»   » ಚಿತ್ರಮಂದಿರದಲ್ಲಿ ಬೆಚ್ಚಿಬೀಳಿಸುತ್ತಿರುವ 'ಚಂದ್ರಲೇಖ'

ಚಿತ್ರಮಂದಿರದಲ್ಲಿ ಬೆಚ್ಚಿಬೀಳಿಸುತ್ತಿರುವ 'ಚಂದ್ರಲೇಖ'

Posted By:
Subscribe to Filmibeat Kannada

ಹೆಸರಾಂತ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ಅವರ ನಿರ್ದೇಶನದ ಚಿರಂಜೀವಿ ಸರ್ಜಾ, ಶಾನ್ವಿ ಶ್ರೀವತ್ಸ, ಸಾಧು ಕೋಕಿಲ, ನಾಗಶೇಖರ್ ಅಭಿನಯದ ಫನ್, ಫಿಯರ್, ರೊಮಾನ್ಸ್ ಒಳಗೊಂಡ 'ಚಂದ್ರಲೇಖ' 50ನೇ ಯಶಸ್ವಿ ಪ್ರದರ್ಶನವನ್ನು ಪೂರೈಸಿ ಇದೀಗ 75 ದಿನದತ್ತ ಮುನ್ನುಗುತ್ತಿದೆ.

ಭಾರಿ ಬಜೆಟ್ ಚಿತ್ರಗಳೇ ಅರ್ಧ ಶತಕ ಪೂರೈಸಲು ಪ್ರಯಾಸಪಡುತ್ತಿರುವ ಇಂದಿನ ದಿನಗಳಲ್ಲಿ ರೀಮೇಕ್ ಆದರೂ ಮೀಡಿಯಂ ಬಜೆಟ್ ನಲ್ಲಿ ನಿರ್ಮಿಸಿರುವ ಚಂದ್ರಲೇಖ ಚಿತ್ರ ಗಾಂಧಿನಗರದಲ್ಲಿ ಅಚ್ಚರಿ ಮೂಡಿಸಿದೆ. [ಚಂದ್ರಲೇಖ ಚಿತ್ರವಿಮರ್ಶೆ]


ಕರ್ನಾಟಕದಾದ್ಯಂತ 35ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಚಂದ್ರಲೇಖ' 75 ದಿವಸಗಳ ಪ್ರದರ್ಶನ ಕಾಣುವ ಭರವಸೆ ಎಸ್ ಎಂ ಪ್ರೊಡಕ್ಷನ್ ಬ್ಯಾನರ್ ನಿರ್ಮಾಪಕ ಕೆ ವಿ ಶ್ರೀಧರ್ ರೆಡ್ಡಿ ಅವರಿಗಿದೆ.

ಎನ್ ಓಂಪ್ರಕಾಶ್ ರಾವ್ ಅವರು ನಿರ್ದೇಶನ ಮಾಡಿರುವ ಕೇವಲ ನಾಲ್ಕು ಮುಖ್ಯ ಪಾತ್ರಗಳನ್ನು ಒಳಗೊಂಡಿರುವ 'ಚಂದ್ರಲೇಖ' ಚಿತ್ರದ ಬಹುಭಾಗ ರಾತ್ರಿ ವೇಳೆ ಒಂದೇ ಮನೆಯಲ್ಲಿ ಚಿತ್ರೀಕರಣವಾಗಿರುವುದು ವಿಶೇಷ.

ಜೆ ಬಿ ಈ ಚಿತ್ರದ ಸಂಗೀತ ನಿರ್ದೇಶಕರು. ಬಿ ರವಿಕುಮಾರ್ ಛಾಯಾಗ್ರಾಹಕರು, ಲಕ್ಷ್ಮಣ್ ರೆಡ್ಡಿ ಸಂಕಲನ, ಎಂ ಎಸ್ ರಮೇಶ್ ಅವರ ಸಂಭಾಷಣೆ, ರವಿ ವರ್ಮ ಅವರ ಸಾಹಸ 'ಚಂದ್ರಲೇಖ' ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

English summary
Kannada movie Chandralekha has completed 50 days and running towards 75 days in 35 centres. Chiranjeevi Sarja and Sanvi Srinivas starer "Fun Fear Romance" movie getting good response from the audience.
Please Wait while comments are loading...