»   » 'ಉಗ್ರಂ'ನಷ್ಟೇ ನಿರೀಕ್ಷೆ ಹುಟ್ಟಿಸಿರುವ ಚಿತ್ರ 'ಗಣಪ'

'ಉಗ್ರಂ'ನಷ್ಟೇ ನಿರೀಕ್ಷೆ ಹುಟ್ಟಿಸಿರುವ ಚಿತ್ರ 'ಗಣಪ'

Posted By:
Subscribe to Filmibeat Kannada

ಹೊಸ ಪ್ರತಿಭೆಗಳ ಮತ್ತೊಂದು ಚಿತ್ರ ಸ್ಯಾಂಡಲ್ ವುಡ್ ನಲ್ಲಿ ರೆಡಿಯಾಗಿದೆ. ಒಟ್ಟು 112 ದಿನಗಳ ಚಿತ್ರೀಕರಣ ಮುಗಿಸಿಕೊಂಡು ಇದೀಗ ಮೊದಲ ಪ್ರತಿಯೊಂದಿಗೆ ಸಿದ್ಧವಾಗಿದೆ 'ಗಣಪ'. ಪ್ರಭು ಶ್ರೀನಿವಾಸ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಶೂಟಿಂಗ್ ಚೆನ್ನೈ, ಬೆಂಗಳೂರು, ಮುಂಬೈ, ಮದುರೈ, ಕಾರೈಕುಡಿಗಳಲ್ಲಿ ನಡೆದಿರುವುದು ವಿಶೇಷ.

ಪಿ 2 ಎಂಟರ್ಟೈನ್ಮೆಂಟ್ ಅಡಿಯಲ್ಲಿ ಪ್ರೇಮ್ ಹಾಗೂ ಪರಮೇಶ್ ಅವರು ನಿರ್ಮಿಸಿರುವ ಗಣಪ ಚಿತ್ರೇತರ ಚಟುವಟಿಕೆಗಳನ್ನು ಪೂರೈಸಿಕೊಂಡು ಇದೀಗ ಮೊದಲ ಪ್ರತಿಯನ್ನು ಹೊರತಂದಿದೆ. ಅಂಧರಿಗೆ ಗಡಿಯಾರವನ್ನು ನೀಡುವ ಪ್ರಶಂಸನಿಯ ವಿಚಾರದಿಂದ 'ಗಣಪ' ಚಿತ್ರದ ಧ್ವನಿ ಸುರುಳಿ ಅನ್ನು ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಲಾಯಿತು.


ಆನಂದ್ ಆಡಿಯೋ ಹೊರತಂದಿರುವ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ದೊರಕಿಸಿಕೊಂಡಿರುವ 'ಗಣಪ' ಸೆನ್ಸಾರ್ ಬಳಿ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಚಿತ್ರಕ್ಕಾಗಿ ನಾಯಕ ಸಂತೋಷ್ ಅವರು ವಿಶೇಷ ತರಬೇತಿಯನ್ನು ಮಾಡಿಕೊಂಡು ಕ್ಯಾಮರಾ ಮುಂದೆ ಬಂದಿದ್ದಾರೆ. ಪ್ರಿಯಾಂಕಾ ಚಿತ್ರದ ಕಥಾ ನಾಯಕಿ.

ನಿರ್ದೇಶಕ ಪ್ರಭು ಶ್ರೀನಿವಾಸ್ ಈ ಹಿಂದೆ 'ಜೀವ' ಸಿನಿಮಾ ನಿರ್ದೇಶನ ಮಾಡಿದವರು, 'ಗಣಪ' ಚಿತ್ರಕ್ಕೆ ಅನೇಕ ಹೊಸ ಪ್ರತಿಭೆಗಳನ್ನು ಪರಿಚಯ ಮಾಡಿದ್ದಾರೆ. 'ಉಗ್ರಂ' ಚಿತ್ರದ ನಂತರ ಕನ್ನಡ ಚಿತ್ರಪ್ರೇಮಿಗಳು ತಾಂತ್ರಿಕತೆಯ ಶ್ರೀಮಂತಿಕೆಯನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ ಎನ್ನುತ್ತಾರೆ ನಿರ್ಮಾಪಕರು.


ಪೆಟ್ರೋಲ್ ಪ್ರಸನ್ನ ಹಾಗೂ ಸುಚಿತ್ರಾ (ಡಿಸ್ಕೋ ಶಾಂತಿ ಸಹೋದರಿ) ಅವರಿಗೆ ಒಂದು ಹಾಡು ಸಹ ಈ ಚಿತ್ರದಲ್ಲಿ ಇದೆ. ಕರಣ್ ಬಿ ಕೃಪಾ ಅವರ ಸಂಗೀತ, ಶ್ರೀನಿವಾಸ್ ದೇವಸಂ ಅವರ ಛಾಯಾಗ್ರಹಣ, ಜೋನಿ ಹರ್ಷ ಅವರ ಸಂಕಲನ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ, ಡಿಫರೆಂಟ್ ಡ್ಯಾನಿ, ಮಾಸ್ ಮಾಧ, ಸ್ಟಂಟ್ ಶಿವ, ಮಹೇಶ್ ಅವರ ಸಾಹಸ, ಜಯಂತ್ ಕಾಯ್ಕಿಣಿ, ಹೃದಯಶಿವ, ಚಿನ್ಮಯಿ, ಶಿವು ಬೆರಗಿ ಅವರ ಗೀತ ಸಾಹಿತ್ಯ ಚಿತ್ರಕ್ಕೆ ಒದಗಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)
English summary
After 'Ugramm' one more Kannada movie 'Ganapa' raised an eye brow of Sandalwood movie buffs. The film directed by Prabhu Srinivas is ready with the first print to go to censor. Disco Shanti's Sister Suchitra Performs Hot Item Song for Ganapa Kannada film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada