»   » 'ಚೌಕ' ಚಿತ್ರದ 20 ನಿಮಿಷಗಳ ದೃಶ್ಯಕ್ಕೆ ಕತ್ತರಿ!

'ಚೌಕ' ಚಿತ್ರದ 20 ನಿಮಿಷಗಳ ದೃಶ್ಯಕ್ಕೆ ಕತ್ತರಿ!

Posted By:
Subscribe to Filmibeat Kannada

ಕಳೆದ ವಾರವಷ್ಟೇ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಚೌಕ' ಚಿತ್ರದಲ್ಲಿ 20 ನಿಮಿಷಗಳ ದೃಶ್ಯವನ್ನ ತೆಗೆದುಹಾಕಲಾಗಿದೆ.

ಸುಮಾರು 2 ಗಂಟೆ 48 ನಿಮಿಷ ಹೊಂದಿದ್ದ ಚಿತ್ರದಲ್ಲಿ ಈಗ 20 ನಿಮಿಷಗಳು ಕಡಿಮೆ ಮಾಡಿದ್ದು, ಎರಡೂವರೆ ಗಂಟೆಯ ಸಿನಿಮಾ ಮಾಡಲಾಗಿದೆ. ಫೆಬ್ರವರಿ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ 'ಚೌಕ' ಸದ್ಯ, ಯಶಸ್ವಿ ಪ್ರದರ್ಶನ ಕಾಣುತ್ತಿದೆ.[ವಿಮರ್ಶೆ: ಒಳ್ಳೆಯ ಕೆಲಸಗಳಿಗೆ ತಾಳ್ಮೆ ಇರಲಿ ಎಂದು ಹೇಳುವ 'ಚೌಕ']

ಅಷ್ಟಕ್ಕೂ, ಚೌಕ ಚಿತ್ರದ ಯಾವ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಎಷ್ಟು ಗಂಟೆಗೆ ಕಡಿತಗೊಳಿಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ...

ಚಿತ್ರಮಂದಿರಕ್ಕೆ ಸಮಸ್ಯೆ!

2 ಗಂಟೆ 48 ನಿಮಿಷ ಹೊಂದಿದ್ದ 'ಚೌಕ' ಚಿತ್ರದಿಂದ ವೀಕ್ಷಕರಿಗೆ ಮತ್ತು ಚಿತ್ರಮಂದಿರದ ಮಾಲೀಕರಿಗೆ ಸಮಸ್ಯೆಯಾಗಿತ್ತು. ಚಿತ್ರದ ಕಾಲಾವಧಿ ದೊಡ್ಡದಾಗಿದ್ದರಿಂದ, ಮುಂದಿನ ಶೋಗಳನ್ನ ಆರಂಭಿಸುವುದಕ್ಕೆ ಥಿಯೇಟರ್ ಮಾಲೀಕರಿಗೆ ಸಮಸ್ಯೆಯಾಗುತ್ತಿತ್ತು.

ಪ್ರೇಕ್ಷಕರಿಗೂ ಸಮಸ್ಯೆ!

ಬೆಳಗ್ಗಿನ ಶೋಗಳನ್ನ ಎಂಜಾಯ್ ಮಾಡುತ್ತಾ ನೋಡಿದ ವೀಕ್ಷಕರು, ಸೆಕೆಂಡ್ ಶೋನಿಂದ ಬೇಜಾರಾಗಿದ್ದರು. ಯಾಕಂದ್ರೆ, 12.30ಕ್ಕೆ ಮುಗಿಯಬೇಕಿದ್ದ ಚಿತ್ರ 1.40 ರವರೆಗೂ ಪ್ರದರ್ಶನವಾಗುತ್ತಿತ್ತು. ಹೀಗಾಗಿ, ರಾತ್ರಿ ಮನೆಗೆ ತೆರಳಲು ಸಮಸ್ಯೆಯಾಗುತ್ತಿತ್ತು.

ಯಾವ ದೃಶ್ಯಕ್ಕೆ ಕತ್ತರಿ!

ಆದ್ದರಿಂದ, ಚಿತ್ರಮಂದಿರ ಹಾಗೂ ಪ್ರೇಕ್ಷಕರ ಹಿತದೃಷ್ಠಿಯಿಂದ 20 ನಿಮಿಷಗಳನ್ನ ಕಡಿಮೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಈಗಾಗಲೇ ಕೆಲವು ದೃಶ್ಯಗಳನ್ನ ತೆಗೆದು ಹಾಕಲಾಗಿದೆಯಂತೆ. ದೃಶ್ಯಗಳಿಗೆ ಕತ್ತರಿ ಹಾಕುವುದರಿಂದ ಕಥೆಗೆ ದಕ್ಕೆಯಾಗುವುದೆಂದು, ವಿಜಯರಾಘವೇಂದ್ರ ಹಾಗೂ ಪ್ರಜ್ವಲ್ ದೇವರಾಜ್ ಅವರ ಫೈಟ್ ದೃಶ್ಯಗಳನ್ನ, ಮತ್ತು ಟೈಟಲ್ ಕಾರ್ಡ್ ನಲ್ಲೂ ಸಮಯ ಕಡಿತಗೊಳಿಸಲಾಗಿದೆಯಂತೆ. ಹೀಗಾಗಿ, 'ಚೌಕ' ಸಿನಿಮಾ 2 ಗಂಟೆ 30 ನಿಮಿಷಕ್ಕೆ ಕಡಿತಗೊಂಡಿದೆ.

ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ!

ಅಂದ್ಹಾಗೆ, 'ಚೌಕ' ದ್ವಾರಕೀಶ್ ನಿರ್ಮಾಣದ 50ನೇ ಚಿತ್ರ. ತರುಣ್ ಸುಧೀರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪ್ರೇಮ್, ವಿಜಯ ರಾಘವೇಂದ್ರ, ಪ್ರಜ್ವಲ್ ದೇವರಾಜ್, ದಿಗಂತ್, ಭಾವನಾ, ಐಂದ್ರಿತಾ ರೈ, ದೀಪಾ ಸನ್ನಿಧಿ, ಪ್ರಿಯಾಮಣಿ ಹಾಗೂ ದರ್ಶನ್ ಅಭಿನಯಿಸಿದ್ದಾರೆ. ಫೆಬ್ರವರಿ 3 ರಂದು 'ಚೌಕ' ರಾಜ್ಯಾದ್ಯಂತ ತೆರೆಕಂಡಿತ್ತು.

English summary
One complaint against Chowka Movie is its length. The film is 2 hours and 48 minutes long. This has created some problems in theatres, especially for the second shows at night. so the film team to consider the problem and trimming the film by some 20 minutes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada