»   » ದ್ವಾರಕೀಶ್ ನಿರ್ಮಾಣದ 'ಚೌಕ' ಚಿತ್ರ ಬಿಡುಗಡೆ ಯಾವಾಗ.?

ದ್ವಾರಕೀಶ್ ನಿರ್ಮಾಣದ 'ಚೌಕ' ಚಿತ್ರ ಬಿಡುಗಡೆ ಯಾವಾಗ.?

Posted By:
Subscribe to Filmibeat Kannada

ದ್ವಾರಕೀಶ್ ನಿರ್ಮಾಣ ಸಂಸ್ಥೆಯ 50ನೇ ಚಿತ್ರವಾದ 'ಚೌಕ' ಚಿತ್ರೀಕರಣ ಮುಕ್ತಾಯಗೊಂಡಿದೆ. ಜನವರಿ 19 ರಂದು 'ಚೌಕ' ಚಿತ್ರವನ್ನ ಬಿಡುಗಡೆ ಮಾಡಲು ಚಿತ್ರತಂಡ ಸಕಲ ತಯಾರಿ ನಡೆಸುತ್ತಿದೆ.

'ಚೌಕ' ಒಂದು ಅಪರೂಪದ ಮಲ್ಟಿ ಸ್ಟಾರರ್ ಚಿತ್ರ. ಅಣ್ಣ ನಂದ ಕಿಶೋರ್ ನಿರ್ದೇಶನದ ಚಿತ್ರಗಳಲ್ಲಿ ಕೆಲಸ ಮಾಡಿದ್ದ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ ಇದು. ಪ್ರೇಮ್, ದಿಗಂತ್, ಪ್ರಜ್ವಲ್ ದೇವರಾಜ್ ಹಾಗೂ ವಿಜಯ ರಾಘವೇಂದ್ರ ಅಭಿನಯದ ಚಿತ್ರ 'ಚೌಕ'.[50ನೇ ಚಿತ್ರದಲ್ಲಿ ಸಿನಿರಸಿಕರಿಗೆ ಮೋಡಿ ಮಾಡಲಿದ್ದಾರೆ ದ್ವಾರಕೀಶ್]

Kannada Movie 'Chowka' to release on January 19th

ಸದ್ಯ 'ಚೌಕ' ಸಿನಿಮಾ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿರುವುದು ಹಾಡುಗಳಿಂದ. ಈಗಾಗಲೇ ಯೋಗರಾಜ್ ಭಟ್ ಬರೆದಿರುವ 'ಅಲ್ಲಾಡ್ಸು ಅಲ್ಲಾಡ್ಸು...' ಹಾಡು ವೈರಲ್ ಆಗಿದೆ.

ಇನ್ನೂ ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ 'ಅಪ್ಪ ಐ ಲವ್ ಯು' ಹಾಡು ಸಹ ಜನಪ್ರಿಯತೆ ಪಡೆದುಕೊಂಡಿದೆ.

Kannada Movie 'Chowka' to release on January 19th

ಐಂದ್ರಿತಾ ರೇ, ಪ್ರಿಯಾಮಣಿ, ಭಾವನ, ದೀಪಾ ಸನ್ನಿಧಿ, ಚಿಕ್ಕಣ್ಣ, ಶರತ್ ಲೋಹಿತಾಶ್ವ, ತಬಲ ನಾಣಿ ಅಂತಹ ದೊಡ್ಡ ತಾರಾಬಳಗ ಇರುವ ಚಿತ್ರ 'ಚೌಕ'. ಜನವರಿ 19 ರಂದು ರಿಲೀಸ್ ಆಗಲಿರುವ 'ಚೌಕ' ಚಿತ್ರವನ್ನ ನೋಡಲು ನೀವು ರೆಡಿನಾ...

English summary
Tarun Sudheer directorial Kannada Movie 'Chowka' is all set to release on January 19th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada