For Quick Alerts
  ALLOW NOTIFICATIONS  
  For Daily Alerts

  ನಕ್ಕು ನಗಿಸಲು ಬರ್ತಿದೆ 'ಡಬ್ಬಲ್ ಇಂಜಿನ್'

  By Bharath Kumar
  |

  'ಬಾಂಬೆ ಮಿಠಾಯಿ' ಸಿನಿಮಾ ಮಾಡಿ ಯಶಸ್ಸು ಕಂಡಿದ್ದ ನಿರ್ದೇಶಕ ಚಂದ್ರಮೋಹನ್ ಈಗ 'ಡಬ್ಬಲ್ ಇಂಜಿನ್' ಸಿನಿಮಾ ಮೂಲಕ ಮತ್ತೆ ವಾಪಸ್ ಬರ್ತಿದ್ದಾರೆ.

  ಈಗಾಗಲೇ ಟ್ರೈಲರ್ ಹಾಗೂ ಹಾಡುಗಳಿಂದ ಈ ಸಿನಿಮಾ ಸದ್ದು ಮಾಡುತ್ತಿದೆ. ಇದುವರೆಗೂ ಯೂಟ್ಯೂಬ್ ನಲ್ಲಿ ಟ್ರೈಲರ್ ನೋಡಿರುವವರ ಸಂಖ್ಯೆ 1.3 ಮಿಲಿಯನ್ ದಾಟಿದೆ. ಜೊತೆಗೆ ಹಾಡುಗಳು ಕೂಡ ಸೌಂಡ್ ಮಾಡ್ತಿದೆ.

  ಸಿನಿಮಾ ಶೂಟಿಂಗ್ ಮುಗಿಸಿರುವ ಚಿತ್ರತಂಡ ಇದೇ ತಿಂಗಳು ತೆರೆಗೆ ಬರುವ ಸಿದ್ಧತೆಯಲ್ಲಿದೆ. 'ಡಬ್ಬಲ್ ಇಂಜಿನ್' ಟ್ರೈಲರ್ ನಲ್ಲಿ ಹೆಚ್ಚು ಡಬಲ್ ಮೀನಿಂಗ್ ಡೈಲಾಗ್ ಗಳೇ ಇವೆ. ಹಾಗಂತ ಇದು ಡಬ್ಬಲ್ ಮೀನಿಂಗ್ ಸಿನಿಮಾ ಅಲ್ಲ. ಕಾಮಿಡಿ ಮೂಲಕ ಒಂದು ಮನರಂಜನೆ ನೀಡುವ ಪ್ರಯತ್ನ.

  ಮೂವರು ಹಳ್ಳಿಯ ಮುಗ್ದ ಹುಡುಗರ ಕಥೆ. ಧಿಡೀರ್ ಅಂತ ಶ್ರೀಮಂತರಾಗಲು ಇವರು ಅಡ್ಡದಾರಿ ಹಿಡಿಯುತ್ತಾರೆ. ಈ ದಾರಿಯಲ್ಲಿ ಅವರಿಗೆ ಅನೇಕ ಸಂಕಷ್ಟಗಳು ಎದುರಾಗುತ್ತೆ. ಕೊನೆಗೆ ತಾವು ಅಂದುಕೊಂಡಿದ್ದನ್ನು ಅವರು ಸಾಧಿಸುತ್ತಾರಾ ಇಲ್ಲವಾ ಎನ್ನುವುದು ಚಿತ್ರಕಥೆ.

  ಚಿಕ್ಕಣ್ಣ, ಅಶೋಕ್, ಪ್ರಭು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಸುಮನ್ ರಂಗನಾಥ್ ಮತ್ತು ಪ್ರಿಯಾಂಕಾ ಮಲ್ನಾಡ್ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಇವರ ಜೊತೆ ಸಾಧುಕೋಕಿಲಾ, ಸುಚ್ಚೇಂದ್ರ ಪ್ರಸಾದ್, ಶೋಭರಾಜ್, ದತ್ತಣ್ಣ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

  ಇನ್ನುಳಿದಂತೆ ವೀರ್ ಸಮರ್ಥ್ ಸಂಗೀತ ನೀಡಿದ್ದು, ಅರುಣ್ ಕುಮಾರ್, ಎನ್.ಶ್ರೀಕಾಂತ್, ಮಂದಾರ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

  English summary
  Kannada actor chikkanna, ashok, prabhu and suman ranganath starrer double engine ready to release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X