»   » ದ್ವಾರಕೀಶ್ 'ಚೌಕ'ದ ಪ್ರತಿಭೆಗಳತ್ತ ಒಂದು ಇಣುಕು ನೋಟ

ದ್ವಾರಕೀಶ್ 'ಚೌಕ'ದ ಪ್ರತಿಭೆಗಳತ್ತ ಒಂದು ಇಣುಕು ನೋಟ

Posted By:
Subscribe to Filmibeat Kannada

ಖ್ಯಾತ ನಟ ಕಮ್ ನಿರ್ಮಾಪಕ ದ್ವಾರಕೀಶ್ ಅವರ ಜೊತೆ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಹೊಸದಾಗಿ 'ಚೌಕ' ಎಂಬ ಪ್ರಯೋಗ ಮಾಡಲು ಹೊರಟಿರುವ ವಿಚಾರದ ಬಗ್ಗೆ ಈ ಮೊದಲೇ ನಿಮಗೆ ತಿಳಿಸಿಯಾಗಿದೆ.

ದ್ವಾರಕೀಶ್ ನಿರ್ಮಾಣ ಸಂಸ್ಥೆಯಿಂದ ಮೂಡಿಬರುತ್ತಿರುವ '50'ನೇ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ 4 ಜನ ಸ್ಯಾಂಡಲ್ ವುಡ್ ಸ್ಟಾರ್ ನಟರು ವಿಶೇಷ ಪಾತ್ರ ವಹಿಸುತ್ತಿದ್ದಾರೆ. ಇದೀಗ 'ಚೌಕ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಈ ಮೋಷನ್ ಪೋಸ್ಟರ್ ಮೂಲಕ ನಾಲ್ಕು ಜನ ನಟರ ಪರಿಚಯ ಮಾಡಲಾಗಿದೆ.[ಪ್ರಜ್ವಲ್ ದೇವರಾಜ್ ಮೇಲೆ ಜೇನು ಹುಳಗಳ ದಾಳಿ]

Kannada Movie 'Chowka' official Motion Poster released

ನಟ ವಿಜಯ ರಾಘವೇಂದ್ರ, ಲವ್ಲಿ ಸ್ಟಾರ್ ಪ್ರೇಮ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ದೂದ್ ಪೇಡಾ ದಿಗಂತ್ ಅವರು ಒಂದಾಗಿ ಕಾಣಿಸಿಕೊಳ್ಳುತ್ತಿರುವ 'ಚೌಕ' ಚಿತ್ರದಲ್ಲಿ ಈ ನಾಲ್ವರು ವಿಭಿನ್ನ ಪಾತ್ರ ವಹಿಸುತ್ತಿದ್ದಾರೆ. ಜೊತೆಗೆ ಈ ಚಿತ್ರಕ್ಕೆ 5 ಜನ ಛಾಯಾಗ್ರಾಹಕರು ಹಾಗೂ 5 ಜನ ಸಂಗೀತ ನಿರ್ದೇಶಕರು ಕೆಲಸ ಮಾಡುತ್ತಿರುವುದು ವಿಶೇಷ.[50ನೇ ಚಿತ್ರದಲ್ಲಿ ಸಿನಿರಸಿಕರಿಗೆ ಮೋಡಿ ಮಾಡಲಿದ್ದಾರೆ ದ್ವಾರಕೀಶ್]

ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಅವರು 'ಹಕ್ಕಿ ಗೋಪಾಲ' ಎಂಬ ಪಾತ್ರ ವಹಿಸಿದರೆ, ವಿಜಯ ರಾಘವೇಂದ್ರ ಅವರು 'ಸೂರ್ಯ ಶೆಟ್ಟಿ'ಯಾಗಿದ್ದಾರೆ. ದೂದ್ ಪೇಡಾ ದಿಗಂತ್ ಅವರು ಕೃಷ್ಣ ರಾವ್ ಎಂಬ ಪಾತ್ರದ ಜವಾಬ್ದಾರಿ ಹೊತ್ತಿದ್ದು, ಪ್ರಜ್ವಲ್ ದೇವರಾಜ್ ಅವರು ಮುಸ್ಲಿಂ ಯುವಕ ಮೊಹಮ್ಮದ್ ಅನ್ವರ್ ಪಾತ್ರ ವಹಿಸಿದ್ದಾರೆ.

Kannada Movie 'Chowka' official Motion Poster released

ಒಟ್ನಲ್ಲಿ ಈ ಚಿತ್ರದಲ್ಲಿ ಈ ನಾಲ್ಕೂ ಬೇರೆ ಬೇರೆ ಯುವಕರನ್ನು ಒಂದೇ ಕಡೆ ಬೆಸೆಯುವಂತೆ ಕಥೆ ಸೃಷ್ಟಿ ಮಾಡಲಾಗಿದೆ. ಜೊತೆಗೆ 'ಚೌಕ' ಚಿತ್ರ ಬರೀ ಈ ನಾಲ್ಕು ಯುವಕರ ಸುತ್ತ ಗಿರಕಿ ಹೊಡೆಯಲಿದೆ.[ಇದಪ್ಪಾ ಕುಳ್ಳ ದ್ವಾರಕೀಶ್ ಅವರ ಹೊಸ ಸಾಹಸ ಅಂದ್ರೆ]

ಅಂತೂ ಬರೀ ಮೋಷನ್ ಪೋಸ್ಟರ್ ಮೂಲಕ ಭಾರಿ ಕುತೂಹಲ ಮೂಡಿಸಿರುವ 'ಚೌಕ' ಹೇಗಿರಬಹುದು ಅನ್ನೋ ಕುತೂಹಲ ನಮಗಂತೂ ಖಂಡಿತ ಇದೆ. ನಿಮಗೂ ಇದೆ ಅಂತ ಅಂದುಕೊಳ್ಳುತ್ತೇವೆ. ಸದ್ಯಕ್ಕೆ ಬಿಡುಗಡೆ ಆಗಿರುವ ಈ ಮೋಷನ್ ಪೋಸ್ಟರ್ ನತ್ತ ಕೊಂಚ ಕಣ್ಣಾಡಿಸಿ....

Kannada Movie 'Chowka' official Motion Poster released
English summary
Watch Dwarakesh Productions Kannada Movie 'Chowka' Official Motion Poster. Starring Actor Vijay Raghavendra, Actor Nenapirali Prem, Actor Prajwal Devaraj, Actor Diganth and others. The movie is directed by Tharun Sudhir.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada