»   » ಮುಂದಿನ ವಾರ 'ಚೌಕ' ತೆರೆಗೆ! ವಿಶೇಷತೆಗಳ ಸುತ್ತ ಒಂದು ನೋಟ!

ಮುಂದಿನ ವಾರ 'ಚೌಕ' ತೆರೆಗೆ! ವಿಶೇಷತೆಗಳ ಸುತ್ತ ಒಂದು ನೋಟ!

Posted By:
Subscribe to Filmibeat Kannada

ಒಂದೇ ಚಿತ್ರದಲ್ಲಿ ಹಲವು ವಿಶೇಷತೆಗಳನ್ನ ಹೊಂದಿರುವ ಭಾರತೀಯ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿತ್ರ ಕನ್ನಡದ 'ಚೌಕ'. ದ್ವಾರಕೀಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ 50ನೇ ಚಿತ್ರ ಇದಾಗಿದ್ದು, ಕೊನೆಗೂ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ.[50ನೇ ಚಿತ್ರದಲ್ಲಿ ಸಿನಿರಸಿಕರಿಗೆ ಮೋಡಿ ಮಾಡಲಿದ್ದಾರೆ ದ್ವಾರಕೀಶ್]

ಕನ್ನಡದ ನಾಲ್ಕು ನಟರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ನಾಲ್ಕು ಬ್ಯೂಟಿಫುಲ್ ನಟಿಯರು ಸಾಥ್ ಕೊಟ್ಟಿದ್ದಾರೆ. ಸುಮಾರು ಪ್ರತಿಯೊಂದು ತಂಡದಲ್ಲೂ 5 ಜನ ಸದಸ್ಯರು ಕೆಲಸ ಮಾಡಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ, ಇಷ್ಟೋತ್ತಿಗಾಗಲೇ 'ಚೌಕ' ತೆರೆಕಾಣಬೇಕಿತ್ತು. ಆದ್ರೆ, ನಾನಾ ಕಾರಣಗಳಿಂದ ಮುಂದೂಡಲಾಗಿತ್ತು. ಇದೀಗ, ಅಂತಿಮವಾಗಿ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದು, ಚಿತ್ರಮಂದಿರ ಕಾಯ್ದಿರಿಸಿದೆ.

4 ನಾಯಕರ 'ಚೌಕ'!

'ಚೌಕ' ಸಿನಿಮಾದಲ್ಲಿ ಸ್ಯಾಂಡರ್ ವುಡ್‌ನ 4 ಸ್ಟಾರ್ ನಟರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್, ವಿಜಯ್ ರಾಘವೇಂದ್ರ, ದಿಗಂತ್, ಪ್ರಜ್ವಲ್ ದೇವರಾಜ್ 'ಚೌಕ'ದ 4 ಪಿಲ್ಲರ್ ಗಳು ಎನಿಸಿಕೊಂಡಿದ್ದಾರೆ.[ದ್ವಾರಕೀಶ್ 'ಚೌಕ'ದ ಪ್ರತಿಭೆಗಳತ್ತ ಒಂದು ಇಣುಕು ನೋಟ]

4 ನಾಯಕಿಯರು ಸಾಥ್!

'ಚೌಕ' ಸಿನಿಮಾದಲ್ಲಿ ಈ 4 ಪಿಲ್ಲರ್ ಗಳಿಗೆ ನಾಲ್ಕು ನಟಿಯರು ಜೊತೆಯಾಗಿದ್ದು, ಪಂಚ ಭಾಷಾ ನಟಿ ಪ್ರಿಯಾಮಣಿ, ದೀಪಾ ಸನ್ನಿಧಿ, ಭಾವನಾ ಮೆನನ್ ಮತ್ತು ಐಂದ್ರಿತಾ ರೇ ಕಾಣಿಸಿಕೊಂಡಿದ್ದಾರೆ.['ಚೌಕ' ಚಿತ್ರದ ನಾಲ್ವರು ಹೀರೋಯಿನ್ ಗಳು 'ಈ' ನಟಿಯರೇ.!]

ನಾಲ್ಕು ಕಾಲಘಟ್ಟದ ಕಥೆಯೇ 'ಚೌಕ'!

'ಚೌಕ'ದ ಕಥೆಯೂ ನಾಲ್ಕು ಕಾಲಘಟ್ಟದಲ್ಲಿ ಜರುಗಲಿದೆ. ನೆನಪಿರಲಿ ಪ್ರೇಮ್ 1986 ಕಾಲಘಟ್ಟದಲ್ಲಿ ಕಾಣಿಸಿಕೊಂಡಿದ್ದಾರೆ. ದಿಗಂತ್ 1995 ಕಾಲಘಟ್ಟದಲ್ಲಿ ಕಾಣಿಸಿಕೊಳ್ಳುತ್ತಾರೆ. 2000 ಕಾಲಘಟ್ಟದಲ್ಲಿ 'ವಿಜಯ್‌ ರಾಘವೇಂದ್ರ' ಅಭಿನಯಿಸಿದ್ರೆ, ಇಂದಿನ ಟ್ರೆಂಡ್ ನಲ್ಲಿ ಪ್ರಜ್ವಲ್ ದೇವರಾಜ್‌ ಬಣ್ಣ ಹಚ್ಚಿದ್ದಾರೆ. ಹೀಗಾಗಿ, ನಾಲ್ಕು ವಿಭಿನ್ನ ಹಂತಗಳಲ್ಲಿ 'ಚೌಕ' ಸಿನಿಮಾ ಸಾಗುತ್ತೆ.[ಇದಪ್ಪಾ ಕುಳ್ಳ ದ್ವಾರಕೀಶ್ ಅವರ ಹೊಸ ಸಾಹಸ ಅಂದ್ರೆ]

'25' ಜನ ತಂತ್ರಜ್ಞರು!

'ಚೌಕ' ಸಿನಿಮಾದ ಬಹುದೊಡ್ಡ ವಿಶೇಷ ಅಂದ್ರೆ ತಂತ್ರಜ್ಞರ ತಂಡ. ಗುರುಕಿರಣ್, ಅರ್ಜುನ್ ಜನ್ಯಾ, ವಿ.ಹರಿಕೃಷ್ಣ, ಅನೂಪ್ ಸೀಳೀನ್, ಶ್ರೀಧರ್ ವಿ ಸಂಭ್ರಮ್ 5 ಜನ ಸಂಗೀತ ನಿರ್ದೇಶನ ಮಾಡಿದ್ರೆ, ಸತ್ಯಾ ಹೆಗ್ಡೆ, ಎಸ್.ಕೃಷ್ಣ, ಸಂತೋಷ್ ರೈ ಪಥತೆ, ಶೇಖರ್, ಚಂದ್ರು, ಸುಧಾಕರ್ ರಾಜ್‌ ಎಂಬ 5 ಛಾಯಾಗ್ರಾಹಕರು ಸಿನಿಮಾ ಶೂಟ್ ಮಾಡಿದ್ದಾರೆ. ಇನ್ನುಳಿದಂತೆ ಎ.ಪಿ. ಅರ್ಜುನ್, ಸಿಂಪಲ್ ಸುನಿ, ಎ.ವಿ.ಚಿಂತನ್, ಯೋಗಾನಂದ್ ಮುದ್ದನ್, ಅನಿಲ್‌ ಕುಮಾರ್ ಚಿತ್ರಕ್ಕೆ ಡೈಲಾಗ್ ಬರೆದಿದ್ದಾರೆ. ಹಾಗೂ 5 ಜನ ಸಾಹಿತ್ಯ, ಮತ್ತು 5 ಕಲಾ ನಿರ್ದೇಶಕರು ಕೆಲಸ ಮಾಡಿದ್ದಾರೆ.

ದ್ವಾರಕೀಶ್ ಅವರ 50ನೇ ಚಿತ್ರ!

ಕನ್ನಡದ ಕುಳ್ಳನ 50ನೇ ಚಿತ್ರ. 'ಮೇಯರ್ ಮುತ್ತಣ್ಣ', ಭಾಗ್ಯವಂತರು, ಆಪ್ತಮಿತ್ರ,ಕಿಟ್ಟು ಪುಟ್ಟು, ಸಿಂಗಾಪುರದಲ್ಲಿ ರಾಜಾಕುಳ್ಳ, ಮಂಕುತಿಮ್ಮ, ನೀ ತಂದ ಕಾಣಿಕೆ, ಆಫ್ರೀಕಾದಲ್ಲಿ ಶೀಲಾ, ಡ್ಯಾನ್ಸ್ ರಾಜಾ ಡ್ಯಾನ್ಸ್, ಶೃತಿ, ವಿಷ್ಣುವರ್ಧನ, ಚಾರುಲತಾ, ಆಟಗಾರ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳನ್ನ ದ್ವಾರಕೀಶ್ ಬ್ಯಾನರ್ ನೀಡಿದೆ. ಈಗ 50 ನೇ ಚಿತ್ರ 'ಚೌಕ' ಆಗಿದ್ದು, ನಿರೀಕ್ಷೆ ಹೆಚ್ಚಿದೆ.

ಚಾಲೆಂಜಿಂಗ್ ಸ್ಟಾರ್ ಸ್ಪೆಷಲ್ ಎಂಟ್ರಿ!

ಚೌಕ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ವಿಶೇಷ ಪಾತ್ರದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ದೊಡ್ಡ ಸಾಹಸ ದೃಶ್ಯವಿದ್ದು, ಈ ಫೈಟ್ ನಲ್ಲಿ ಬಾಹುಬಲಿ ಖ್ಯಾತಿಯ 'ಕಾಲಕೇಯ'ನ ಜೊತೆ ದರ್ಶನ್ ಫೈಟ್ ಮಾಡಿದ್ದಾರೆ.[ಬಾಹುಬಲಿ 'ಕಾಲಕೇಯ'ನ ಜೊತೆ ದರ್ಶನ್ ಕಾಳಗ]

ಪುನೀತ್ ರಾಜ್ ಕುಮಾರ್ ಕಂಠ!

ಇನ್ನೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಚೌಕ' ಚಿತ್ರಕ್ಕಾಗಿ ಒಂದು ಗೀತೆಯನ್ನು ಹಾಡಿದ್ದಾರೆ. ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ, ಮತ್ತು 'ಬಹದ್ದೂರ್' ಚೇತನ್ ಸಾಹಿತ್ಯ ಇದೆ.[40 ವರ್ಷಗಳ ಬಳಿಕ ದ್ವಾರಕೀಶ್-ಡಾ.ರಾಜ್ ಕುಮಾರ್ ಕುಟುಂಬ ಸಮಾಗಮ]

ಫೆಬ್ರವರಿ 3ಕ್ಕೆ ಚೌಕ ತೆರೆಗೆ!

ತರುಣ್ ಸುದೀರ್ ಮೊದಲ ಭಾರಿಗೆ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದು, ಮುಂದಿನ ವಾರ ಅಂದ್ರೆ, ಫೆಬ್ರವರಿ 3ಕ್ಕೆ ವಿಶೇಷತೆಗಳ 'ಚೌಕ' ತೆರೆ ಕಾಣಲಿದೆ.[ಈ ಹಾಡನ್ನು ಕೇಳಿ ಸ್ಯಾಂಡಲ್‌ ವುಡ್ ನಟಿಯರು ಕಣ್ಣೀರಿಟ್ಟಿದ್ದು ಏಕೆ?]

English summary
Dwarkish 50th production Chawka has confirmed the releasing date for January 19th. 'Chauka' is a multi starrer film with Prem, Prajwal, Diganth and Vijay Raghavendra are the prominent roles in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada