»   » 'ಪ್ಲಾಸ್ಟಿಕ್ ಬೊಂಬೆ', 'ಸೊಕ್ಕಿನ ಹುಡುಗಿ' ಶ್ರುತಿ ಹಾಸನ್ ವಿರುದ್ಧ ಕನ್ನಡಿಗರು ಸಿಡಿಮಿಡಿ

'ಪ್ಲಾಸ್ಟಿಕ್ ಬೊಂಬೆ', 'ಸೊಕ್ಕಿನ ಹುಡುಗಿ' ಶ್ರುತಿ ಹಾಸನ್ ವಿರುದ್ಧ ಕನ್ನಡಿಗರು ಸಿಡಿಮಿಡಿ

Posted By:
Subscribe to Filmibeat Kannada

'ಸಕಲಕಲಾವಲ್ಲಭ' ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ವಿರುದ್ಧ ಕನ್ನಡಿಗರು ಸಿಡಿಮಿಡಿಗೊಂಡಿದ್ದಾರೆ. 'ಕನ್ನಡ ಚಿತ್ರಗಳಲ್ಲಿ ನಟಿಸುವ ಯೋಚನೆ ಸದ್ಯಕ್ಕಂತೂ ಇಲ್ಲವೇ ಇಲ್ಲ' ಎಂದು ನಟಿ ಶ್ರುತಿ ಹಾಸನ್ ಮಾಡಿರುವ ಒಂದು ಟ್ವೀಟ್ ನಿಂದ ಕನ್ನಡಿಗರು ಕೆರಳಿದ್ದಾರೆ.

ಅಷ್ಟಕ್ಕೂ ಆಗಿದ್ದೇನು ಅಂದ್ರೆ, ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ 'ಪೊಗರು' ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ನಾಯಕಿ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೇಳಿಬಂದಿತ್ತು. ಆ ಮಾತು ಶ್ರುತಿ ಹಾಸನ್ ಕಿವಿಗೂ ಬಿದ್ಮೇಲೆ, ''ಸದ್ಯಕ್ಕೆ ಕನ್ನಡದ ಯಾವುದೇ ಸಿನಿಮಾದಲ್ಲಿ ನಟಿಸುವ ಪ್ಲಾನ್ ನನಗಿಲ್ಲ ಎಂಬುದನ್ನ ಸ್ಪಷ್ಟ ಪಡಿಸುತ್ತಿದ್ದೇನೆ. ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ನಾನು ಯಾರೊಂದಿಗೂ ಮಾತುಕತೆ ಕೂಡ ನಡೆಸಿಲ್ಲ. ಎಲ್ಲವೂ ರೂಮರ್ ಅಷ್ಟೇ'' ಎಂದು ಟ್ವೀಟ್ ಮಾಡಿದರು.

ಅಂತೆ-ಕಂತೆಯೆಲ್ಲ ಸುಳ್ಳಾಯ್ತಲ್ಲ: ಕನ್ನಡಕ್ಕೆ ಕಮಲ್ ಪುತ್ರಿ ಶ್ರುತಿ ಬರ್ತಿಲ್ಲ.!

ಶ್ರುತಿ ಹಾಸನ್ ರವರ ಈ ಟ್ವೀಟ್ ನಿಂದಾಗಿ ಇದೀಗ ಕನ್ನಡಿಗರ ರೋಷಾಗ್ನಿ ಹೊತ್ತಿ ಉರಿಯುತ್ತಿದೆ. ''ಭರ್ಜರಿ' ಹುಡುಗ ಧ್ರುವ ಸರ್ಜಾಗೆ 'ಸರ್ಜರಿ' ಹುಡುಗಿಯನ್ನು ಕರೆತರುವ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿದೆ'' ಎಂದೆಲ್ಲ ಟ್ವೀಟಿಗರು ನಟಿ ಶ್ರುತಿ ಹಾಸನ್ ವಿರುದ್ಧ ಕುಹಕವಾಡುತ್ತಿದ್ದಾರೆ. ಮುಂದೆ ಓದಿರಿ...

ಸರ್ಜರಿ ಹೀರೋಯಿನ್ ಬೇಕಾಗಿಲ್ಲ.!

ನಟಿ ಶ್ರುತಿ ಹಾಸನ್ ಮಾಡಿದ ಟ್ವೀಟ್ ನಿಂದ ಬೇಸರಗೊಂಡ ಕನ್ನಡ ಸಿನಿಪ್ರಿಯರೊಬ್ಬರು ''ನಮಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವ ಹೀರೋಯಿನ್ ಗಳು ಬೇಡ. ನಿಮ್ಮ ತಂದೆ (ಕಮಲ್ ಹಾಸನ್) ಮೊದಲ ಹೆಜ್ಜೆ ಇಟ್ಟಿದ್ದು ಎಲ್ಲಿ ಎಂಬುದನ್ನ ಮೊದಲ ನೆನಪಿಸಿಕೊಳ್ಳಿ'' ಅಂತ ಟ್ವೀಟ್ ಮಾಡಿದ್ದಾರೆ.

ಧ್ರುವ ಸರ್ಜಾ ಚಿತ್ರಕ್ಕೆ ಶ್ರುತಿ ಹಾಸನ್ ಜೋಡಿಯಂತೆ.!

ಆಮಿ ಜಾಕ್ಸನ್ ಮುಂದೆ ಏನೇನೂ ಅಲ್ಲ.!

''ಆಮಿ ಜಾಕ್ಸನ್ ಮುಂದೆ ನೀವು ಏನೇನೂ ಅಲ್ಲ. ಆಮಿ ಜಾಕ್ಸನ್ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಪವರ್ ಏನು ಅಂತ ತಿಳಿದುಕೊಳ್ಳಲು ನಿಮ್ಮ ತಂದೆಯನ್ನ ಕೇಳಿ'' ಎನ್ನುತ್ತ ಕನ್ನಡ ಸಿನಿಮಾ ಪ್ರೇಮಿಗಳು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.

ನಿಜಕ್ಕೂ ಧ್ರುವ ಸರ್ಜಾ ಹಾಗೂ ವಿಕ್ರಮ್ ಜೊತೆ ನಟಿಸುತ್ತಾರಾ ಕಮಲ್ ಹಾಸನ್ ಪುತ್ರಿಯರು?

ಕರ್ನಾಟಕಕ್ಕೆ ಬರಲು ಪುಣ್ಯ ಮಾಡಿರಬೇಕು

''ಕನ್ನಡದ ಶಕ್ತಿ ಏನು ಅಂತ ಮೊದಲು ನಿಮ್ಮ ತಂದೆ ಹತ್ತಿರ ಕೇಳಿ ನೋಡಿ. ಕರ್ನಾಟಕಕ್ಕೆ ಬರಲು ನೀವು ಪುಣ್ಯ ಮಾಡಿರಬೇಕು'' ಎಂದು ಹೇಳುತ್ತಾ ಕನ್ನಡಾಭಿಮಾನಿಗಳು ಶ್ರುತಿ ಹಾಸನ್ ಗೆ ಬಿಸಿ ಮುಟ್ಟಿಸಿದ್ದಾರೆ.

ಸೊಕ್ಕು ನೋಡೋಕ್ಕಾಗಲ್ಲ.!

''ನಿಮ್ಮ ಸೊಕ್ಕು ನೋಡೋಕ್ಕಾಗಲ್ಲ. ಕನ್ನಡಿಗರಿಗೆ ನೀವು ಬೇಕಾಗಿಲ್ಲ'' ಎಂಬ ಟ್ವೀಟ್ ಗಳೇ ಹೆಚ್ಚಾಗಿವೆ.

ಪ್ಲಾಸ್ಟಿಕ್ ಬ್ಯೂಟಿ ಬೇಡವೇ ಬೇಡ

''ಕರ್ನಾಟಕದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲ್ಲ. ಪ್ಲಾಸ್ಟಿಕ್ ಸರ್ಜರಿ ನಟಿ ಬೇಡ'' ಎಂದು ಟ್ವೀಟಿಗರು ಕುಹಕವಾಡಿದ್ದಾರೆ.

ಡ್ಯೂಪ್ಲಿಕೇಟ್ ಬೇಕಾಗಿಲ್ಲ

''ಕನ್ನಡ ಚಿತ್ರರಂಗದಲ್ಲಿ ಒರಿಜಿನಲ್ ಬ್ಯೂಟಿಗಳು ಬೇಕಾದಷ್ಟು ಮಂದಿ ಇದ್ದಾರೆ. ಡ್ಯೂಪ್ಲಿಕೇಟ್ ಬ್ಯೂಟಿಗಳ ಅವಶ್ಯಕತೆ ಇಲ್ಲ'' ಎಂಬುದು ಕೆಲವರ ಅಭಿಪ್ರಾಯ.

ಕಾರಣ ಏನು.?

ಶ್ರುತಿ ಹಾಸನ್ ವಿರುದ್ಧ ಕೋಪಗೊಂಡ ಕನ್ನಡ ಸಿನಿ ಪ್ರೇಮಿಯೊಬ್ಬರು ಮಾಡಿರುವ ಈ ಟ್ವೀಟ್ ನೋಡಿ...

ಕರ್ನಾಟಕದ ಪ್ರತಿಭೆಗಳಿಗೆ ಅವಕಾಶ ಕೊಡಿ

''ಕರ್ನಾಟಕ ಒಂದು ಪ್ರತಿಭೆಗಳ ಸಾಗರ ಇದ್ದ ಹಾಗೆ. ಕನ್ನಡ ನಿರ್ದೇಶಕರೇ, ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ'' ಎಂದು ಕೆಲವರು ಮನವಿ ಮಾಡಿದ್ದಾರೆ.

ಮೇಕಪ್ ಇಲ್ಲದೆ ಹೇಗೆ ಕಾಣ್ತೀರಾ ಅನ್ನೋದು ಗೊತ್ತಿದೆ.!

''ಮೇಕಪ್ ಇಲ್ಲದೇ ನೀವು ಹೇಗೆ ಕಾಣ್ತೀರಾ ಅಂತ ನಮಗೆ ಗೊತ್ತು. ನಮ್ಮ ಕನ್ನಡ ನಿರ್ಮಾಪಕರಿಗೆ ಸರ್ಜರಿ ಮುಖ ಕರೆತರುವುದನ್ನು ಬಿಟ್ಟು ಬೇರೆ ಪ್ಲಾನ್ ಇಲ್ಲ'' ಎಂದು ಸಿನಿ ಪ್ರೇಮಿಯೊಬ್ಬರು ಟ್ವೀಟ್ ಮಾಡಿದ್ದಾರೆ.

English summary
Kannada Movie Lovers have taken their Twitter account to express their displeasure against Actress Shruthi Haasan, who has no plan of doing Kannada Films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada