For Quick Alerts
  ALLOW NOTIFICATIONS  
  For Daily Alerts

  ಹಾಫ್ ಸೆಂಚುರಿ ಬಾರಿಸಿದ ಹೊಸಬರ 'ಗುಳ್ಟು'

  By Bharath Kumar
  |

  ಹೊಸಬರ ಸಿನಿಮಾಗಳು ಯಶಸ್ಸು ಕಾಣುವುದು ಅಪರೂಪ. ಅಲ್ಲೊಂದು ಇಲ್ಲೊಂದು ಚಿತ್ರ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸುತ್ತೆ. ಅಂತಹ ಸಿನಿಮಾಗಳ ಪೈಕಿ ಸದ್ದಿಲ್ಲದೇ ಗೆದ್ದು ಬೀಗಿದ ಚಿತ್ರ 'ಗುಳ್ಟು'.

  ಆಧುನಿಕ ಜಗತ್ತಿನಲ್ಲಿ ಮನುಷ್ಯರು ಎಷ್ಟರ ಮಟ್ಟಿಗೆ ತಂತ್ರಜ್ಞಾನವನ್ನ ಅವಲಂಬನೆ ಮಾಡಿಕೊಂಡಿದ್ದಾರೆ. ಅದನ್ನ ಹೇಗೆ ಉಪಯೋಗ ಮತ್ತು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನ ಈ ಸಿನಿಮಾದಲ್ಲಿ ತೋರಿಸಲಾಗಿತ್ತು.

  ಮನರಂಜನೆಯ ಜೊತೆಗೆ ಜಾಗೃತಿ ಮೂಡಿಸಿದ 'ಗುಳ್ಟು' ಚಿತ್ರಕ್ಕೆ ಎಲ್ಲರಿಂದಲೂ ಮೆಚ್ಚಗೆ ಸಿಕ್ಕಿತ್ತು. ಸಿನಿ ಅಭಿಮಾನಿಗಳು, ಸಿನಿ ತಾರೆಯರು ಎಲ್ಲರೂ ಚಿತ್ರವನ್ನ ಒಪ್ಪಿಕೊಂಡು, ಮೆಚ್ಚಿಕೊಂಡರು. ಅದರ ಪರಿಣಾಮ ಸಿನಿಮಾ ಹಾಫ್ ಸೆಂಚುರಿ ಬಾರಿಸಿದೆ.

  ಚಿತ್ರ ವಿಮರ್ಶೆ: ಸಾಮಾನ್ಯದವನಲ್ಲ ಈ 'ಗುಳ್ಟು'!ಚಿತ್ರ ವಿಮರ್ಶೆ: ಸಾಮಾನ್ಯದವನಲ್ಲ ಈ 'ಗುಳ್ಟು'!

  ಹೌದು, ಮಾರ್ಚ್ 30 ರಂದು ಬಿಡುಗಡೆಯಾಗಿದ್ದ ಸಿನಿಮಾ ಇನ್ನು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ಗುಳ್ಟು' ಸಿನಿಮಾದ ಯಶಸ್ಸು ನೋಡಿದ ಕೆಲವು ನಿರ್ಮಾಪಕರು 'ಗುಳ್ಟು' ಚಿತ್ರವನ್ನ ಮಲಯಾಳಂ ಮತ್ತು ತಮಿಳಿನಲ್ಲಿ ರೀಮೇಕ್ ಮಾಡಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

  ಜನಮನ ಗೆದ್ದ 'ಗುಳ್ಟು' ಚಿತ್ರಕ್ಕೆ ಬಂತು ಆಫರ್.! ಜನಮನ ಗೆದ್ದ 'ಗುಳ್ಟು' ಚಿತ್ರಕ್ಕೆ ಬಂತು ಆಫರ್.!

  ನವೀನ್ ಶಂಕರ್ ಮತ್ತು ಸೋನು ಗೌಡ ಅಭಿನಯದ 'ಗುಳ್ಟು' ಚಿತ್ರವನ್ನ ಜರ್ನಾಧನ್ ಚಿಕ್ಕಣ್ಣ ನಿರ್ದೇಶನ ಮಾಡಿದ್ದಾರೆ. ಅವಿನಾಶ್, ರಂಗಾಯಣ ರಘು ಅಂತಹ ಕಲಾವಿದರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

  English summary
  Kannada movie gultoo complete 50 days. the movie directed by janardhan and features naveen shankar, sonu gowda, avinash, rangayana raghu and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X