»   » 'ಧೂಮಪಾನ ಆರೋಗ್ಯಕ್ಕೆ ಹಾನಿಕರ' ಎಂದು ಕ್ಲಾಪ್ ಮಾಡಿದ ಯೋಗಿ

'ಧೂಮಪಾನ ಆರೋಗ್ಯಕ್ಕೆ ಹಾನಿಕರ' ಎಂದು ಕ್ಲಾಪ್ ಮಾಡಿದ ಯೋಗಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಪ್ರಯೋಗಾತ್ಮಕ ಚಿತ್ರಗಳಿಗೆ ಕನ್ನಡ ಸಿನಿಪ್ರಿಯರು ಉತ್ತಮ ರೆಸ್ಪಾನ್ಸ್ ನೀಡುತ್ತಿದ್ದಾರೆ. ಅಲ್ಲದೇ ಸಿನಿಮಾಗಳು ಗೆಲ್ಲುತ್ತಿರುವ ಹಿನ್ನೆಲೆಯಲ್ಲಿ, ವಿಭಿನ್ನ ಸಿನಿಮಾಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ.

ಕನ್ನಡ ಚಿತ್ರರಂಗ ನಿಂತ ನೀರಲ್ಲ, ಹರಿಯುತ್ತಿರುವ ನದಿ ಎಂಬುದನ್ನು ಸಾಬೀತು ಪಡಿಸಲು ಇದಕ್ಕೆ ಸಾಕ್ಷಿಯಾಗಿ ಇನ್ನೊಂದು ಪ್ರಯೋಗಾತ್ಮಕ ಚಿತ್ರದ ಮಹೂರ್ತ ನಿನ್ನೆ ನೆರವೇರಿದೆ. ಆ ಚಿತ್ರದ ಡೀಟೇಲ್ಸ್ ಇಲ್ಲಿದೆ ನೋಡಿ..

ಚಿತ್ರದ ಹೆಸರೇನು?

ಯಾವುದೇ ಸಿನಿಮಾ ಥಿಯೇಟರ್ ನಲ್ಲಿ ಆರಂಭವಾಗುವುದಕ್ಕಿಂತ ಮೊದಲು ಪ್ರೇಕ್ಷಕರಿಗೆ ಹೇಳುವುದು 'ಧೂಮಪಾನ ಆರೋಗ್ಯಕ್ಕೆ ಹಾನಿಕರ' ಎಂದು. ಈಗ ಅದೇ ವಾಕ್ಯವನ್ನು ಟೈಟಲ್ ಆಗಿ ಬಳಸಿಕೊಂಡು ಹೊಸಬರ ಸಿನಿಮಾವೊಂದು ಮೂಡಿಬರುತ್ತಿದೆ.

ಚಿತ್ರಕ್ಕೆ ಕ್ಲಾಪ್ ಮಾಡಿದ ಯೋಗಿ

'ಧೂಮಪಾನ ಆರೋಗ್ಯಕ್ಕೆ ಹಾನಿಕರ' ಚಿತ್ರಕ್ಕೆ ನಿನ್ನೆ ಬೆಂಗಳೂರಿನ ಜೆ ಪಿ ನಗರದ 6ನೇ ಹಂತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಮಹೂರ್ತ ನೆರವೇರಿದ್ದು, ಚಿತ್ರಕ್ಕೆ ಲೂಸ್ ಮಾದ ಯೋಗಿ ಕ್ಲಾಪ್ ಮಾಡಿದ್ದಾರೆ.

ಹೊಸಬರ ತಂಡದಿಂದ 'ಧೂಮಪಾನ ಆರೋಗ್ಯಕ್ಕೆ ಹಾನಿಕರ'

ಅಂದಹಾಗೆ ಈ ಚಿತ್ರವನ್ನು ಹೊಸಬರ ತಂಡವೊಂದು ನಿರ್ಮಿಸುತ್ತಿದ್ದು, ರಾಕೇಶ್ ಎಂಬುವವರು ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ವಿಶೇಷ ಅಂದ್ರೆ ಚಿತ್ರಕ್ಕೆ ನಾಯಕ ರಾಕೇಶ್ ರವರ ತಂದೆ ಎಂ.ಆರ್ ಲೋಕೇಶ್ ರವರೇ ಬಂಡವಾಳ ಹೂಡಿದ್ದಾರೆ.

ನಿರ್ದೇಶಕರು ಯಾರು?

ಅಘೋರಿಗಳ ಮತ್ತು ನಗರ ಪ್ರದೇಶದ ಮಾದಕವಸ್ತು ವ್ಯಸನಿಗಳ ಕುರಿತು ಕಥೆ ಹೆಣೆದು ಚಿತ್ರಕಥೆಯನ್ನು ಬರೆದು ರಾಂಗ್ ಕಾಲ್ ಚಂದ್ರು ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಚಿತ್ರದಲ್ಲಿ ಪೆಪುಸಿ ಬುಲ್ಲಿ ಅಭಿನಯ

'ಚೆಲುವಿನ ಚಿತ್ತಾರ' ಚಿತ್ರದ 'ಪೆಪುಸಿ ಬುಲ್ಲಿ' ಖ್ಯಾತಿಯ ಪಾತ್ರಧಾರಿ ರಾಕಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪವನ್ ಎಂಬುವವರ ಸಂಗೀತ ಸಂಯೋಜನೆ, ಪೂರ್ಣಚಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

English summary
Kannada Movie 'Dhumapaana - Arogyakke Haanikara' launched by loose mada Yogesh. This Movie will direct by Wrong Call Chandru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada