»   » 'ಗಡ್ಡಪ್ಪ-ಸೆಂಚುರಿಗೌಡ'ರ ಹೊಸ ಚಿತ್ರದಲ್ಲೂ 'ಮಸಾಲೆ ಮಾತು'ಗಳ ಅಬ್ಬರ

'ಗಡ್ಡಪ್ಪ-ಸೆಂಚುರಿಗೌಡ'ರ ಹೊಸ ಚಿತ್ರದಲ್ಲೂ 'ಮಸಾಲೆ ಮಾತು'ಗಳ ಅಬ್ಬರ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ 'ತಿಥಿ' ಖ್ಯಾತಿಯ ಗಡ್ಡಪ್ಪ ಹಾಗೂ ಸೆಂಚುರಿ ಗೌಡರ ಹವಾ ಸಖತ್ ಜೋರಾಗಿದೆ. ಯಾವುದೇ ದೊಡ್ಡ ಸ್ಟಾರ್ ಗಳಿಗೂ ಕಮ್ಮಿಯಿಲ್ಲ ಎಂಬಂತೆ ಇವರಿಬ್ಬರ ದರ್ಬಾರ್ ನಡೆಯುತ್ತಿದೆ.

'ತಿಥಿ' ಸಿನಿಮಾದ ನಂತರ 'ತರ್ಲೆ ವಿಲೇಜ್' ಚಿತ್ರದ ಮೂಲಕ ಗಡ್ಡಪ್ಪ ಮತ್ತು ಸೆಂಚುರಿ ಗೌಡ ಮತ್ತೆ ಕಮಾಲ್ ಮಾಡಿದ್ದರು. ಇನ್ನೂ ಚಿತ್ರಮಂದಿರಗಳಲ್ಲಿ 'ತರ್ಲೆ ವಿಲೇಜ್' ಪ್ರದರ್ಶನವಾಗುತ್ತಿರುವಾಗಲೇ, ಗಡ್ಡಪ್ಪ-ಸೆಂಚುರಿಗೌಡರ ಮತ್ತೊಂದು ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.['ತಿಥಿ' ನಾಯಕರ ಕಾಲ್ ಶೀಟ್ ಕಷ್ಟ: 'ಏನ್ ನಿನ್ ಪ್ರಾಬ್ಲಮ್ಮು']

'ತರ್ಲೆ ವಿಲೇಜ್'ಯಿಂದ ಬಾರಿ ಸುದ್ದಿಯಾಗಿದ್ದ ಓಲ್ಡೇಸ್ಟ್ ಸ್ಟಾರ್ ಗಳು ಈಗ 'ಏನ್ ನಿನ್ ಪ್ರಾಬ್ಲಂ' ಅಂತ ಮತ್ತೆ ಬರ್ತಿದ್ದಾರೆ. ವಿಶೇಷ ಏನಪ್ಪಾ ಅಂದ್ರೆ, ಈ ಚಿತ್ರದಲ್ಲೂ ಸೆನ್ಸಾರ್ ಲೆಸ್ ಸಂಭಾಷಣೆಯೇ ಪ್ರಮುಖ ಆಕರ್ಷಣೆ.

'ಏನ್ ನಿನ್ ಪ್ರಾಬ್ಲಮ್ಮು' ಟ್ರೈಲರ್ ರಿಲೀಸ್!

ಗಡ್ಡಪ್ಪ, ಸೆಂಚುರಿಗೌಡ, ಅಭಿಷೇಕ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಏನ್ ನಿನ್ ಪ್ರಾಬ್ಲಮ್ಮು' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಕ್ರೇಜ್ ಹೆಚ್ಚಿಸಿದೆ. ಈಗಾಗಲೇ 'ತಿಥಿ' ಮತ್ತು 'ತರ್ಲೆ ವಿಲೇಜ್' ಚಿತ್ರಗಳಲ್ಲಿ ಕಿಕ್ ಕೊಟ್ಟಿದ್ದ ತ್ರಿಮೂರ್ತಿಗಳು ಮತ್ತೊಂದು ಎಂಟರ್ ಟೈನ್ಮೆಂಟ್ ಚಿತ್ರದ ಮೂಲಕ ಪರದೆ ಮೇಲೆ ಬರ್ತಿದ್ದಾರೆ.[ವಿಮರ್ಶೆ: 'ತರ್ಲೆ ವಿಲೇಜ್' ಅಲ್ಲ, 'ಪೋಲಿ' ವಿಲೇಜ್! ]

ಗಡ್ಡಪ್ಪ-ಸೆಂಚುರಿಗೌಡ ಜುಗಲ್ ಬಂದಿ

ಗಡ್ಡಪ್ಪ ಮತ್ತು ಸೆಂಚುರಿಗೌಡ ಕನ್ನಡದ ಯಶಸ್ವಿ ಜೋಡಿ ಕಲಾವಿದರು ಅಂದ್ರೆ ತಪ್ಪಾಗಲಾರದು. 'ತಿಥಿ' ಮತ್ತು 'ತರ್ಲೆ ವಿಲೇಜ್' ಎರಡು ಚಿತ್ರಗಳಲ್ಲಿ ಇವರಿಬ್ಬರ ಜುಗಲ್ ಬಂದಿ ವರ್ಕೌಟ್ ಆಗಿತ್ತು. ಈಗ ಮೂರನೇ ಬಾರಿ ಗಡ್ಡಪ್ಪ-ಸೆಂಚುರಿಗೌಡ ಒಂದಾಗಿದ್ದು, ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದ್ದಾರೆ.

ಲವರ್ ಬಾಯ್ 'ಅಭಿ'

ತಮ್ಮ ನೈಜ ಅಭಿನಯದ ಮೂಲಕವೇ ಗಾಂಧಿನಗರದ ಗಮನ ಸೆಳೆದಿರುವ 'ತಿಥಿ' ಖ್ಯಾತಿ ಅಭಿ, 'ಏನ್ ನಿನ್ ಪ್ರಾಬ್ಲಮ್ಮು' ಚಿತ್ರದಲ್ಲೂ ಅದೇ ಇಮೇಜ್ ಮುಂದುವರೆಸಿದ್ದಾರೆ. ಇವರಿಗೆ ನಂದಿನಿ ಎಂಬ ನವ ನಾಯಕಿ ಜೊತೆಯಾಗಿದ್ದು, ಇವರಿಬ್ಬರ 'ಮಾತುಕತೆ' ಜೋರಾಗಿದೆ.

'ತ್ರಿಬಲ್' ಸ್ಟಾರ್ ಗಳ 'ಪ್ರಾಬ್ಲಮ್ಮು'

'ಗಡ್ಡಪ್ಪ'ನ ಗಂಭೀರ ನಟನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿರುವುದರಿಂದ, ಈ ಚಿತ್ರದಲ್ಲಿ ಗಡ್ಡಪ್ಪನಿಗೆ 'ಇಂಟರ್ ನ್ಯಾಷನಲ್ ಸ್ಟಾರ್' ಎಂದು ಬಿರುದು ನೀಡಿದ್ದಾರೆ. ಸೆನ್ಸಾರ್ ಲೆಸ್ ಡೈಲಾಗ್ ಗಳು ಮೂಲಕ ಪಡ್ಡೆ ಹುಡುಗರ ಗಾಡ್ ಫಾದರ್ ಆಗಿರುವ ಸೆಂಚುರಿ ಗೌಡರಿಗೆ 'ನಂಬರ್ ವನ್ ಸ್ಟಾರ್' ಎಂದು ಟೈಟಲ್ ನೀಡಲಾಗಿದೆ. ಇನ್ನೂ ಮೊದಲ ಚಿತ್ರದಿಂದಲೂ ಲವರ್ ಬಾಯ್ ಇಮೇಜ್ ಕಾಪಾಡಿಕೊಂಡು ಬಂದಿರುವ ಅಭಿ 'ನ್ಯಾಚುರಲ್ ಸ್ಟಾರ್' ಎನಿಸಿಕೊಂಡಿದ್ದಾರೆ.

ಡಬ್ಬಲ್ ಮೀನಿಂಗ್ ಡೈಲಾಗ್ ಗಳ ಅಬ್ಬರ

ನಿರೀಕ್ಷೆಯಂತೆ 'ಏನ್ ನಿನ್ ಪ್ರಾಬ್ಲಂ' ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಡೈಲಾಗ್ ಗಳೇ ತುಂಬಿಕೊಂಡಿವೆ. ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ನಲ್ಲೂ ಇದು ಸಾಬೀತಾಗಿದೆ. ಗಡ್ಡಪ್ಪ, ಸೆಂಚುರಿ ಗೌಡ, ಅಭಿ ಈ ಮೂವರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಡಬ್ಬಲ್ ಮೀನಿಂಗ್ ಮಾತುಗಳು ಪಡ್ಡೆ ಹುಡುಗರಿಗೆ ಕಿಕ್ ನೀಡಲಿವೆ.

ಕಥೆ-ಚಿತ್ರಕಥೆ-ನಿರ್ದೇಶನ ಗಾಲಿ ಲಕ್ಕಿ

ಅಂದ್ಹಾಗೆ, ಈ ಚಿತ್ರವನ್ನ ನಿರ್ದೇಶನ ಮಾಡುತ್ತಿರುವುದು ಗಾಲಿ ಲಕ್ಕಿ. ಈ ಹಿಂದೆ 'ಗಾಲಿ', 'ರೈನ್ ಕೋಟ್', 'ಮಾತುಕತೆ' ಅಂತಹ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಲಕ್ಕಿ ಈಗ ನ್ಯಾಚುರಲ್ ಕಲಾವಿರೊಂದಿಗೆ ನ್ಯಾಚುರಲ್ ಆಗಿ ಸಿನಿಮಾ ಮಾಡಿದ್ದಾರೆ. ಸದ್ಯ, ಟ್ರೈಲರ್ ಮೂಲಕ ಇಡೀ ಗಾಂಧಿನಗರವನ್ನೇ ಗಮನ ಸೆಳೆದಿರುವ 'ಏನ್ ನಿನ್ ಪ್ರಾಬ್ಲಮ್ಮು' ಬೆಳ್ಳಿತೆರೆ ಮೇಲೆ ಯಾವ ತರ ಮೋಡಿ ಮಾಡಲಿದೆ ಅಂತ ನೋಡಬೇಕಿದೆ.

English summary
'Thithi' fame Century Gowda and Gaddappa Acted 'Yen Nin Problemu' Movie trailer Release. the Movie Directed by gali lucky

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada