For Quick Alerts
  ALLOW NOTIFICATIONS  
  For Daily Alerts

  ಈ 'ಫ್ಲಾಪ್' ಸಿನಿಮಾದ ಹೀರೋ ಯಾರು ಗೊತ್ತಾ?

  By ಜೀವನರಸಿಕ
  |

  ಈ ಸಿನಿಮಾದಲ್ಲಿ ಹೀರೋಗಳೇ ಇಲ್ಲ. ಹಾಗಿದ್ದರೆ ಇನ್ಯಾರಿದ್ದಾರೆ. ಕೇವಲ ಮೂವರು ವಿಲನ್ ಗಳಿದ್ದಾರೆ. ವಿಲನ್ ಗಳೇ ಇದ್ದಮೇಲೆ ಸಿನಿಮಾ ಹಿಟ್ಟಾಗೋದುಂಟಾ, ಸಿನಿಮಾ ಫ್ಲಾಪ್. ಇದು ರಿಲೀಸ್ ಆಗಿ ಫ್ಲಾಪ್ ಆಗಿರೋ ಸಿನಿಮಾ ಕಥೆಯಲ್ಲ. ಈಗಷ್ಟೇ ಶೂಟಿಂಗ್ ಗೆ ರೆಡಿಯಾಗಿರೋ ಸಿನಿಮಾ.

  ಈ ಸಿನಿಮಾದ ಹೆಸರೇ 'ಫ್ಲಾಪ್'. ಇತ್ತೀಚೆಗೆ 'ಫ್ಲಾಪ್ ಡೈರೆಕ್ಟರ್' ಎಂಬ ಸಿನಿಮಾ ಸೆಟ್ಟೇರಿದ್ದನ್ನು ಓದಿರುತ್ತೀರಿ. ಈಗ 'ಫ್ಲಾಪ್' ಅನ್ನೋ ಸಿನಿಮಾ ಬರ್ತಿರೋ ಸುದ್ದಿ ಇದು. ಇದು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಗೆಳೆಯರ ಚಿತ್ರ. ಸಿಂಪಲ್ ಟೀಂ ಅಂದ್ರೆ ಏನಾದ್ರೂ ಒಂದು ಡಿಫ್ ರೆಂಟಾಗಿ ಮಾಡುತ್ತೆ. [ಫ್ಲಾಪ್ ಡೈರೆಕ್ಟರ್' ಕಣ್ಣೀರ ಕಥೆ ಸೋತಿದ್ದೀನಿ ಸತ್ತಿಲ್ಲ]

  ಅದಕ್ಕೇನೇ ಸಿನಿಮಾದ ಟೈಟಲ್ಲನ್ನೇ 'ಫ್ಲಾಪ್' ಅಂತ ಇಟ್ಟಿದೆ. ಇಲ್ಲಿ ವಿಜೇತ್, ಸಂಜು, ಅಖಿಲ್ ಅನ್ನೋ ಹೊಸ ಹುಡುಗರೇ ಮೂವರು ವಿಲನ್ ಗಳು. ಚಿತ್ರದಲ್ಲಿ ತಬಲಾನಾಣಿ, ಪದ್ಮಜಾರಾವ್ ರಂತಹ ಹಿರಿಯ ಕಲಾವಿದರೂ ಕಾಣಿಸಿಕೊಳ್ಳಲಿದ್ದಾರೆ. ಇದನ್ನ ಡೈರೆಕ್ಟ್ ಮಾಡ್ತಿರೋದು 'ಸಿಂಪಲ್ಲಾಗ ಒಂದ್ ಲವ್ ಸ್ಟೋರಿ' ಚಿತ್ರದ ನಿರ್ದೇಶಕ ಸುನಿ ಗೆಳೆಯ ಕರಣ್ ಕುಮಾರ್.

  ಅಂದಹಾಗೆ ಈ ಚಿತ್ರದಲ್ಲಿ 'ಜಟ್ಟ' ಚಿತ್ರದಲ್ಲಿ ಅಮೋಘ ಅಭಿನಯ ನೀಡಿದ್ದ ಸುಕೃತಾ ವಾಗ್ಲೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ ಎನ್ ಶಾಸ್ತ್ರಿಯವರ ಸಂಗೀತದಲ್ಲಿ ದರ್ಶನ್ ಕನಕ ಅನ್ನುವವರ ಕ್ಯಾಮೆರಾ ಕೈಚಳಕದಲ್ಲಿ ಚಿತ್ರ ಜನವರಿಯಿಂದ ಶೂಟಿಂಗ್ ಶುರುಮಾಡಲಿದೆ.

  ಇಲ್ಲೂ ಕೂಡ ಚಿತ್ರತಂಡದವ್ರೇ ಪ್ರೊಡ್ಯೂಸರ್ ಗಳು. ಇದೂ ಕೂಡ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ತರಹ ಯೂತ್ ಫುಲ್ ಲವ್ ಸ್ಟೋರಿ. ಎಲ್ಲಾ ಡೀಟೈಲ್ಸ್ ಆಯ್ತು. ಹೀರೋ ಯಾರು ಅಂತೀರಾ. ಈ ಸಿನಿಮಾಗೇ ಹೀರೋನೇ ಇಲ್ಲ.

  English summary
  'Simple Agi Ondh Love Story' team back with a youthful love story titled as 'Flop'. In this movie no hero, the story revolves around only on three villains. 'Jatta' fame actress Sukrutha Wagle plays pivotal role in this movie. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X