»   » 'ಗಡ್ಡಪ್ಪನ ಸರ್ಕಲ್'ನಲ್ಲಿ ರೌಡಿಗಳಾದ ಗಡ್ಡಪ್ಪ-ಸೆಂಚುರಿಗೌಡ!

'ಗಡ್ಡಪ್ಪನ ಸರ್ಕಲ್'ನಲ್ಲಿ ರೌಡಿಗಳಾದ ಗಡ್ಡಪ್ಪ-ಸೆಂಚುರಿಗೌಡ!

Posted By:
Subscribe to Filmibeat Kannada

'ತಿಥಿ' ಸ್ಟಾರ್ ಗಡ್ಡಪ್ಪ ಹಾಗೂ ಸೆಂಚುರಿಗೌಡ ಸದ್ಯ ಸ್ಯಾಂಡಲ್ ವುಡ್ ನ 'ಟಾಕ್ ಆಫ್ ದಿ ಟೌನ್' ಆಗಿದ್ದಾರೆ. ಬಿಗ್ ಸ್ಟಾರ್ ಗಳಂತೆ ಬ್ಯುಸಿಯಾಗಿರುವ ಇವರಿಬ್ಬರು ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕಳೆದ ತಿಂಗಳಲ್ಲಷ್ಟೇ ಗಡ್ಡಪ್ಪ-ಸೆಂಚುರಿಗೌಡ ಅಭಿನಯದ 'ತರ್ಲೆ ವಿಲೇಜ್' ಸಿನಿಮಾ ತೆರೆಕಂಡಿತ್ತು. ಈ ಚಿತ್ರದ ಬೆನ್ನಲ್ಲೆ ಗಾಲಿ ಲಕ್ಕಿ ನಿರ್ದೇಶನದ 'ಏನ್ ನಿನ್ ಪ್ರಾಬ್ಲಮ್ಮು' ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಈ ಟ್ರೈಲರ್ ಮೂಲಕ ಗಡ್ಡಪ್ಪ ಹಾಗೂ ಸೆಂಚುರಿಗೌಡ ಗಾಂಧಿನಗರದಲ್ಲಿ ಮತ್ತೆ ಟ್ರೆಂಡ್ ಹುಟ್ಟುಹಾಕಿದ್ದರು.['ತಿಥಿ' ನಾಯಕರ ಕಾಲ್ ಶೀಟ್ ಕಷ್ಟ: 'ಏನ್ ನಿನ್ ಪ್ರಾಬ್ಲಮ್ಮು' ]

ಅಷ್ಟರಲ್ಲಾಗಲೇ ಈಗ ಮತ್ತೊಂದು ಹೊಸ ಚಿತ್ರದ ಟ್ರೈಲರ್ ಮೂಲಕ ಹವಾ ಶುರು ಮಾಡಿದ್ದಾರೆ. ಹೌದು, ಇಷ್ಟು ದಿನ ಹಳ್ಳಿ ಜನರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಗಡ್ಡಪ್ಪ ಮತ್ತು ಸೆಂಚುರಿಗೌಡ ಇದೇ ಮೊದಲ ಬಾರಿಗೆ ಅಂಡರ್ ವರ್ಲ್ಡ್‌ ಡಾನ್ ಗಳಾಗಿ ಮಿಂಚಿದ್ದಾರೆ.

'ಗಡ್ಡಪ್ಪನ ಸರ್ಕಲ್' ಟ್ರೈಲರ್ ರಿಲೀಸ್!

'ತಿಥಿ' ಖ್ಯಾತಿಯ ಗಡ್ಡಪ್ಪ ಹಾಗೂ ಸೆಂಚುರಿ ಗೌಡ ಅಭಿನಯದ 'ಗಡ್ಡಪ್ಪನ ಸರ್ಕಲ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್ ಸೌಂಡ್ ಮಾಡ್ತಿದೆ.['ಗಡ್ಡಪ್ಪ-ಸೆಂಚುರಿಗೌಡ'ರ ಹೊಸ ಚಿತ್ರದಲ್ಲೂ 'ಮಸಾಲೆ ಮಾತು'ಗಳ ಅಬ್ಬರ]

'ಡಾನ್' ಪಾತ್ರದಲ್ಲಿ ಗಡ್ಡಪ್ಪ!

'ಗಡ್ಡಪ್ಪನ ಸರ್ಕಲ್' ಚಿತ್ರದಲ್ಲಿ 'ಗಡ್ಡಪ್ಪ' ಡಾನ್ ಪಾತ್ರವನ್ನ ನಿರ್ವಹಿಸಿದ್ದಾರೆ. ಕೈಯಲ್ಲಿ ಗನ್ ಹಿಡಿದು ಮಾಸ್ ಹೀರೋ ಆಗಿದ್ದಾರೆ.[ಸೆಂಚುರಿಗೌಡ-ಗಡ್ಡಪ್ಪರನ್ನ ಕೆಟ್ಟದಾಗಿ ತೋರಿಸಲಾಗುತ್ತಿದೆ: 'ತಿಥಿ' ಈರೇಗೌಡ ಆಕ್ರೋಶ ]

'ಡಾನ್' ಸೆಂಚುರಿ ಗೌಡ!

ಕೇವಲ ಗಡ್ಡಪ್ಪ ಮಾತ್ರವಲ್ಲ, ಸೆಂಚುರಿ ಗೌಡರು ಕೂಡ ಈ ಚಿತ್ರದಲ್ಲಿ ಡಾನ್ ಆಗಿ ಬಣ್ಣ ಹಚ್ಚಿದ್ದಾರೆ.

ಗಡ್ಡಪ್ಪ V/S ಸೆಂಚುರಿ ಗೌಡ

ಈ ಹಿಂದಿನ ಚಿತ್ರಗಳಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಗಡ್ಡಪ್ಪ ಮತ್ತು ಸೆಂಚುರಿ ಗೌಡ ಈ ಚಿತ್ರದಲ್ಲಿ ಎದುರಾಳಿಗಳಾಗಿ ಅಭಿನಯಿಸಿದ್ದಾರೆ.[ಸಿನಿಮಾ ತಿಥಿ ಮಾಡ್ಬೇಡಿ ಸ್ವಾಮಿ, ತಿಥಿಯಂಥ ಸಿನಿಮಾ ಮಾಡಿ]

ಇಬ್ಬರ ಗೆಟಪ್ ಫುಲ್ ಚೇಂಜ್!

ಈ ಹಿಂದಿನ ಚಿತ್ರಗಳಲ್ಲಿ ಪಟಾಪಟಿ ಚಡ್ಡಿ ಹಾಕ್ಕೊಂಡ್, ಪಕ್ಕಾ ಹಳ್ಳಿ ಸೊಗಡಿನಲ್ಲಿದ್ದ ಇಬ್ಬರು, ಈ ಚಿತ್ರದಲ್ಲಿ ಸೂಟು ಬೂಟು ತೊಟ್ಟು ಸಿಟಿ ಸ್ಟಾರ್ ಗಳಾಗಿದ್ದಾರೆ. ಪ್ಯಾಂಟ್ ಮತ್ತು ಟಿ-ಶರ್ಟ್ ತೊಟ್ಟು ಮಾಸ್ ಹೀರೋಗಳ ಲುಕ್ ಪಡೆದುಕೊಂಡಿದ್ದಾರೆ.['ತಿಥಿ'ಯೂಟ ಹಾಕಿಸಿದ ಸೆಂಚುರಿಗೌಡ್ರು ತರ್ಲೆ ಮಾಡ್ತಾವ್ರೇ ಕಣ್ರೀ.!]

ಮಾಸ್ ಡೈಲಾಗ್ಸ್!

ಇಷ್ಟು ದಿನ ಸೆನ್ಸಾರ್ ಲೆಸ್ ಮಾತುಗಳ ಮೂಲಕ ಗಮನ ಸೆಳೆದಿದ್ದ ಗಡ್ಡಪ್ಪ ಹಾಗೂ ಸೆಂಚುರಿ ಗೌಡ, ಈ ಚಿತ್ರದಲ್ಲಿ ಔಟ್ ಅಂಡ್ ಔಟ್ ಮಾಸ್ ಡೈಲಾಗ್ ಗಳ ಮೂಲಕ ಮಿಂಚಿದ್ದಾರೆ.

ಇಬ್ಬರ ಬಾಯಲ್ಲೂ ಯಶ್, ದರ್ಶನ್ ಡೈಲಾಗ್ ಗಳು!

ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರದ ಡೈಲಾಗ್ ಗಳನ್ನ, ಗಡ್ಡಪ್ಪ-ಸೆಂಚುರಿಗೌಡ ತಮ್ಮದೇ ಆದ ಸ್ಟೈಲ್ ನಲ್ಲಿ ಹೇಳಿದ್ದಾರೆ. ಗಡ್ಡಪ್ಪ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಡೈಲಾಗ್ ಹಳೀದ್ರೆ, ಸೆಂಚುರಿ ಗೌಡ್ರು 'ಜಗ್ಗುದಾದ' ಚಿತ್ರದ ಹವಾ ಡೈಲಾಗ್ ಹೇಳಿದ್ದಾರೆ. ಇದರ ಜೊತೆ ಇನ್ನೂ ಹಲವು ಮಾಸ್ ಡೈಲಾಗ್ ಗಳು ಟ್ರೈಲರ್ ನಲ್ಲಿವೆ.

ರೋಮಿಯೋ ಅಭಿ

ವಿಶೇಷ ಅಂದ್ರೆ 'ಗಡ್ಡಪ್ಪನ ಸರ್ಕಲ್' ಚಿತ್ರದಲ್ಲಿ 'ತಿಥಿ' ಖ್ಯಾತಿಯ ಅಭಿ ಕೂಡ ಕಾಣಿಸಿಕೊಂಡಿದ್ದು, ತಮ್ಮ ರೋಮಿಯೋ ಪಾತ್ರವನ್ನ ಇಲ್ಲಿಯೂ ಮುಂದುವರೆಸಿದ್ದಾರೆ.

ನಿರ್ದೇಶಕ ಯಾರು?

ಬಿ.ಆರ್.ಕೇಶವ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪಿ.ಶೇ‍ಷಗಿರಿ ಸಂಭಾಷಣೆ ಬರೆದಿದ್ದಾರೆ. ನಾಯಕ್ ವಿವಿ ಅವರ ಸಂಗೀತ ಚಿತ್ರಕ್ಕಿದ್ದು, ತುಳಿಸಿ ರಾಮ್ ನಿರ್ಮಾಣ ಮಾಡಿದ್ದಾರೆ.[ಗಡ್ಡಪ್ಪನ ಸರ್ಕಲ್ ಟ್ರೈಲರ್ ಇಲ್ಲಿದೆ ನೋಡಿ]

English summary
Gaddappa and Century gowda starrer Kannada Movie 'Gaddappana Circle' Trailer Release. the Movie Directed by B.R.Keshav

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada