For Quick Alerts
  ALLOW NOTIFICATIONS  
  For Daily Alerts

  ಮಧ್ಯಮ ವರ್ಗದ ಕುಟುಂಬಗಳ ಅಂತರಂಗದ ಸರ್ಚ್ ಇಂಜಿನ್ ಈ 'ಗೂಗಲ್'

  By ಜಿ.ಎಮ್.ರೋಹಿಣಿ, ಬಳ್ಳಾರಿ
  |

  ಇದು 'ಗೂಗಲ್'... ಕನ್ನಡ ಸಿನಿಮಾ. ಗೂಗಲ್ ಹೇಗೆ ಬಹುತೇಕರ ಇಂಟರ್ ನೆಟ್ ಬ್ರೌಸರ್ ಆಗಿದ್ಯೋ, ಹಾಗೇ ಈ ಸಿನಿಮಾ ಕುಟುಂಬದ ಆಗು-ಹೋಗುಗಳ ಕಥಾಹಂದರ.

  ಸಿನಿಮಾದ ನಿರ್ದೇಶಕ ಹಾಗೂ ನಾಯಕ ನಟ ವಿ.ನಾಗೇಂದ್ರ ಪ್ರಸಾದ್ ಹೇಳುವಂತೆ, ಗೂಗುಲ್, ಕೌಟುಂಬಿಕ ಕಥಾ ಹಂದರದ ಸಿನಿಮಾ. ನಮ್ಮ ಸುತ್ತಲಿನ ದೈನಂದಿನ ಸನ್ನಿವೇಶಗಳೇ 'ಗೂಗಲ್' ಸಿನಿಮಾದ ಕಥಾವಸ್ತು. 'ಗೂಗಲ್' ಸಿನಿಮಾ ಫೆ.16ರಂದು ರಾಜ್ಯಾದ್ಯಂತ 80 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

  ''ಕನ್ನಡ ಚಿತ್ರೋದ್ಯಮದಲ್ಲಿ ಕಳೆದ ಎರಡು ದಶಕಗಳಿಂದ ದುಡಿಯುತ್ತಿದ್ದೇನೆ. ನೂರಾರು ಚಿತ್ರಗಳಿಗೆ ಸಾವಿರಾರು ಹಾಡುಗಳನ್ನು ರಚಿಸಿದ್ದೇನೆ. ಐದು ಚಿತ್ರಗಳಿಗೆ ನಿರ್ದೇಶನವನ್ನು ಸಹ ಮಾಡಿದ್ದು, ಇದೇ ಮೊದಲ ಬಾರಿಗೆ ಚಿತ್ರದ ನಿರ್ದೇಶನದ ಜೊತೆಗೆ ನಾಯಕ ನಟನಾಗಿ ಅಭಿನಯಿಸಿದ್ದೇನೆ'' ಎನ್ನುತ್ತಾರೆ ವಿ.ನಾಗೇಂದ್ರ ಪ್ರಸಾದ್.

  'ಗೂಗಲ್' ಚಿತ್ರದಲ್ಲಿ ನಾಯಕಿಯಾಗಿ ಶುಭಾ ಪೂಂಜಾ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಶುಭಾ ಪೂಂಜಾ ಕೌಟುಂಬಿಕ ಜವಾಬ್ದಾರಿ ಹೊತ್ತ ಮಹಿಳೆಯ ಪಾತ್ರ ನಿರ್ವಹಿಸುತ್ತಿದ್ದಾರೆ.

  ದೀಪಕ್ ಎಂಬ ಹೊಸ ನಟನನ್ನು 'ಗೂಗಲ್' ಚಿತ್ರದ ಮೂಲಕ ಪರಿಚಯಿಸಲಾಗಿದೆ. ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿರುವ ದೀಪಕ್ ಗೆ ಅಮೃತಾ ರಾವ್ ಜೋಡಿ. ''ಸಿನಿಮಾ ಕ್ಷೇತ್ರಕ್ಕೆ ಬರುವ ಮೊದಲು ಬೀದಿ ನಾಟಕಗಳನ್ನು ಮಾಡುತ್ತಿದ್ದೆ. ರಂಗಭೂಮಿಯ ನಂಟು ಮೊದಲಿನಿಂದಲೂ ಇದೆ. ಹೀಗಾಗಿ ಸಿನಿಮಾ ನಟನೆ ಅಷ್ಟೊಂದು ಕಷ್ಟವಾಗಲಿಲ್ಲ ಅಂತಾರೆ ನಾಗೇಂದ್ರ ಪ್ರಸಾದ್.

  ನಾಯಕ ನಟಿ ಶುಭಾ ಪೂಂಜಾ ಮಾತನಾಡಿ, ಯಾವುದೇ ನಟಿಗೆ ಜನರ ಮನದಲ್ಲಿ ಬಹುಕಾಲ ಉಳಿಯುವ ಪಾತ್ರದಲ್ಲಿ ನಟಿಸಬೇಕು ಎನ್ನುವ ಹಂಬಲ ಇರುತ್ತದೆ. ಗೂಗಲ್ ಸಿನಿಮಾ ಮೂಲಕ ಅಂತಹ ನನ್ನ ಹಂಬಲ ಈಡೇರಿದೆ. ಈ ಹಿಂದೆ ಪ್ರೀತಿ, ಪ್ರೇಮ, ಮರ ಸುತ್ತುವ ಪಾತ್ರಗಳಲ್ಲಿ ನಟಿಸಿದ್ದೆ. ಆದರೆ, ಗೂಗಲ್ ಚಿತ್ರದ ನಿರ್ದೇಶಕರು ನನಗೆ ವಿಭಿನ್ನವಾದ ಪಾತ್ರ ನೀಡಿ ನನ್ನ ಇಮೇಜ್ ಬದಲಿಸುವ ಪ್ರಯತ್ನ ಮಾಡಿದ್ದಾರೆ. ಈ ಪಾತ್ರ ಬಹುಕಾಲ ಕನ್ನಡ ಪ್ರೇಕ್ಷಕರ ಮನದಲ್ಲಿ ಉಳಿಯಲಿದೆ'' ಎಂದರು.

  ನಟ ದೀಪಕ್ ಮಾತನಾಡಿ, ''ಉತ್ತಮ ಚಿತ್ರಗಳನ್ನು ಕನ್ನಡಿಗರು ನೋಡಿ ಬೆಂಬಲಿಸಬೇಕು. ಒಂದು ಉತ್ತಮ ಚಿತ್ರ ಬಿಡುಗಡೆಯಾಗಿ ಜನರಿಗೆ ತಿಳಿಯುವ ಹೊತ್ತಿಗೆ ಅದು ಚಲನಚಿತ್ರ ಮಂದಿರದಿಂದ ಎತ್ತಂಗಡಿಯಾಗಿ ಬಿಡುತ್ತದೆ. ಬಳ್ಳಾರಿಯಲ್ಲಿ ತೆಲುಗು ಭಾಷಿಕರೇ ಪ್ರಧಾನವಾಗಿರುವ ಗಡಿಭಾಗವಾಗಿದ್ದರೂ, ಇಲ್ಲಿ ಉತ್ತಮ ಕನ್ನಡ ಸಿನಿಮಾ ನೋಡುವ ಹಾಗೂ ಉತ್ತಮ ಸಿನಿಮಾಗಳನ್ನು ಪ್ರೋತ್ಸಾಹಿಸುವ ಅಭಿರುಚಿ ಈ ಭಾಗದ ಜನರಲ್ಲಿದೆ. ಇದು ಶ್ಲಾಘನೀಯ'' ಎಂದರು.

  English summary
  V.Nagendra Prasad directorial, Shubha Poonja starrer Kannada Movie 'Google' to release on February 16th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X