»   » 'ದುನಿಯಾ' ಚಿತ್ರಕ್ಕೂ 'ಟಗರು' ಚಿತ್ರಕ್ಕೂ ಬೆಳೆಯಿತು ಹೊಸ ನಂಟು

'ದುನಿಯಾ' ಚಿತ್ರಕ್ಕೂ 'ಟಗರು' ಚಿತ್ರಕ್ಕೂ ಬೆಳೆಯಿತು ಹೊಸ ನಂಟು

Posted By:
Subscribe to Filmibeat Kannada
'ದುನಿಯಾ' ಚಿತ್ರಕ್ಕೆ 'ಟಗರು' ಚಿತ್ರಕ್ಕೂ ಬೆಳೆಯಿತು ಹೊಸ ನಂಟು | Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಇದೇ ಫೆಬ್ರವರಿ 23 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಶಿವಣ್ಣ, ವಸಿಷ್ಠ ಸಿಂಹ, ಧನಂಜಯ, ಮಾನ್ವಿತಾ ಹರೀಶ್, ಭಾವನಾ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ 'ಟಗರು' ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಚಿತ್ರದ ಬಗ್ಗೆ ಇಷ್ಟೆಲ್ಲಾ ಕುತೂಹಲ ಹುಟ್ಟಲು ಕಾರಣ ನಿರ್ದೇಶಕ ಸೂರಿ.

ಕೊನೆಗೂ 'ಟಗರು' ಬರೋ ದಿನ ಮತ್ತು ಟೈಂ ನಿಗದಿಯಾಯ್ತು

ಹೌದು, ಪಕ್ಕಾ ಸೂರಿ ಸ್ಟೈಲ್ ಸಿನಿಮಾ ಇದು. ಲಾಂಗ್, ಮಚ್ಚು, ರಕ್ತಚರಿತ್ರೆ ಸೃಷ್ಟಿಸೋ ಕಥಾವಸ್ತು. ಇನ್ನು ಬಿಡುಗಡೆಯಾಗದ ಈ ಚಿತ್ರಕ್ಕೂ ಹಾಗೂ ದುನಿಯಾ ಸೂರಿ ನಿರ್ದೇಶನದ ಮೊದಲ ಚಿತ್ರ ಸಿನಿಮಾ 'ದುನಿಯಾ'ಗೂ ಹೊಸ ನಂಟು ಬೆಳೆದಿದೆ. ಏನದು ಎಂದು ತಿಳಿದುಕೊಳ್ಳುವ ಕುತೂಹಲಕ್ಕೆ ಉತ್ತರ ಇಲ್ಲಿದೆ. ಮುಂದೆ ಓದಿ....

'ದುನಿಯಾ' ಹಾದಿಯಲ್ಲಿ 'ಟಗರು'

ಸೂರಿ ನಿರ್ದೇಶನದ ಚೊಚ್ಚಲ ಸಿನಿಮಾ 'ದುನಿಯಾ' ಬಿಡುಗಡೆಯಾಗಿದ್ದ ದಿನವೇ ಈಗ ಶಿವರಾಜ್ ಕುಮಾರ್ ಅಭಿನಯಿಸಿರುವ 'ಟಗರು' ಸಿನಿಮಾ ರಿಲೀಸ್ ಆಗುತ್ತಿದೆ. ಇದೊಂದು ರೀತಿಯಲ್ಲಿ ನಿರ್ದೇಶನ ಸೂರಿಗೆ ವಿಶೇಷವೆನಿಸಿದೆ.

1st ಡೇ 1st ಶೋ 'ಟಗರು' ನೋಡೊಕ್ಕೆ ಬರ್ತಾರೆ ಸೌತ್ ಇಂಡಿಯಾದ ಸ್ಟಾರ್ ಡೈರೆಕ್ಟರ್!

ನಿರ್ದೇಶಕ ಸೂರಿ, ದುನಿಯಾ ಸೂರಿ ಆಗಿದ್ದು

'ದುನಿಯಾ' ಚಿತ್ರದ ಮೂಲಕವೇ ಸೂರಿ ನಿರ್ದೇಶಕರಾಗಿದ್ದು. ಅಲ್ಲಿಯವರೆಗೂ ಬರಿ ಸೂರಿ ಆಗಿದ್ದ ನಿರ್ದೇಶಕ, 'ದುನಿಯಾ ಸೂರಿ' ಎಂಬ ಪ್ರಖ್ಯಾತಿ ಗಳಿಸಿಕೊಂಡರು. ನಂತರ 'ಜಂಗ್ಲಿ', 'ಜಾಕಿ', 'ಕಡ್ಡಿಪುಡಿ', 'ಅಣ್ಣಾಬಾಂಡ್', 'ಕೆಂಡಸಂಪಿಗೆ' ಅಂತಹ ಸಿನಿಮಾಗಳನ್ನ ಮಾಡಿ ಸುಕ್ಕಾ ಸೂರಿ ಎನಿಸಿಕೊಂಡರು. ಈಗ 'ಟಗರು' ಚಿತ್ರ ಕೂಡ ಬಹುತೇಕ ಅದೇ ಮಾದರಿಯಲ್ಲಿದೆ.

11 ವರ್ಷದ ದುನಿಯಾ

ವಿಜಯ್ ನಾಯಕನಾಗಿ ಅಭಿನಯಿಸಿದ ಚೊಚ್ಚಲ ಸಿನಿಮಾ 'ದುನಿಯಾ' ಬಿಡುಗಡೆಯಾಗಿ ಈ ಫೆಬ್ರವರಿ 23ಕ್ಕೆ 11 ವರ್ಷ ಆಗಲಿದೆ. ದುನಿಯಾ ಆಗಿನ ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಗೆ ಕಾರಣವಾಗಿತ್ತು. ದುನಿಯಾ ಬಂದ ಮೇಲೆ ಅದೇ ಮಾದರಿಯ ಚಿತ್ರಗಳು ಆರಂಭವಾದವು.

'ಬಲುಮ' ಹಾಡಿಗೆ ಬಿಂದಾಸ್ ಹೆಜ್ಜೆ ಹಾಕಿದ ನಟಿ ಭಾವನಾ ರಾವ್

ಇತಿಹಾಸ ಮರುಕಳಿಸುತ್ತಾ

'ದುನಿಯಾ' ಚಿತ್ರ ಬಿಡುಗಡೆಯಾಗಿದ್ದ ದಿನವೇ ರಿಲೀಸ್ ಆಗುತ್ತಿರುವ ಟಗರು ಸಿನಿಮಾ, ಸ್ಯಾಂಡಲ್ ವುಡ್ ನಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಾ ಎಂಬ ಕುತೂಹಲ ಅಭಿಮಾನಿಗಳದ್ದು. ಟಗರು ಹವಾ ನೋಡ್ತಿದ್ದರೇ, ಕನ್ನಡದ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುವುದು ಪಕ್ಕಾ ಎನ್ನಲಾಗಿದೆ.

English summary
Suri directed and shiva rajkumar starrer Tagaru movie will releasing on this February 23. But, Suri's first Directorial movie Duniya was released on February 23, 2007.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada