»   » 'ಎರಡನೇ ಸಲ'ದ 'ಆ' ಮಾತುಗಳಲ್ಲಿ 'ಗುರು'ಗಳ ದರ್ಶನ!

'ಎರಡನೇ ಸಲ'ದ 'ಆ' ಮಾತುಗಳಲ್ಲಿ 'ಗುರು'ಗಳ ದರ್ಶನ!

Posted By:
Subscribe to Filmibeat Kannada

ಡಾಕ್ಟರ್: ''ಸೈಕಿಯಾಟ್ರಿಸ್ ಹತ್ರ, ಅಡ್ವೋಕೇಟ್ ಹತ್ರ, ಡಾಕ್ಟರ್ ಹತ್ರ, ಬಿಗ್ ಬಾಸ್ ಹತ್ರ ಏನೂ ಮುಚ್ಚಿಡಬಾರದು......ಸೆಕ್ಸ್ ಬಗ್ಗೆನಾ ಪರವಾಗಿಲ್ಲ ಹೇಳಿ.....?
ಹುಡುಗಿ: ನಾನು ಅದನ್ನ 'ಕಾಫಿ' ಅಂತ ಹೇಳ್ಲಾ...?
ಕಾಲೇಜಿನಲ್ಲಿ ಇರುವಾಗ, ನಾನು ಯಾವಗಲೂ ಕಾಫಿ ಕುಡಿತಿದ್ದೆ. ನನಗೆ ಗೊತ್ತಿರುವವರೇ ಆವಾಗವಾಗ ಕುಡಿಸುತ್ತಿದ್ದರು......
ಡಾಕ್ಟರ್: ಮತ್ತೇನ್ ಪ್ರಾಬ್ಲಂ...?
ಹುಡುಗಿ: ನಮ್ಮ ಯಜಮಾನ್ರಿಗೆ ಕಾಫಿ ಅಂದ್ರೆನೇ ಆಗಲ್ಲ''

''ಪ್ರೇಮ ಅಂದ್ಮೇಲೆ 'ತು' ಮತ್ತು 'ತು' ಸೇರುತ್ತೆರೀ....ಅಂದ್ರೆ ತುಟಿ ಮತ್ತು ತುಟಿ ಅಂತ''

ಇಂತಹ ಡಬಲ್ ಮೀನಿಂಗ್ ಡೈಲಾಗ್ ಗಳು ಕೇಳುಗರಿಗೆ ಸ್ವಲ್ಪ ಮುಜುಗರ ಉಂಟು ಮಾಡಿದ್ರು, ಪಡ್ಡೆ ಹೈಕ್ಳು ಮಾತ್ರ ಸಖತ್ ಎಂಜಾಯ್ ಮಾಡ್ತಿದ್ದಾರೆ. ಆದ್ರೆ, ಸಂಪ್ರದಾಯಸ್ಥ ಪ್ರೇಕ್ಷಕರು ಮಾತ್ರ ಈ ರೀತಿಯ ಸಂಭಾಷಣೆಯನ್ನ ಒಪ್ಪಿಕೊಳ್ಳುವುದಿಲ್ಲ ಬಿಡಿ.['ಎರಡನೇ ಸಲ' ಟ್ರೈಲರ್ ನೋಡಿದ್ರೆ, ಇನ್ಮುಂದೆ 'ಕಾಫಿ'ನೇ ಕುಡಿಯಲ್ಲಾ! ]

Kannada Movie Eradane Sala trailer

ಸದ್ಯ, ಇಂತಹ ಡೈಲಾಗ್ ಗಳಿಂದ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡ್ತಿರೋ ಚಿತ್ರ 'ಎರಡನೇ ಸಲ'. ಗುರುಪ್ರಸಾದ್ ನಿರ್ದೇಶನ ಹಾಗೂ ಧನಂಜಯ್ ನಾಯಕನಾಗಿ ಅಭಿನಯಿಸಿರುವ ಚಿತ್ರ. ಇತ್ತೀಚೆಗಷ್ಟೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಬರೀ ಡೈಲಾಗ್ ಗಳಿಂದನೇ ಹೆಚ್ಚು ಸುದ್ದಿಯಾಗಿದೆ.

Kannada Movie Eradane Sala trailer

''ನಾವು ಹೀರೋಗಳು ಯಾವಾಗ ಬರ್ತಿವಿ, ಹೇಂಗೆ ಬರ್ತಿವಿ, ಯಾವ ಡ್ರೆಸ್ ನಲ್ಲಿ ಬರ್ತಿವಿ ಅಂತ ನಮ್ಗೆ ಗೊತ್ತಿರಲ್ಲ. ಇದು ಧನಂಜಯ್ ಕೋಟೆ ಕಣೋ''

''ವೃತ್ತ ಬರೆದಾಗಿದೆ. ವೃತ್ತದಲ್ಲಿ ಇರೋದೆಲ್ಲ ನಿಂದೆ. ಟೇಕ್ ಯುವರ್ ಓನ್ ಟೈಮ್ ಬಾಯ್''

ಇನ್ನೂ ಹೀರೋ ಹೇಳುವ ಇಂತಹ ಡೈಲಾಗ್ ಗಳು ಕೂಡ ಸ್ವಲ್ಪ ಫನ್ನಿ ಎನಿಸಿವೆ. ಈಗಾಗಲೇ ಸಿನಿಮಾಗಳಲ್ಲಿ ಬಂದು ಹೋಗಿರುವ ಮಾಸ್ ಡೈಲಾಗ್ ಗೆ, ಸ್ವಲ್ಪ ರಿಮಿಕ್ಸ್ ಮಾಡಿ ಕಾಮಿಡಿಯಾಗಿ ಬಳಸಲಾಗಿದೆ.

''ಅವನಯ್ಯನ್ ಇಕ್ಕು ಮಗ, ಇವನಯ್ಯನ್ ಇಕ್ಕು ಮಗ, ಮುಖ ಮೂತಿ ನೋಡಬೇಡ. ಚಚ್ಚು ಮಗ,,,,ಬಾರ್ಸೂ ಮಗ.....'' ಎಂಬ ಪದಗಳನ್ನ ಹಾಡಿನಲ್ಲಿ ಬಳಸಲಾಗಿದೆ.

Kannada Movie Eradane Sala trailer

ಅಂದ್ಹಾಗೆ, ಈ ಚಿತ್ರಕ್ಕೆ ಸಂಭಾಷಣೆ ಬರೆದಿರುವುದು ಬೇರೆ ಯಾರು ಅಲ್ಲ. ಚಿತ್ರದ ನಿರ್ದೇಶಕ ಗುರುಪ್ರಸಾದ್ ಅವರೇ, ಗುರು ಪ್ರಸಾದ್ ಅವರ ಸಂಭಾಷಣೆ ಅಂದ್ರೆ ಕೇಳಬೇಕಾ. ಈ ಹಿಂದೆ 'ಮಠ', 'ಎದ್ದೇಳು ಮಂಜುನಾಥ' ಚಿತ್ರಗಳಲ್ಲೂ ಇದೇ ಶೈಲಿಯ ಸಂಭಾಷಣೆಯನ್ನ ಕೇಳಿದ್ದೀರಿ. ಈಗ 'ಎರಡನೇ ಸಲ' ಚಿತ್ರದಲ್ಲೂ ಗುರುಪ್ರಸಾದ್ ಅವರು ಇದು ನನ್ನ ಸಿನಿಮಾ ಅಂತ ಈ ರೀತಿ ಹೇಳಿದ್ದಾರೆ ಅನ್ಸುತ್ತೆ.

ಸದ್ಯ ಗಾಂಧಿನಗರದಲ್ಲಿ ಯಾರ ಬಾಯಲ್ಲಿ ನೋಡಿದ್ರೂ 'ಕಾಫಿ' ಎಂಬ ಪದ ಸರ್ವೇ ಸಾಮಾನ್ಯವಾಗಿದೆ. 'ಎರಡನೇ ಸಲ' ಚಿತ್ರದ ಎಫೆಕ್ಟ್ ಗೆ 'ಕಾಫಿ'ಗೆ ಹೊಸ ಅರ್ಥವೇ ಹುಟ್ಟಿಕೊಂಡಿದೆ. ಅದೇನೇ ಇರಲಿ, ಇದು ಬರಿ ಸ್ಯಾಂಪಲ್ ಮಾತ್ರ. ಖಾರ, ಖಡಕ್, ಪಂಚಿಂಗ್ ಅಂತಹ ಡೈಲಾಗ್ ಗಳು ಇನ್ನೂ ಸಿನಿಮಾದಲ್ಲಿ ನಿರೀಕ್ಷಿಸಿಬಹು.

English summary
Kannada Director Guruprasad Directed ''Eradane Sala'' Movie trailer released: Watch the video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada