕಡೆಗೂ ಸುಳಿವು ಕೊಟ್ಟ 'ದಾಸ' ದರ್ಶನ್.!]

ಮೇಕಿಂಗ್ ಚೆನ್ನಾಗಿದೆ

'ಚಕ್ರವರ್ತಿ' ಸಾಧಾರಣವೆನಿಸಿದರೂ ಚಿತ್ರದ ಮೇಕಿಂಗ್ ಚೆನ್ನಾಗಿದೆ ಎಂದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.[ಡೈಲಾಗ್ ಇಲ್ಲದ ಟ್ರೈಲರ್ ಹಿಂದಿನ ಕಥೆ ಬಿಚ್ಚಿಟ್ಟ ದರ್ಶನ್! ]

'ಆ ದಿನಗಳಲ್ಲಿ' ದರ್ಶನ್

'ಆ ದಿನಗಳಲ್ಲಿ' ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ನೋಡಿ ಪ್ರೇಕ್ಷಕರು ಖುಷ್ ಆಗಿದ್ದಾರೆ.

ಬಿಲ್ಡಪ್ ಇಲ್ಲ, ಮಸಾಲ ಇಲ್ಲ, ಚೆನ್ನಾಗಿದೆ

ಇಂಟರ್ ವಲ್ ವರೆಗೂ 'ಚಕ್ರವರ್ತಿ' ಚಿತ್ರದಲ್ಲಿ ಬಿಲ್ಡಪ್ ಇಲ್ಲ, ಮಸಾಲ ಇಲ್ಲ, ಚೆನ್ನಾಗಿದೆ. ಬೆಂಗಳೂರಿನ ಖ್ಯಾತ ಭೂಗತ ಜಗತ್ತನ್ನ ಮತ್ತೊಮ್ಮೆ ತೋರಿಸಲಾಗಿದೆ.

English summary
Kannada Actor Challenging Star Darshan Starrer Chakravarthy Movie has hit the screens today (April 14th). 'Chakravarthy' is receiving Good response in Twitter. The Movie Directed by Chinthan. here is the twitter review of 'Chakravarthy'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada