»   » ನಾಳೆ ತೆರೆಗೆ ಅಪ್ಪಳಿಸಲಿದೆ 'ಗೂಳಿಹಟ್ಟಿ' ಚಿತ್ರ

ನಾಳೆ ತೆರೆಗೆ ಅಪ್ಪಳಿಸಲಿದೆ 'ಗೂಳಿಹಟ್ಟಿ' ಚಿತ್ರ

Posted By:
Subscribe to Filmibeat Kannada

ಗಾಂಧಿನಗರದಲ್ಲಿ ಹೊಸಬರ ಚಿತ್ರ ಹೆಚ್ಚು ಕಾಲ ಉಳಿಯೋದು ಕಷ್ಟ. ಆದ್ರೆ ಕೆಲವೊಂದು ಚಿತ್ರಗಳು ಕ್ಲಿಕ್ ಆಗಿರುವ ಉದಾಹರಣೆ ಇದೆ. ಈಗ ಇನ್ನೊಂದು ಹೊಸಬರ ಚಿತ್ರ ತೆರೆ ಕಾಣೋದಕ್ಕೆ ರೆಡಿ ಆಗಿದೆ. ಆ ಚಿತ್ರವೇ 'ಗೂಳಿಹಟ್ಟಿ'.

ಶಶಾಂಕ್ ರಾಜ್ ನಿರ್ದೇಶನದಲ್ಲಿ ಇದೇ ವಾರ ತೆರೆಗೆ ಬರಲು ಸಿದ್ದವಾಗಿರುವ 'ಗೂಳಿಹಟ್ಟಿ' ಪವರ್ ಫುಲ್ ಶೀರ್ಷಿಕೆ ಇರುವ ಮಾಸ್ ಚಿತ್ರ. ಒಂದೂವರೆ ವರ್ಷಗಳ ಹಿಂದೆ ಲಾಂಚ್ ಆಗಿದ್ದ ಈ ಚಿತ್ರ, ಶೂಟಿಂಗ್ ಮುಗಿಸಿ ಇದೀಗ ತೆರೆ ಮೇಲೆ ಬರುತ್ತಿದೆ.

Kannada Movie 'Goolihatti' releasing on June 26th

ಚಿತ್ರದುರ್ಗ ಜಿಲ್ಲೆಯ ಸಣ್ಣ ಊರು 'ಗೂಳಿಹಟ್ಟಿ'. ಅಲ್ಲಿಂದ ಬೆಂಗಳೂರಿಗೆ ಬರುವ ಚಿತ್ರದ ನಾಯಕ ಮತ್ತು ಕರ್ನಾಟಕದ ಇತರೆ ಕಡೆಗಳಿಂದ ಬಂದಿರುವ ನಾಲ್ಕು ಜನ ಗೆಳೆಯರ ಮಧ್ಯೆ ನಡೆಯುವ ಕಥೆ 'ಗೂಳಿಹಟ್ಟಿ'. ಹಳ್ಳಿಯಿಂದ ಪಟ್ಟಣಕ್ಕೆ ಬಂದು ಸೇರುವ ಹುಡುಗರ ವ್ಯಥೆಯೇ ಚಿತ್ರದ ಕಥೆ.

ಈ ಚಿತ್ರದ ವಿಶೇಷ ಏನಪ್ಪಾ ಅಂದ್ರೆ, ಕರ್ನಾಟಕದ ಇತಿಹಾಸದಲ್ಲಿ ಬಹಳ ಪ್ರಸಿದ್ಧಿ ಪಡೆದುಕೊಂಡಿರುವ ಬಳ್ಳಾರಿಯ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಸುಮಾರು 20 ಲಕ್ಷ ಭಕ್ತಾದಿಗಳ ಸಮ್ಮುಖದಲ್ಲಿ 'ಗೂಳಿಹಟ್ಟಿ'ಯ ಪ್ರಮುಖ ಸನ್ನಿವೇಶ ಚಿತ್ರೀಕರಿಸಲಾಗಿದೆ.

ಚಿತ್ರದ ನಾಯಕನ ಪಾತ್ರದಲ್ಲಿ ಪವನ್ ಸೂರ್ಯ ಮಿಂಚಿದ್ದಾರೆ. ಇವರಿಗೆ ನಾಯಕಿಯಾಗಿ ತೇಜಸ್ವಿನಿ ಬಣ್ಣ ಹಚ್ಚಿದ್ದಾರೆ. ತಾರಾಗಣದಲ್ಲಿ ದೊಡ್ಡಣ್ಣ, ಆದಿ ಲೋಕೇಶ್, ಸುಧಾ ಬೆಳವಾಡಿ, ರಂಗಾಯಣ ರಘು, ಅವಿನಾಶ್, ಶರತ್ ಲೋಹಿತಾಶ್ವ ಮುಂತಾದವರು ಕಾಣಿಸಿಕೊಂಡಿರುವ ಈ ಚಿತ್ರ ನಾಳೆ ತೆರೆಗೆ ಅಪ್ಪಳಿಸುತ್ತಿದೆ. ವೀಕೆಂಡ್ ನಲ್ಲಿ ನೀವು ಫ್ರೀ ಇದ್ರೆ ಒಮ್ಮೆ 'ಗೂಳಿಹಟ್ಟಿ'ಗೆ ವಿಸಿಟ್ ಹಾಕಿ.

English summary
Kannada movie 'Goolihatti' is all set to release tomorrow (26th June). The Movie features Pawan Surya and Tejaswini as lead, Directed by Shashank Raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada