For Quick Alerts
  ALLOW NOTIFICATIONS  
  For Daily Alerts

  ವಿಜಯ ರಾಘವೇಂದ್ರ-ಐಶ್ವರ್ಯಾ 'ಚಲ್ಲಾಪಿಲ್ಲಿ' ಶುರು

  |

  ಆಕರ್ಷಕ ಶೀರ್ಷಿಕೆಯ ಹೊಸ ಚಿತ್ರವೊಂದು ಸ್ಯಾಂಡಲ್ ವುಡ್ ನಲ್ಲಿ ಮುಹೂರ್ತ ಮುಗಿಸಿಕೊಂಡು ಶೂಟಿಂಗ್ ಪ್ರಾರಂಭಿಸಿದೆ. ಕಳೆದ ವಾರ ಮಂಗಳೂರಿನ 'ಸೋಮನಾಥೇಶ್ವರ' ದೇವಾಲಯ' ದಲ್ಲಿ ಮುಹೂರ್ತ ಮುಗಿಸಿಕೊಂಡು ದೇವರ ಮೇಲೆ ಸೆರೆಹಿಡಿಯಲಾದ ದೃಶ್ಯವೊಂದರ ಮೂಲಕ ಚಿತ್ರೀಕರಣ ಪ್ರಾರಂಭಿಸಿರುವ ಈ 'ಚಲ್ಲಾಪಿಲ್ಲಿ' ಚಿತ್ರಕ್ಕೆ ನಟ ವಿಜಯರಾಘವೇಂದ್ರ ನಾಯಕರು ಹಾಗೂ ನಟಿ ಐಶ್ವರ್ಯಾ ನಾಗ್ ನಾಯಕಿ.

  ಇತ್ತೀಚಿಗೆ ನಟಿ ಐಶ್ವರ್ಯಾ ನಾಗ್ ಅವರು ಸಾಲುಸಾಲು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚೇತನ್ ಚಂದ್ರ ನಟನೆ ಹಾಗೂ ರವಿತೇಜ ನಿರ್ದೇಶನದ ಸದ್ಯದಲ್ಲೇ ಮುಹೂರ್ತ ನಡೆಯಲಿರುವ 'ಬಿಸ್ಕೆಟ್' ಚಿತ್ರದ ನಾಯಕಿಯಾಗಿ ಆಯ್ಕೆಯಾಗಿರುವ ಈ ಐಶ್ವರ್ಯಾ ನಾಗ್ 'ಲೂಸುಗಳು' ಎಂಬ ಮತ್ತೊಂದು ಚಿತ್ರಕ್ಕೂ ನಾಯಕಿ. ಇಷ್ಟೇ ಅಲ್ಲ, ಇನ್ನೂ ನಾಲ್ಕೈದು ಚಿತ್ರಗಳು ಐಶ್ವರ್ಯಾ ಕೈನಲ್ಲಿವೆ. ಇನ್ನು ವಿಜಯ ರಾಘವೇಂದ್ರ ನಾಯಕತ್ವದ 'ಸ್ನೇಹಿತರು' ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದೆ.

  ಕನ್ನಡದಲ್ಲಿ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶಿಸುತ್ತಿರುವ ಸಾಯಿ ಕೃಷ್ಣ, ವಿಜಯರಾಘವೇಂದ್ರ ಹಾಗೂ ಐಶ್ವರ್ಯಾ ನಾಗ್ ಜೋಡಿಯನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಹಳಷ್ಟು ರಂಗಭೂಮಿ ಕಲಾವಿದರು ಕೂಡ ಅಭಿನಯಿಸುತ್ತಿದ್ದಾರೆ. ಶೋಭರಾಜ್, ನವೀನ್ ಪಟೇಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸುಂದರ್ ರೈ, ಮಂದಾರ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿರವುದು ವಿಶೇಷ.

  ಚಲ್ಲಾಪಿಲ್ಲಿ ಚಿತ್ರಕ್ಕೆ ಪಿ ಎಲ್ ರವಿ ಛಾಯಾಗ್ರಾಹಕರಾಗಿದ್ದು ಮಿಷ್ಠ ಸಂಗೀತ ಸಂಯೋಜಿಸಲಿದ್ದಾರೆ. ಈ ಚಿತ್ರಕ್ಕೆ ಕೌರವ ವೆಂಕಟೇಶ್ ಸಾಹಸವಿದ್ದು ಹರ್ಷ, ರಾಜೇಶ್ ಮತ್ತು ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನವಿದೆ. ಬಾಬುಖಾನ್ ಕಲಾನಿರ್ದೇಶನ ಹಾಗೂ ಸುಹಾಸ್ ಸಹನಿರ್ದೇಶನ 'ಚಲ್ಲಾಪಿಲ್ಲಿ' ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರಕ್ಕೆ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. (ಒನ್ ಇಂಡಿಯಾ ಕನ್ನಡ)

  English summary
  Kannada Movie Challa Pilli Starts in actor Vijaya Raghavendra's Lead Role. Sai Krishna, who directed some Tulu movies to direct this movie and Aishwarya Nag is the Heroine for this. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X